ನೀವು ಪೋಸ್ಟ್ ಆಫೀಸಲ್ಲಿ ಖಾತೆ ಹೊಂದಿದ್ದೀರ? ಅಥವಾ ತೆರೆಯ ಬೇಕೆಂಬ ಯೋಚನೆ ನಿಮ್ಮಲ್ಲಿದೆಯಾ? ಹಾಗಾದ್ರೆ ನೀವು ಈ ಸಿಹಿ ಸುದ್ದಿಯನ್ನು ಓದಲೇ ಬೇಕು.
ಪೋಸ್ಟ್ ಆಫೀಸಲ್ಲಿ ಖಾತೆ ಹೊಂದಿದ್ದಲ್ಲಿ ಯಾವ್ದೇ ರೀತಿ ವರ್ಗಾವಣೆ ಅವಕಾಶ ಇರಲಿಲ್ಲ. ನಿಮ್ಮ ಖಾತೆಯಿಂದ ಬೇರೆ ಬ್ಯಾಂಕ್ ಖಾತೆಗೆ , ಬ್ಯಾಂಕ್ ಖಾತೆಯಿಂದ ನಿಮ್ಮ ಅಂಚೆ ಖಾತೆಗೆ ಹಣ ವರ್ಗಾವಣೆಗೆ ಅವಕಾಶ ಇರ್ಲಿಲ್ಲ.
ಈಗ ಪೋಸ್ಟ್ ಆಫೀಸ್ ಡಿಜಿಟಲ್ ಆಗಿದ್ದು, ಮೇ ತಿಂಗಳಿಂದ ಪೋಸ್ಟ್ ಆಫೀಸ್ ಖಾತೆಗೆ , ಬೇರೆ ಖಾತೆಗಳಿಗೆ ಹಣ ವರ್ಗಾಯಿಸಬಹುದು. ದೇಶದ 1.55ಲಕ್ಷ ಅಂಚೆ ಕಚೇರಿಗಳಿಗೆ ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ ಲಿಂಕ್ ಮಾಡಲು ಹೇಳಿದೆ. ಬ್ಯಾಂಕ್ ಗಳಲ್ಲಿನ ಆರ್ ಟಿ ಜಿಎಸ್, ನೆಫ್ಟ್ ಮತ್ತಿತರ ಸೇವೆಗಳನ್ನು ಅಂಚೆ ಕಚೇರಿಯಲ್ಲಿ ಪಡೆಯಬಹುದು.