ಮನುಷ್ಯ ತನ್ನ ಪೂರ್ತಿ ಬಲದೊಂದಿಗೆ ಯಾವುದೇ ಕೆಲಸವನ್ನು ಮಾಡಿದ್ರೂ,ಎಂತಹದೇ ಅಡ್ಡಿ ಆತಂಕಗಳೆದುರಾದ್ರೂ ಆತ ತನ್ನ ಕೆಲಸವನ್ನು ಖಂಡಿತವಾಗಿಯೂ ಪೂರ್ಣಗೊಳಿಸದೆ ಇರಲಾರ ಎಂದು ತಿಳಿದವರು ಅನ್ನುತ್ತಾರೆ.ಈ ಪ್ರಪಂಚದಲ್ಲಿ ಮನುಷ್ಯನಿಗೆ ಸಾಧಿಸಲು ಅಸಾಧ್ಯವಾದ ಯಾವುದೇ ಕೆಲಸವಿಲ್ಲ.ಯಾರು ಸೋಂಬೇರಿಗಳಾಗಿರುತ್ತಾರೋ ಅವರುಗಳೇ ತಮ್ಮಸಮಯ-ಸಂದರ್ಭ ಸರಿಯಾಗಿಲ್ಲವೆಂಬುದಾಗಿ ಯಾವಾಗಲೂ ಶಪಿಸುತ್ತಿರುತ್ತಾರೆ.ಪ್ರತೀ ಬಾರಿಯೂ ಜನರು ತಮ್ಮ ಸೋಲಿಗೆ ತಮ್ಮನ್ನು ತಾವೇ ಶಪಿಸುತ್ತಿರುವುದನ್ನು ನೋಡುತ್ತೇವೆ.ಅಷ್ಟೇ ಅಲ್ಲ ಅಂತಹವರು ತನ್ನನ್ನು ಯಾಕೆ ಒಬ್ಬಹೆಸರುವಾಸಿ ವ್ಯಕ್ತಿಯನ್ನಾಗಿ ನೀನು ಮಾಡಲಿಲ್ಲ ದೇವರೇ? ಎಂದು ದೇವರನ್ನೂ ದೂರುತ್ತಿರುತ್ತಾರೆ.ಅಯ್ಯೋ!ವಿಪರ್ಯಾಸ ಕಣ್ರಿ!ಇಂತಹವರ ಸೋಂಬೇರಿತನದ ಬುದ್ದಿಗೆ ಅದೆಷ್ಟು ಸಾಷ್ಟಾಂಗ ಹೇಳಬೇಕೋ ಗೊತ್ತಾಗ್ತಿಲ್ಲ.ಅದೆಲ್ಲ ಸರಿ ಬಿಡಿ!ಇಂತಹವರ ಬಗ್ಗೆ ಹೇಳಿ ನಾವ್ಯಾಕೆ ನಿಮ್ಮ ತಲೆ ಕೆಡ್ಸೋಣ! ಅಲ್ಲವೇ?ನಾವು ಹೇಳಬೇಕಾಗಿರೋ ವ್ಯಕ್ತಿನೇ ಬೇರೆ.ಅವ್ರ ಬಗ್ಗೆ ಹೇಳೋಕೆ ಬರೀ ಮಾತುಗಳಿಂದ ಸಾಧ್ಯವಿಲ್ಲ,ಬನ್ನಿ ನೀವೇ ನೋಡುವಿರಂತೆ.
ಹುಟ್ಟಿನಿಂದಲೇ ಕೈಕಾಲುಗಳೆರಡೂ ಇಲ್ಲದ ಈ ವ್ಯಕ್ತಿಯೇ ನಿಕ್ ಉಜಿಸಿಕ್.ಈತನಿಗೆ ಹುಟ್ಟುವಾಗಲೇ ಎಮೀಲಿಯಾ ಸಿಂಡ್ರೋಮ್ ಅನ್ನೋ ಕಾಯಿಲೆ ಜೊತೆಗೇ ಅಂಟಿಕೊಂಡಿತ್ತು.ಇದರ ಕಾರಣದಿಂದ ಅವನಿಗೆ ಕೈಯೂ ಇಲ್ಲ,ಕಾಲೂ ಇಲ್ಲ,ಈ ಕಾಯಿಲೆಗೊಳಗಾಗೋವ್ರು ತುಂಬಾ ಕಡಿಮೆ ಅನ್ನಬಹುದು.ಈ ಕಾಯಿಲೆಗೊಳಗಾದ ವ್ಯಕ್ತಿಯು ಕೈ ಕಾಲುಗಳಿಲ್ಲದೇ ಹುಟ್ಟುತ್ತಾನೆ.
ಆದರೆ ಆರಂಭದ ದಿನಗಳಲ್ಲಿ ನಿಕ್ ಗೆ ತನ್ನ ಈ ಅಂಗ ವೈಕಲ್ಯದಿಂದ ಭಾರೀ ತೊಂದರೆ ಅನುಭವಿಸಬೇಕಾಗಿ ಬಂತು.ಜೀವನ ಯಾಕಾದ್ರೂ ಬೇಕಾಗಿದ್ಯೋ ಅಂತಲೂ ಅನ್ನಿಸುತ್ತಿತ್ತಂತೆ,ನಿಜ ಅನ್ನಿಸದಿರುತ್ತದೆಯೇ?ಎಂತೆಂತಹ ವಿದ್ಯಾವಂತ,ಸುಸಂಸ್ಕೃತ,ಕೈಕಾಲು ಹಾಗೂ ಎಲ್ಲಾ ಬಾಡಿ ಪಾರ್ಟ್ಸ್ಗಳೂ ನೆಟ್ಟಗಿದ್ರೂ ಆತ್ಮಹತ್ಯೆ ಮಾಡಿಕೊಳ್ಳೊ ಜನಗಳಿರೋವಾಗ ಈ ವ್ಯಕ್ತಿಗೆ ಅನ್ಸಿದ್ರಲ್ಲಿ ಯಾವ ತಪ್ಪೂ ಇಲ್ಲ ಬಿಡಿ.ಆದ್ರೆ! ಆತ ಸಾಯಲಿಲ್ಲ!ತನ್ನನ್ನು ತಾನು ಅದೇ ರೂಪದಲ್ಲಿ ಸ್ವೀಕರಿಸುತ್ತಾ ಹೋದ.17 ನೇ ವಯಸ್ಸಿನಲ್ಲಿ ತನ್ನಲ್ಲಿ ತಾನೇ ಬದಲಾವಣೆಯನ್ನು ತರಲು ಆರಂಭಿಸಿದ,ಸಕಾರಾತ್ಮಕ ವಿಚಾರಗಳ ಮಹಾ ಪೂರವನ್ನೇ ತನ್ನ ಪುಟ್ಟ ಮಿದುಳಿನಲ್ಲಿ ತುಂಬಲಾರಂಭಿಸಿದ.ಇದರ ಪರಿಣಾಮವೇ ಈತ ಈಗ ಒಬ್ಬ ಪ್ರಭಾವೀ ಭಾಷಣಕಾರ (ಮೋಟಿವೇಷನಲ್ ಸ್ಪೀಕರ್)ಆಗಿದ್ದಾನೆ.ಪ್ರಪಂಚದೆಲ್ಲೆಡೆಯ ಜನರಲ್ಲಿ ಒಂದು ಪ್ರೇರಣಾ ಶಕ್ತಿಯ ಸಂಚಲನವನ್ನು ಇವರು ಮಾಡುತ್ತಿದ್ದಾರೆ.
ಅವರು ಜನ್ರಿಗೆ ಜೀವನದಲ್ಲಿ ಬದುಕೋ ಪಾಠ ಹೇಳಿಕೊಡುತ್ತಿದ್ದಾರೆ.ತನ್ನ ಬಗೆಗಿನ ಅನೇಕ ಪುಸ್ತಕಗಳನ್ನೂ ಬರೆದಿದ್ದಾರೆ.
ಹಾಂ! ಇವರ ಬಗ್ಗೆ ಇನ್ನೂ ಒಂದು ವಿಷ್ಯ ಹೇಳಲೇ ಇಲ್ಲ! ಇವ್ರ ಎಡ ಬದಿಯ ಸೊಂಟದ ಕೆಳಗಿರೋ ಭಾಗದಲ್ಲಿ ಒಂದು ಸಣ್ಣ ಕಾಲು ಇದೆ.ಇದರ ಬಲದ ಮೇಲೆ ಇವ್ರು ತನ್ನ ಇಡೀ ದೇಹವನ್ನು ಬ್ಯಾಲೆನ್ಸ್ ಮಾಡುತ್ತಾರೆ.ಇದರ ಆಸರೆಯೊಂದಿಗೆ,ಒಬ್ಬ ಸಾಧಾರಣ ವ್ಯಕ್ತಿ ಮಾಡುವ ತನ್ನ ಎಲ್ಲಾ ಕೆಲಸವನ್ನೂ ಇವರು ಮಾಡುತ್ತಾರೆ.
ಮನುಷ್ಯನ ಕೆಲವು ಕ್ಷಣಗಳ ಮನಸ್ಸಿನ ದುರ್ಬಲತೆಯೇ ಈ ಆತ್ಮಹತ್ಯೆಯಂತಹ ಪರಿಸ್ಥಿತಿಗೆ ಕಾರಣ.ಅಂತಹ ಕ್ಷಣಗಳನ್ನು ನಾವು ಮೆಟ್ಟಿ ನಿಂತಲ್ಲಿ ಎಂತಹ ವ್ಯಕ್ತಿಗಾದರೂ ಜೀವನದಲ್ಲಿ ಯಶಸ್ಸು ಖಂಡಿತ.ಇದನ್ನು ಅತ್ಮಹತ್ಯೆ ಮಾಡಿದ ಎಂತೆಂತಹ ವ್ಯಕ್ತಿಗಳೇ ತಿಳ್ಕೊಳ್ಳಿಲ್ಲ,ಬದಲಾಗಿ ತನ್ನಲ್ಲಿ ಏನೂ ಇಲ್ಲದಿದ್ರೂ ಎಲ್ಲವೂ ಇದೆ ನಾನೆಲ್ಲವನ್ನೂ ಮಾಡಬಲ್ಲೆ ಎಂಬುದಾಗಿ ತೋರಿಸಿಕೊಟ್ಟ ಈ ವ್ಯಕ್ತಿ ನಮಗೆಲ್ಲರಿಗೂ ಒಂದು ದಾರಿ ದೀಪ!!!
- ಸ್ವರ್ಣಲತ ಭಟ್
POPULAR STORIES :
ಸಲ್ಲು ವೆಡ್ಸ್ ಲೂಲಿಯಾ… ಕೊಹ್ಲಿ ವೆಡ್ಸ್ ಅನುಷ್ಕಾ….! ಇದಕ್ಕೆಲ್ಲಾ ಕಾರಣ ಸುಲ್ತಾನ್ ಚಿತ್ರ
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!
ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!