ಇವರಷ್ಟು ಗ್ರೇಟ್ ಟೀಚರ್ ನೋಡಿರೋಕೆ ಚಾನ್ಸೇ ಇಲ್ಲ..!

Date:

ಪ್ರಪಂಚವನ್ನು ಬದಲಾಯಿಸಲು ಬಳಸಬಹುದಾದ ಪ್ರಬಲ ಅಸ್ತ್ರ ಯಾವುದು ಗೊತ್ತಾ? “ಶಿಕ್ಷಣ” ನಮ್ ಇಡೀ ಜಗತ್ತನ್ನೇ ಬದಲಾಯಿಸಲು ಬಳಸಿಕೊಳ್ಳ ಬಹುದಾದ ಸಾಧನ! ಅಂತ ನೆಲ್ಸೆನ್ ಮಂಡೇಲಾ ಹೇಳ್ತಾರೆ! ಹೌದು, ಅವ್ರ ಮಾತು ನೂರಕ್ಕೆ ನೂರರಷ್ಟು ಸತ್ಯ! ಸರಿಯಾದ ಶಿಕ್ಷಣ ನೀಡಲು ಒಳ್ಳೆ ಶಿಕ್ಷಕ ಬೇಕಲ್ವಾ? ಒಬ್ಬ ಶಿಕ್ಷಕ ಮನಸ್ಸು ಮಾಡಿದ್ರೆ ಮಕ್ಕಳನ್ನು ಹೇಗೆ ಬೇಕಾದ್ರು ಬದಲಾಯಿಸ್ತಾನೆ! ಒಂದೊಳ್ಳೆ ಶಿಕ್ಷಕ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ರೆ ಅದರಿಂದ ಒಂದು ಸಮಾಜ ಬದಲಾಗುತ್ತೆ! ಹಂತ ಹಂತವಾಗಿ ಗ್ರಾಮ, ತಾಲ್ಲೂಕು, ಜಿಲ್ಲೆ, ರಾಜ್ಯ, ದೇಶ ನಂತರದಲ್ಲಿ ಇಡೀ ಜಗತ್ತೇ ಬದಲಾಗುತ್ತೆ! ಎಲ್ಲದಕ್ಕಿಂತ ಮುಖ್ಯವಾಗಿ ಶಿಕ್ಷಕ ಮಕ್ಕಳಿಗೆ ಮೊಟ್ಟ ಮೊದಲಿಗೆ ಹೇಳಿ ಕೊಡಬೇಕಾದುದು “ಸಮಯ ಪಾಲನೆ”! ಸ್ನೇಹಿತ್ರೆ ಈ ಸಮಯ ಪಾಲನೆ ಅಥವಾ ಟೈಮ್ ಸೆನ್ಸ್ ಇದೆಯಲ್ಲಾ ನಮ್ಮನ್ನಾ  ತುಂಬಾ.. ಎತ್ತರಕ್ಕೆ ಕೊಂಡೊಯ್ಯುತ್ತೆ! ಮಕ್ಕಳಿಗೆ ಸಮಯ ಪಾಲನೆ ಕಲಿಸುವ ಶಿಕ್ಷಕ ಕೂಡ ಅದನ್ನು ಅನುಸರಿಸಲೇ ಬೇಕಲ್ಲವೇ? ಹೌದು, ಅಂತೀರಾ ಅಲ್ವಾ? ಆದ್ರೆ ಎಷ್ಟು ಜನ ಶಿಕ್ಷಕರು ಶಾಲೆಗೆ ಗೈರು ಆಗದೇ, ಅಥವಾ ಸಮಯಕ್ಕೆ ಸರಿಯಾಗಿ ಬರ್ತಾರೆ? ನಿಮ್ಗೆ ಅಂತವ್ರು ಎಷ್ಟು ಜನ ಗೊತ್ತು? ಸ್ವಲ್ಪ ಹೇಳ್ತೀರಾ?
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಅದನ್ನ ಬಿಟ್ಟಾಕಿ “ಶಿಕ್ಷಕ” ಅನ್ನೋ ವೃತ್ತಿನ ಮಾತ್ರ ನೋಡಿದ್ರೆ, ಒಂದ್ ಥರಾ ಹ್ಯಾಪಿ ಲೈಫು! ಕೆಲವ್ರಿಗಂತೂ ಪುಕ್ಕಟೆ ಸಂಬಳ ಕೊಟ್ಟಂಗೆ ಆಗ್ತೈತಿ!
ಆದ್ರೆ ಈ ವೃತ್ತಿಯಲ್ಲಿ ಎಲ್ಲರೂ ಬೇಕಾಬಿಟ್ಟಿ ಕೆಲಸ ಮಾಡಿ, ಪುಕ್ಕಟೆ ಸಂಬಳ ತಗಳಲ್ಲ! ನಮ್ ಸುತ್ತಾ ಮುತ್ತಾನೇ ಆದರ್ಶ ಶಿಕ್ಷಕರು ಎಷ್ಟೋ ಜನ ಇದ್ದಾರೆ! ಅವ್ರಿಗೆ ಕೈ ಮುಗಿದು ನಮಿಸಲೇ ಬೇಕು! ಅವ್ರ ಸೇವೆ ನಿಜಕ್ಕೂ ಸ್ಮರಣೀಯ! ಆದ್ರೆ ಕೆಲವ್ರು ಶಿಕ್ಷಕರು ಇರ್ತಾರೆ ನೋಡಿ ಸಾರ್, ನಿಮ್ಗು ಅಂಥವ್ರು ಗೊತ್ತಿರ್ಬಹುದು! ಶುದ್ಧ ಸೋಮಾರಿಗಳು! ಸಮಯಕ್ಕೆ ಸರಿಯಾಗಿ ಶಾಲೆಗೇ ಬರಲ್ಲ! ಇನ್ನೇನು ಮಕ್ಕಳಿಗೆ ಪಾಠ ಮಾಡ್ತಾರೆ ಸ್ವಾಮಿ! ಹಳ್ಳಿ ಶಾಲೆ ಆದ್ರಂತೂ ಮುಗ್ದೇ ಹೋಯ್ತು, ಹತ್ರದ ಪೇಟೆಲಿ ಮನೆ ಮಾಡ್ಕೊಂಡು ಇರ್ತಾರೆ! ಎಂಟು ಗಂಟೆಗೆ ಎದ್ದು, 11ಗಂಟೆಗೋ 12 ಗಂಟೆಗೋ ಶಾಲೆಗೆ ಬಂದು, ಮೂರುವರೆ-ನಾಲ್ಕುಗಂಟೆಗೆ ಮನೆಗೆ ಹೋಗೋ ಮಾಸ್ತರರೂ ಇದ್ದಾರೆ! ಆದ್ರೆ ಸಮಯಕ್ಕೆ ಸರಿಯಾಗಿ ಬಂದು, ಮಕ್ಕಳಿಗೆ ಪಾಠ ಮಾಡುವ ಗೌರವಾನ್ವಿತ ಶಿಕ್ಷಕರೂ ಸಹ ನಮ್ಮ ಸುತ್ತ ಮುತ್ತ ಇದ್ದಾರೆ! ಅಂತ ಗಣ್ಯ ಶಿಕ್ಷಕರಲ್ಲೇ ಅತೀ ಗಣ್ಯರಾದ, ನಿಜಕ್ಕೂ ಮೆಚ್ಚಲೇ ಬೇಕಾದ ಶಿಕ್ಷಕರೊಬ್ಬರು ಕೇರಳಾದಲ್ಲಿದ್ದಾರೆ! ಅವರೇ ಎ ಟಿ ಅಬ್ದುಲ್ ಮಲ್ಲಿಕ್!
ಇವ್ರು ಸ್ಟೋರಿ ಹೇಳ್ತೀನಿ ಕೇಳಿ! ಎ ಟಿ ಅಬ್ದುಲ್ ಮಲ್ಲಿಕ್, ಕೇರಳಾದ ಮಾಲಪ್ಪುರಂ ಜಿಲ್ಲೆಯ ಪಂಡಿನ್ಜತ್ತುಮುರಿಯ ಮುಸ್ಲೀಂ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ! 1992ನೇ ಇಸವಿಯಿಂದ ಅದೇ ಶಾಲೆಯಲ್ಲಿ ಪಾಠ ಮಾಡ್ತಾ ಇದ್ದಾರೆ! ಬೆಳಿಗ್ಗೆ ಎದ್ದು, ಎರಡೆರಡು ಬಸ್ಸು ಚೇಂಜ್ ಮಾಡ್ಕೊಂಡು, ಮತ್ತೆರಡರು ಕಿಲೋಮೀಟರ್ ನಡೆದುಕೊಂಡು ಬರುವಷ್ಟರಲ್ಲಿ ತುಂಬಾ ತಡವಾಗುತ್ತಂತೆ! ಹೆಚ್ಚು ಕಡಿಮೆ 12 ಕಿ.ಮೀ ಜರ್ನಿ! ಎರಡು ಬಸ್ಸು ಹತ್ತಿ ಇಳಿಯೋದಲ್ದೆ ಎರಡು ಕಿಲೋಮೇಟರ್ ವಾಕ್ ಬೇರೆ ಮಾಡ್ಬೇಕು! ಮನೆಯಿಂದ ಶಾಲೆಗೆ ಬರಲಿಕ್ಕೆ ಮೂರ್ ಗಂಟೆ ಬೇಕು! ಬಸ್ ಮಿಸ್ ಆಗ್ಲಿ ಆಗ್ದೇ ಇರ್ಲಿ ಸರಿಯಾದ ಟೈಮಿಗಂತೂ ಶಾಲೆಗೆ ಬರಕ್ಕೆ ಆಗಲ್ಲ! ಆದ್ರಿಂದ ಇವ್ರು ಏನ್ ಮಾಡ್ತಾರೆ ಗೊತ್ತೇ? ಹೊಲಸು ನೀರನಲ್ಲಿ ಈಜಿ ಶಾಲೆಗೆ ಬರ್ತಾರೆ!
ಏನು? ಹೊಲಸು ನೀರಿನಲ್ಲಿ ಈಜಿ ಶಾಲೆಗೆ ಬರ್ತಾರ? ಹೌದು, ಸಾರ್ “ಕಾದಲುಂದಿ ಪುಜ್ಹಾ” ನದಿ ದಾಟಿ ಬಂದ್ರೆ ಶಾಲೆಗೆ 10-15 ನಿಮಿಷದಲ್ಲಿ ಬರ್ಬುದಂತೆ! ಈ ನದಿಯೋ ಹೊಲಸೆದ್ದು ಹೋಗಿದೆಯಂತೆ! ಸಿಕ್ಕಾಪಟ್ಟೆ ಗಲೀಜು! ಈ ಹೊಲಸು ನೀರಿಗೆ ಇಳಿದರೆ, ಕುತ್ತಿಗೆವರೆಗೆ ನೀರು ಬರುತ್ತೆ! ಮಲ್ಲಿಕ್, ಸರಿಯಾದ ಸಮಯಕ್ಕೆ ಶಾಲಗೆ ಬರ್ಬೇಕು ಅಂತ ಇದೇ ಕೊಳಚೆ ನೀರಲ್ಲಿ ಈಜ್ತಾರೆ! ಗ್ರೇಟ್ ಅಲ್ವೇನ್ರೀ? ಅಯ್ಯೋ ನಿಧಾನ ಹೋದ್ರೆ ಸರಿ, ಲೇಟ್ ಆದ್ರೆ ಏನಂತೆ! ಮಕ್ಕಳು ಆಟ ಆಡ್ತಾ ಇರ್ತಾರೆ ಅಂತ ಎಷ್ಟೊತ್ತಿಗಾಯ್ತ ಅಷ್ಟೊತ್ತಿಗೆ ಶಾಲೆಗೆ ಬರೋ ಟೀಚರ್ಸೇ ಹೆಚ್ಟಿರುವಾಗ, ಈಜಿಕೊಂಡು, ಅದೂ ಕೊಳಚೆ ನೀರನಲ್ಲಿ ಈಜಿ ಯಾರ್ರೀ ಬರ್ತಾರೆ! ಇಷ್ಟೆಲ್ಲಾ ರಿಸ್ಕ್ ತಗ್ಗೊಂಡು ಶಾಲೆಗೆ ಹೋಗೋಕ್ಕಿಂತ, ನಿಧಾನ ಶಾಲೆಗೆ ಹೋದ್ರೆ ಆಯ್ತು, ಯಾರಾದ್ರು ಕೇಳಿದ್ರೆ ಬಸ್ಸಿಲ್ಲ ಅಂದ್ರೆ ಮುಗ್ದೇ ಹೋಗುತ್ತೆ! ಆದ್ರೆ ಮಕ್ಕಳಿಗೆ ಮೋಸ ಆಗ್ಬಾರ್ದು, ತಗೋಳ ಸಂಬಳಕ್ಕೆ ನ್ಯಾಯ ಒದಗಿಸ್ಬೇಕು ಅಂತಾ ಈ ರೀತಿ ಈಜ್ಕೊಂಡು ಬರೋ ಶಿಕ್ಷಕರು ಎಲ್ರೀ ಇದ್ದಾರೆ! ಮಲ್ಲಿಕ್ “ಸೂಪರ್” ಸಾರ್!
ಸೊಂಟಕ್ಕೆ ಟ್ಯೂಬ್ ಹಾಕಿಕೊಂಡು, ಒಂದ್ ಕೈಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಎತ್ತಿಕೊಂಡು, ಕನ್ನಡಕ ಹಾಕಿಕೊಂಡು ಒಂದೇ ಕೈಯಲ್ಲಿ ಈಜ್ತಾ ಬರ್ತಾರೆ ಸಾರ್! ಪ್ಲಾಸ್ಟಿಕ್ ಬ್ಯಾಗಲ್ಲಿ ಒಳ್ಳೆ ಬಟ್ಟೆ ಇಟ್ಕೊಂಡ್ ಇರ್ತಾರೆ! ನದಿ ದಾಟಿದ್ ಮೇಲೆ, ಮೈ-ಕೈ ತೊಳ್ಕಂಡು, ಡ್ರೆಸ್ ಚೇಂಜ್ ಮಾಡ್ಕೊಂಡು ಕ್ಲಾಸ್ಗೆ ಹೋಗ್ತಾರೆ! ನದಿ ದಾಟೋಕೆ ಹತ್ತು ನಿಮಿಷ ಬೇಕಾಗುತ್ತೆ, ಅಲ್ಲಿಂದ ಶಾಲೆಗೆ ಎರಡೇ ನಿಮಿಷ! ಬಸ್ಸಲ್ಲಾದ್ರೆ ಮೂರ್ ಗಂಟೆ ಬೇಕು! ಅದ್ಕೆ ಹೀಗೆ ಈಜಿಕೊಂಡು ಬಂದ್ರೆ ಶಾಲೆಗೂ ಬೇಗ ಬರ್ಬಹುದು, ಒಳ್ಳೆ ವ್ಯಾಯಾಮ ಕೂಡ ಆಗುತ್ತೆ ಅಂತಾರೆ ಮಿಸ್ಟರ್ ಮಲ್ಲಿಕ್!
ಮಲ್ಲಿಕ್ ಗೆ ಒಟ್ಟಾರೆಯಾಗಿ 25, 000 ಸಂಬಳ! ದಿನಕ್ಕೆ 30ರೂಪಾಯಿ ಉಳಿಸ್ತಾರೆ! ಇವ್ರು ಈ ದುಡ್ಡಲ್ಲಿ ಮಕ್ಕಳಿಗೆ ಸಹಾಯ ಮಾಡ್ತಾರೆ! ಇವ್ರು ಒಬ್ಬ ಪರಿಸರವಾದಿಯೂ ಹೌದು! ಮಕ್ಕಳಿಗೆ ನದಿ ನೀರಿನ ಸಂರಕ್ಷಣೆ ಬಗ್ಗೆ ಹೇಳ್ತಾ ಇರ್ತಾರಂತೆ! ಬಿಡುವು ಸಿಕ್ಕಾಗ ಸ್ಟೂಡೆಂಟ್ಸ್ ಗೆ ಈಜುವುದನ್ನೂ ಕಲಿಸಿ ಕೊಡ್ತಾರೆ!
ನಮಗೆ ಅನ್ನಿಸ ಬಹುದು ಸಾರ್, ಇದೇನ್ ಮಹಾ ಅಂಥ! ಆದ್ರೆ, ಮಳೆಗಾಲದಲ್ಲಿ ರಸ್ತೆ ಮೇಲೆ ಹರಿಯುವ ಗಲೀಜು ನೀರು ನಮ್ಮ ಕಾಲಿಗೇನೇ, ತಾಗ್ಬಾರ್ದು ಅಂತ ತುದಿಗಾಲಲ್ಲಿ ಜಂಪ್ ಮಾಡ್ತೀವಿ! ಆದ್ರೆ ಈ ಮಲ್ಲಿಕ್ ಮಾಸ್ತರ್ ಶಾಲೆಗೆ ಸರಿಯಾದ ಟೈಮಿಗೆ ಹೋಗ್ಬೇಕು ಅಂತ ಕುತ್ತಿಗೆ ತನಕ ಬರೋ ಕೊಳಚೆಯಲ್ಲಿ ಈಜಿಕೊಂಡು ಹೋಗ್ತಾರಲ್ಲಾ! ಒಂದೇ ಒಂದ್ ಸಲ ಇವ್ರ ಬಗ್ಗೆ ಯೋಚ್ನೆ ಮಾಡಿ!
ಇವ್ರ ನಿಸ್ವಾರ್ಥ ಸೇವೆಯನ್ನು ಗಮನಸಿದ ತಮಿಳುನಾಡು ಸರ್ಕಾರ ಇದೇ ಶಿಕ್ಷಕರ ದಿನ(ಸೆ.5)ರಂದು ಇವರನ್ನು ಸನ್ಮಾನಿಸಲಿದೆ! ಇಂಗ್ಲೆಂಡ್ ನ ಮಾನಶಾಸ್ತ್ರಜ್ಞರೊಬ್ಬರು ಫೈಬರ್ ಬೋಟ್ ಅನ್ನು ದಾನಮಾಡಿದ್ದಾರೆ! ಅದಕ್ಕೂ  ಮೊದಲು, ಕಳೆದ 19 ವರ್ಷದಿಂದ ಅದೇ ಗಲೀಜು ನೀರಲ್ಲಿ ಈಜುತ್ತಾ ಈಜುತ್ತಾ ಅದೆಷ್ಟೋ ಮಕ್ಕಳಿಗೆ ಜ್ಞಾನದಾನ ಮಾಡಿದ್ದಾರಲ್ಲಾ!
ತನ್ನ 35 ವರ್ಷದಲ್ಲಿ  ಸುಮಾರು 700 ಕಿಲೋಮೀಟರ್ ಇದೇ ಕೊಳಚೆಯಲ್ಲಿ ಈಜಿ ಪಾಠ ಮಾಡುತ್ತಾ ಮಕ್ಕಳನ್ನು ದಡ ಸೇರಿಸಿದ್ದಾರೆ! ಅಂದ್ರೆ ಇವ್ರು ಈಜಿರುವ ಒಟ್ಟಾರೆ ಉದ್ದ ಎಷ್ಟು ಅಂತ ಹೇಳಲು ಉದಾಹಣೆ ನೀಡ್ಬೇಕಂದ್ರೆ, ಇಂಗ್ಲೇಡ್ ಮತ್ತೆ ಫ್ರಾನ್ಸ್ ಅನ್ನು ಬೇರ್ಪಡಿಸುವ ಇಂಗ್ಲೀಷ್ ಕಾಲುವೆ ಇದೆಯಲ್ಲಾ ಅಷ್ಟು ಉದ್ದ ಈಜಿದ್ದಾರೆ! ನೆನಪಿರಲಿ, ಬರೀ ನೀರಿನಲ್ಲಿ ಅಲ್ಲ, ಕೊಳಚೆ ನೀರಲ್ಲಿ!
ಈಗ ಹೇಳಿ? ಈ ಉತ್ಸಾಹಿ ಶಿಕ್ಷಕ ನಿಜಕ್ಕೂ ಆದರ್ಶ ಪ್ರಾಯರು! ಅಲ್ಲವೇ?
ಶಶಿಧರ ಡಿ ಎಸ್ ದೋಣಿಹಕ್ಲು

Share post:

Subscribe

spot_imgspot_img

Popular

More like this
Related

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...