ನಾಳೆ ಜೂನ್ 21 ವಿಶ್ವ ಯೋಗ ದಿನ ಅದೂ 2 ನೇ ವಿಶ್ವ ಯೋಗ ದಿನ.ಇದಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳು ನಿನ್ನೆಸಂದೇಶ ನೀಡಿದರು.ಇದೊಂದು ಜನರನ್ನು ಒಟ್ಟುಗೂಡಿಸುವ ಒಂದು ವಿಶೇಷ ಸಂದರ್ಭ ಎನ್ನುವುದು ಅವರ ಅಭಿಪ್ರಾಯ.ಇದು ನಮಗೆ ನಮ್ಮ ಭಾರತದ ಪುರಾತನ ಪರಂಪರೆಯ ವರದಾನವಾಗಿದೆ ಎಂದು ಹೇಳಿದರು ಇದರ ಬಗೆಗಿನ ವೀಡಿಯೋ ಸಂದೇಶ ಇಲ್ಲಿದೆ. ಅವರು ಸಪ್ಟಂಬರ್ 2014ರಂದು ಯುನೈಟೆಡ್ ನ್ಯಾಷನ್ಸ್ ಜನರಲ್ ಅಸೆಂಬ್ಲಿಯಲ್ಲಿ ಅವರು ವಿಶ್ವಯೋಗ ದಿನದ ಬಗೆಗಿನ ಪ್ರಸ್ತಾಪವನ್ನು ಮುಂದಿಟ್ಟಾಗ ದೇಶದ ಹಲವೆಡೆಗಳಿಂದ ಈ ತರದ ಪ್ರತಿಕ್ರಿಯೆ ವ್ಯಕ್ತವಾಗುವುದೆಂದು ನಿರೀಕ್ಷಿಸಿರಲಿಲ್ಲ ಎಂದು ಕಳೆದ ವರ್ಷದ ಯೋಗದಿನಕ್ಕೆ ವ್ಯಕ್ತವಾದ ಪ್ರತಿಕ್ರಿಯೆಯ ಬಗ್ಗೆ ಸಂತಸ ವ್ಯಕ್ತ ಪಡಿಸುತ್ತಾರೆ.
ಭಾರತದ ಪ್ರತಿಯೊಬ್ಬ ಪ್ರಜೆಯ ಸಹಕಾರ ಹಾಗು ಸಹಭಾಗಿತ್ವಕ್ಕೆ ತಲೆಬಾಗುತ್ತೇನೆ ಹಾಗೂ ನಮ್ಮ ಪುರಾತನ ಪರಂಪರೆಯಾದ ಯೋಗವನ್ನು ಮುಂದುವರಿಸುತ್ತಾ “ವಸುಧೈವ ಕುಟುಂಬಕಂ” ಎಂಬ ನುಡಿಯಾದ ”ಇಡೀ ಪ್ರಪಂಚವೇ ನಮ್ಮ ಕುಟುಂಬ” ಎಂಬ ಮಾತನ್ನು ನಿಜ ಮಾಡಬೇಕು ಎಂದರು.
ಕಳೆದ ಜೂನ್ 21ರ ಆ ಅದ್ಭುತ ಕ್ಷಣಗಳ ಚಿತ್ರಣವನ್ನು ನಾನು ಮತ್ತೆ ಸ್ಮರಿಸುತ್ತ,ದೂರದ ಪೆಸಿಫಿಕ್ ದ್ವೀಪದಿಂದ ಸ್ಪೇಯಿನ್,ವ್ಲಾಡಿವೋಸ್ಟೊಕ್ ನಿಂದ ವ್ಯಾಂಕೋವರ್,ಕೋಪೆನ್ ಹೇಗನ್ ನಿಂದ ಕೇಪ್ ಟೌನ್ ನ ತನಕ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನರ ಯೋಗದ ಬಗೆಗಿನ ಉತ್ಸಾಹ ನಿಜಕ್ಕೂ ಶ್ಲಾಘನೀಯ;ಯೋಗವು ದೈಹಿಕ ವ್ಯಾಯಾಮಕ್ಕೂ ಮಿಗಿಲಾದದ್ದೆಂದೂ,ಇದು ನಮಗೆ ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಹಾದಿಯಷ್ಟೇ ಅಲ್ಲ ಬದಲಾಗಿ ರೋಗದಿಂದ ಮುಕ್ತಿ ಹೊಂದುವ ಸಾಧನವಾಗಿದೆ ಎಂದೂ ಅವರು ತಿಳಿಸಿದರು.
ಈ ಬಾರಿ ದೆಹಲಿಯಲ್ಲಿ ಹಲವು ಕಡೆ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಸೇರಿ ಜೂನ್ 21 ರಂದು ಯೋಗ ಮಾಡುವರು .ಚಂಢೀಗಡ್ನಲ್ಲಿ 30ಸಾವಿರಕ್ಕೂ ಮಿಗಿಲಾಗಿ ಭಾಗವಹಿಸುವರೆಂದು ಅಂದಾಜಿಸಲಾಗಿದೆ.ಈ ಬಾರಿ ಮೋದಿಯವರು ಚಂಢೀಗಡ್ ನ ಕ್ಯಾಪಿಟಲ್ ಕಾಂಪ್ಲೆಕ್ಸ್ ನ ಯೋಗ ಸಭೆಯಲ್ಲಿ ಭಾಗವಹಿಸುವವರಿದ್ದಾರೆ.ಬನ್ನಿ ನಾವೆಲ್ಲರೂ ವಿಶ್ವ ಯೋಗ ದಿನವಾದ ನಾಳೆ ಒಟ್ಟಾಗಿ ಸೇರಿ ಯೋಗ ಮಾಡೋಣ ಹಾಗೂ ನಮ್ಮ ಪುರಾತನ ಪರಂಪರೆಯನ್ನು ಬೆಳೆಸೋಣ.
In Pictures :
- ಸ್ವರ್ಣಲತ ಭಟ್
POPULAR STORIES :
ಮಾತಿಲ್ಲದೆ ಮಾತನಾಡೋ ಪುಷ್ಪಕ ವಿಮಾನ..!
ಶಾಸಕ ಸ್ಥಾನಕ್ಕೆ ಅಂಬರೀಷ್ ರಾಜೀನಾಮೆ..!!
68 ನೇ ವಯಸ್ಸಿನ ತಾತ 10ನೇ ತರಗತಿಯ ವಿದ್ಯಾರ್ಥಿ..!!
ಮಹಿಳೆ ಮೇಲೆ ಅತ್ಯಾಚಾರ..! ಭಾರತೀಯ ಆಟಗಾರ ಅರೆಸ್ಟ್ ಯಾರು ಆ ರೇಪಿಸ್ಟ್ ಕ್ರಿಕೆಟರ್…?
ಅಷ್ಟಕ್ಕೂ ರಜನಿ ಹೀಗೇಕೆ ಮಾಡಿದ್ಲು? ಪ್ರೀತಿಸಿದ ಹುಡುಗ ಮತ್ತು ಅಪ್ಪ, ಅಮ್ಮ, ಅಣ್ಣ.!
`ರೋಬೋಫೀಲಿಯಾ’ ಇದು `ಫ್ಯೂಚರ್ ಆಫ್ ಸೆಕ್ಸ್’
ನಿಮ್ಮ ರೂಂಮೇಟ್ ನ ಗೊರಕೆ ತಪ್ಪಿಸಬೇಕೇ?? ಇಲ್ಲಿದೆ ಉಪಾಯ…
ದರ್ಭೆಯನ್ನುಪವಿತ್ರವಾಗಿ ಶುಭ ಹಾಗೂ ಅಶುಭ ಸಂದರ್ಭಗಳಲ್ಲಿ ನಮ್ಮಬಲಕೈ ಬೆರಳಲ್ಲಿ ಯಾಕೆ ಧರಿಸುತ್ತೇವೆ????
ಗೀತಾ ಟಂಡನ್ ಖತರ್ನಾಕ್ ಸ್ಟಂಟ್ ಮಹಿಳೆಯ ಕಥೆ..!
ಮಿನಿಸ್ಟರ್ ಗಿರಿ ಬಿಟ್ಟುಕೊಡ್ತಾರಂತೆ ಅಂಬಿ… ಆದ್ರೆ ಕಂಡೀಷನ್ಸ್ ಅಪ್ಲೈ…!!