IPL 2025: ಪಂಜಾಬ್ ಕಿಂಗ್ಸ್ ವಿರುದ್ಧ ಸೋತ RCB: ಐದು ವಿಕೆಟ್ʼಗಳ ಭರ್ಜರಿ ಗೆಲುವು

Date:

IPL 2025: ಪಂಜಾಬ್ ಕಿಂಗ್ಸ್ ವಿರುದ್ಧ ಸೋತ RCB: ಐದು ವಿಕೆಟ್ʼಗಳ ಭರ್ಜರಿ ಗೆಲುವು

ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಆರ್ಸಿಬಿ ಪಡೆ ತವರಿನಲ್ಲಿ ಸತತ ಮೂರು ಪಂದ್ಯಗಳಲ್ಲೂ ಪರಾಜಯಗೊಂಡಂತಾಗಿದೆ. ಹೌದು ಎದುರಾಳಿ ಪಂಜಾಬ್ ಕಿಂಗ್ಸ್, ಆರ್ಸಿಬಿ ವಿರುದ್ಧ ಐದು ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಸಂಜೆ ವೇಳೆ ಮಳೆ ಸುರಿದ ಪರಿಣಾಮ, 14 ಓವರ್ಗಳಿಗೆ ಪಂದ್ಯವನ್ನು ಸೀಮಿತ ಮಾಡಲಾಗಿತ್ತು. ಟಾಸ್ ಸೋತು ಬ್ಯಾಟ್ ಮಾಡಿದ ರಜತ್ ಪಡೆ, 9 ವಿಕೆಟ್ ಕಳೆದುಕೊಂಡು 95 ರನ್ಗಳಿಸಿತ್ತು. ಟಿಮ್ ಡೆವೀಡ್ ಆರ್ಸಿಬಿ ಸ್ಕೋರ್ ಹೆಚ್ಚಿಸುವಲ್ಲಿ ಅಮೋಘ ಕೊಡುಗೆ ನೀಡಿದರು. 26 ಬಾಲ್ನಲ್ಲಿ ಮೂರು ಸಿಕ್ಸರ್, ಐದು ಬೌಂಡರಿ ಜೊತೆ 50 ರನ್ಗಳ ಕಾಣಿಕೆ ನೀಡಿದರು.
96 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್‌ ಇನ್ನೂ 11 ಎಸೆತ ಬಾಕಿ ಇರುವಂತೆಯೇ 5 ವಿಕೆಟ್‌ಗಳ ಭರ್ಜರಿ ಸಾಧಿಸಿದೆ. ಪಂಜಾಬ್ ಕಿಂಗ್ಸ್ ಪರ ವಧೇರಾ 19 ಬಾಲ್ನಲ್ಲಿ 33 ರನ್ಗಳಿಸಿದರು. ಆರ್ಸಿಬಿ ಪರ ಹೇಜಲ್ವುಡ್ ಅದ್ಭುತ ಬೌಲಿಂಗ್ ದಾಳಿ ನಡೆಸಿದರು.
ಮೂರು ಓವರ್ನಲ್ಲಿ ಕೇವಲ 13 ರನ್ ನೀಡಿ ಮೂರು ವಿಕೆಟ್ ಪಡೆದರು. ಭುವಿ 26 ರನ್ ನೀಡಿ ಎರಡು ವಿಕೆಟ್ ಪಡೆದರೂ, ಗೆಲುವು ಆರ್ಸಿಬಿಗೆ ಸಿಗಲಿಲ್ಲ. ಆ ಮೂಲಕ 18ನೇ ಆವೃತ್ತಿಯಲ್ಲಿ ಆಡಿದ ಮೂರು ಪಂದ್ಯಗಳನ್ನೂ ಆರ್ಸಿಬಿ ಸೋತಿದೆ. ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟನ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ ಸೋಲನ್ನು ಕಂಡಿದೆ.

Share post:

Subscribe

spot_imgspot_img

Popular

More like this
Related

ಬಸವ ಅಂತಾರಾಷ್ಟ್ರೀಯ ಮ್ಯೂಸಿಯಂಗೆ ರೂ. 64.43 ಕೋಟಿ ಬಿಡುಗಡೆ: ಸಚಿವ ಕೃಷ್ಣ ಬೈರೇಗೌಡ

ಬಸವ ಅಂತಾರಾಷ್ಟ್ರೀಯ ಮ್ಯೂಸಿಯಂಗೆ ರೂ. 64.43 ಕೋಟಿ ಬಿಡುಗಡೆ: ಸಚಿವ ಕೃಷ್ಣ...

ವಸತಿ ಯೋಜನೆಯಡಿ ಸಹಾಯಧನ ಮತ್ತು ಘಟಕ ವೆಚ್ಚ ಹೆಚ್ಚಿಸಲು ಪ್ರಸ್ತಾವನೆ: ರಾಮಲಿಂಗಾ ರೆಡ್ಡಿ

ವಸತಿ ಯೋಜನೆಯಡಿ ಸಹಾಯಧನ ಮತ್ತು ಘಟಕ ವೆಚ್ಚ ಹೆಚ್ಚಿಸಲು ಪ್ರಸ್ತಾವನೆ: ರಾಮಲಿಂಗಾ...

ನ್ಯಾಷನಲ್ ಹೆರಾಲ್ಡ್ ಕಾಂಗ್ರೆಸ್ ಪಕ್ಷ ಹಾಗೂ ದೇಶದ ಆಸ್ತಿ: ಡಿಸಿಎಂ ಡಿ.ಕೆ. ಶಿವಕುಮಾರ್

ನ್ಯಾಷನಲ್ ಹೆರಾಲ್ಡ್ ಕಾಂಗ್ರೆಸ್ ಪಕ್ಷ ಹಾಗೂ ದೇಶದ ಆಸ್ತಿ: ಡಿಸಿಎಂ ಡಿ.ಕೆ....

ಹೊಸ ಹೆಜ್ಜೆ ಇಟ್ಟ ಲಕ್ಷ್ಮೀ ಗಣೇಶ ಪ್ರೋಡೆಕ್ಷನ್ !

ಬೆಂಗಳೂರು: ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್...