No menu items!
30.7 C
Munich
Saturday, June 20, 2026

ಮಾಜಿ ಡಾನ್ ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ!

Must read

ಮಾಜಿ ಡಾನ್ ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ!

ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಮಾಡಿರುವ ಘಟನೆ ರಾಮನಗರ ತಾಲೂಕಿನ ಬಿಡದಿ ಮನೆ ಬಳಿ ನಡೆದಿದೆ. ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿದ್ದು, ತಡರಾತ್ರಿ ಬಿಡದಿಯಿಂದ ಬೆಂಗಳೂರಿನತ್ತ ಕಾರಿನಲ್ಲಿ ಹೊರಟಾಗ ದಾಳಿಯಾಗಿದೆ. ಮಧ್ಯರಾತ್ರಿ 12.50ರ ಸುಮಾರಿಗೆ ರಿಕ್ಕಿ ಮೇಲೆ ಎರಡು ಸುತ್ತು ಫೈರ್ ಮಾಡಿದ್ದಾರೆ. ಮಾಹಿತಿಗಳ ಪ್ರಕಾರ ಮನೆ ಮುಖ್ಯ ದ್ವಾರದ ಕೂಗಳತೆ ದೂರದಲ್ಲೇ ಈ ದಾಳಿಯಾಗಿದೆ.
KA53 MC 7128 ನಂಬರ್ನ ಕಪ್ಪು ಬಣ್ಣದ ಫಾರ್ಚೂನರ್ ಕಾರಿನ ಹಿಂಬದಿ ಸೀಟಿನಲ್ಲಿ ರಿಕ್ಕಿ ರೈ ಕುಳಿತಿದ್ದರು. ಆದರೆ ಡ್ರೈವಿಂಗ್ ಸೀಟ್ ಟಾರ್ಗೆಟ್ ಮಾಡಿ ಫೈರಿಂಗ್ ಮಾಡಲಾಗಿದೆ. ಯಾಕೆಂದರೆ ಪ್ರತಿ ಬಾರಿಯೂ ರಿಕ್ಕಿ ರೈ ತಮ್ಮ ಕಾರನ್ನು ತಾವೇ ಡ್ರೈವ್ ಮಾಡುತ್ತಿದ್ದರು.
ಹೀಗಾಗಿ ಡ್ರೈವಿಂಗ್ ಸೀಟ್ ಟಾರ್ಗೆಟ್ ಮಾಡಿ ಶೂಟ್ ಮಾಡಿದ್ದಾರೆ. ಫೈರಿಂಗ್ ಮಾಡ್ತಿದ್ದಂತೆಯೇ ಡ್ರೈವಿಂಗ್ ಸೀಟ್ಗೆ ಗುಂಡು ತಗುಲಿದೆ. ಸೀಟ್ಗೆ ಬಡಿದ ಗುಂಡುಗಳು ಹಿಂಬದಿಯಲ್ಲಿ ಕೂತಿದ್ದ ರಿಕ್ಕಿಗೂ ತಗುಲಿದೆ. ಇನ್ನು ಕೂದಲೆಳೆ ಅಂತರದಲ್ಲಿ ರಿಕ್ಕಿ ಕಾರು ಚಾಲಕ ರಾಜು ಪಾರಾಗಿದ್ದಾರೆ.

- Advertisement -spot_img

More articles

- Advertisement -spot_img

Latest article