ಶಿಖರ್ ಧವನ್ ಅವರ ಅರ್ಧಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ರಾಜಸ್ತಾನ್ ರಾಯಲ್ಸ್ ವಿರುದ್ಧ ನಿರಾಯಾಸ ಗೆಲುವು ಪಡೆದು ಬೀಗಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಜಿಂಕ್ಯಾ ರಹಾನೆ ಅವರ ನೇತೃತ್ವದ ರಾಜಸ್ಥಾನ್ ರಾಯಲ್ಸ್ ನಿಗಧಿತ 20ಓವರ್ ಗಳಲ್ಲಿ 9 ವಿಕೆಟ್ ಗಳನ್ನು ಕಳೆದುಕೊಂಡು ಕೇವಲ 125 ರನ್ ಗಳಿಸಿತು. ರಾಜಸ್ಥಾನ್ ಪರ ಸಂಜು ಸಾಮ್ಸನ್ (49) ಉತ್ತಮ ಆಟವಾಡಿದರೂ ಸವಾಲಿನ ಮೊತ್ತ ಪೇರಿಸಲಾಗಲಿಲ್ಲ.
ಸುಲಭ ಗುರಿ ಬೆನ್ನತ್ತಿದ ಎಸ್ ಆರ್ ಎಸ್ ಕೇವಲ 1 ವಿಕೆಟ್ ಕಳೆದು ಕೊಂಡು 15.5 ಓವರ್ ಗಳಲ್ಲಿ ಗುರಿ ತಲುಪಿತು.
ಧವನ್ 77, ವಿಲಿಯಮ್ಸನ್ 36 ರನ್ ಗಳಿಸಿ ಅಜೇಯರಾಗಿ ಉಳಿದರು.