ಇಂದು ಸಮಯಕ್ಕೆ ಸರಿಯಾಗೆ 9.25 ಕ್ಕೆ ಆಂಧ್ರಪ್ರದೇಶದ ಶ್ರೀಹರಿ ಕೋಟದಲ್ಲಿರುವ ಸತೀಶ್ ಧಾವನ್ ಸ್ಫೇಸ್ ಸೆಂಟರ್ ನಿಂದ ಪೋಲಾರ್ ಸ್ಯಾಟಲ್ಲೈಟ್ ಲಾಂಚ್ ವೆಹಿಕಲ್ (PSLV-34) ರಾಕೆಟ್ ಮೂಲಕ ಉಳಿದ 20 ಉಪಗ್ರಹಗಳ ಯಶಸ್ವೀ ಉಡಾವಣೆಯಾಯಿತು.ಭಾರತದ ವೈಜ್ನಾನಿಕ ಜಗತ್ತಿನಲ್ಲಿ ಮತ್ತೊಂದು ಇತಿಹಾಸದ ಮೈಲಿಗಲ್ಲು.ಇದರಿಂದಾಗಿ ಮೊತ್ತ ಮೊದಲ ಬಾರಿಗೆ ಏಕ ಕಾಲದಲ್ಲಿ 20 ಉಪಗ್ರಹಗಳ ಉಡಾವಣೆ ನಡೆಸಿದ ಹೆಮ್ಮೆ ನಮ್ಮ ಇಸ್ರೋಗೆ ಸಲ್ಲುತ್ತದೆ.
ಈ ಉಪಗ್ರಹಗಳ ಒಟ್ಟು ತೂಕವು 1288 kg ಆಗಿರುವುದು.ಪಿ.ಎಸ್.ಎಲ್.ವಿ. 44.4ಮೀಟರ್ ಉದ್ದ ಹಾಗೂ 320 ಟನ್ ತೂಕವಿರುವುದು.
ಇವುಗಳಲ್ಲಿ ಅಮೇರಿಕಾದಿಂದ 13,ಕೆನಡಾದಿಂದ 2,ಜರ್ಮನಿ ಹಾಗೂ ಇಂಡೋನೇಷ್ಯಾದಿಂದ ತಲಾ ಒಂದೊಂದು ಉಪಗ್ರಹಗಳು ಒಟ್ಟಿಗೆ ಇತರ ದೇಶಗಳ 17 ಉಪಗ್ರಹಗಳೂ ಹಾಗೂ ಭಾರತದ ವಿದ್ಯಾರ್ಥಿಗಳು ತಯಾರಿಸಲಾದ 2 ನಾನೋ ಉಪಗ್ರಹಗಳೂ,ಕಾರ್ಟೊಸಾಟ್-2 ಸೀರೀಸ್ ಸೇರಿವೆ.ರಾಕೆಟ್ ಗಳಲ್ಲಿ ಮುಖ್ಯ ಕಾರ್ಟೊಸಾಟ್-2 ಸೀರೀಸ್ ಸುಮಾರು 725.5 k.g ತೂಕದ್ದಾಗಿದ್ದು ಇದು ಭೂಮಿಯ ಬಗ್ಗೆಗಿನ ಅಧ್ಯಯನ (ಕಾರ್ಟೊಗ್ರಾಫಿ) ನಡೆಸುವುದು.ಉಡಾವಣೆಯಾದ ಹಿನ್ನೆಲೆಯಲ್ಲೇ ಕೇವಲ 26 ನಿಮಿಷಗಳ ಅಂತರದಲ್ಲಿ ಎಲ್ಲ ರಾಕೆಟ್ ಗಳನ್ನು ಬೇರೆ ಬೇರೆ ಪಥದಲ್ಲಿ ಸೇರಿಸುವಲ್ಲಿ ಸಫಲವಾಯಿತು.
2008 ರಲ್ಲಿ ಇದೇ ರೀತಿಯಾಗಿ ಒಂದೇ ಮಿಷನ್ ನಲ್ಲಿ 10 ಉಪಗ್ರಹಗಳನ್ನು ಉಡಾಯಿಸಿತ್ತು.ಇಲ್ಲಿಯತನಕ ಭಾರತವು 57 ವಿದೇಶೀಯ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿದೆ.ಪ್ರಧಾನ ಮಂತ್ರಿಗಳು ನಮ್ಮ ಇಸ್ರೋ ತಂಡದ ಈ ಸಾಧನೆಗೆ ಶುಭ ಕೋರಿದ್ದಾರೆ.
- ಸ್ವರ್ಣಲತ ಭಟ್
POPULAR STORIES :
ಕಾರ್ಮಿಕ ನಿದ್ರೆ ಮಾಡಿದ್ದಕ್ಕೆ ಬಟ್ಟೆ ಬಿಚ್ಚಿ ಹೊಡೆದ ಅವಿವೇಕಿ ಅಧಿಕಾರಿ..!
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!
ಅಡುಗೆ ಮನೆಯಲ್ಲಿ ಅಡಗಿಸಿಟ್ಟ ಔಷಧಿಗಳು..!!
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಎನ್ನುವ ವಿವರ ಇಲ್ಲಿದೆ
ನಿಮಗೂ ಸೆಲ್ಫೀ ಕ್ರೇಝ್ ಇದ್ಯಾ…? ಹಾಗಿದ್ರೆ ಎಚ್ಚರ
ಮಾತಿಲ್ಲದೆ ಮಾತನಾಡೋ ಪುಷ್ಪಕ ವಿಮಾನ..!