ಉಗ್ರರ ದಾಳಿಗೆ 12 ಸಿಆರ್ ಪಿಎಫ್ ಯೋಧರು ಹುತಾತ್ಮ..
ಜಮ್ಮು ಮತ್ತು ಕಾಶ್ಮೀರದಲ್ಲಿ ಗುರುವಾರ ಬಾಂಬ್ ಸ್ಫೋಟದಲ್ಲಿ ಕೇಂದ್ರೀಯ ಮೀಸಲು ಪಡೆಯ 18 ಸಿಬ್ಬಂದಿ ಹುತಾತ್ಮರಾಗಿ, ಹಲವರು ಗಾಯಗೊಂಡಿದ್ದಾರೆ. ಸಿಆರ್ ಪಿಎಫ್ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ವಾಹನವನ್ನು ಗುರಿ ಮಾಡಿಕೊಂಡು ಉಗ್ರಗಾಮಿಗಳು ಈ ದಾಳಿ ನಡೆಸಿದ್ದಾರೆ.
ಪುಲ್ವಾಮಾ ಜಿಲ್ಲೆಯ ಅವಂತಿಪುರ ಸಮೀಪದ ಜಮ್ಮು– ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಆರ್‌ಪಿಎಫ್ ಯೋಧರಿದ್ದ ಬಸ್ ಮೇಲೆ ಸುಧಾರಿತ ಸ್ಫೋಟಕ ಸಾಮಾಗ್ರಿಗಳನ್ನು ಬಳಸಿ ದಾಳಿ ಮಾಡಿದ್ದಾರೆ. ಈ ಘಟನೆಯಲ್ಲಿ 12 ಮಂದಿ ಯೋಧರು ಹುತಾತ್ಮರಾಗಿದ್ದು, 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಿಅರ್ ಪಿಎಫ್ ಬೆಟಾಲಿಯನ್ 54ಕ್ಕೆ ಸೇರಿದ್ದಾಗಿತ್ತು. ಈ ಸ್ಫೋಟದ ಹೊಣೆಯನ್ನು ಜೈಷ್–ಇ–ಮೊಹ್ಮದ್ ಹೊತ್ತಿಕೊಂದಿದೆ. ಸ್ಥಳೀಯ ಯುವಕರಿಂದ ನಡೆದ ಫಿದಾಯಿನ್ ದಾಳಿ ಎಂದು ಉಗ್ರ ಸಂಘಟನೆ ಹೇಳಿಕೊಂಡಿದೆ. ಶ್ರೀನಗರ್ ನಿಂದ ಮೂವತ್ತು ಕಿಲೋಮಿಟರ್ ದುರದ ಜಮ್ಮು–ಶ್ರೀನರ್ ಹೆದ್ದಾರಿಯಲ್ಲಿರುವ ಲೆಥ್ ಪುರ್ ನಲ್ಲಿ ಈ ಘಟನೆ ನಡೆದಿದೆ.