ಜಪಾನ್ ನ ಆ ರೈಲು ಕಣ್ಣಿಗೆ ಕಾಣಿಸುವುದಿಲ್ಲವಂತೆ..! ತಂತ್ರಜ್ಞಾನದಲ್ಲಿ ಜಪಾನ್ ಹೊಸ ಮೈಲುಗಲ್ಲು..!!

Date:

 

ಇವತ್ತು ತಂತ್ರಜ್ಞಾನ ಜಗತ್ತಿನಲ್ಲಿ ಅದ್ಭುತ ಅಂತ ಸೃಷ್ಟಿಯಾಗುತ್ತಿದ್ದರೇ ಅದು ಜಪಾನ್ ದೇಶದಿಂದ ಮಾತ್ರ. ಅವರಷ್ಟು ಅಡ್ವಾನ್ಸ್ ಟೆಕ್ನಾಲಜಿ, ಚಿಂತನೆಗಳನ್ನು ಹೊಂದಿರುವ ದೇಶ ಇನ್ನೊಂದಿಲ್ಲ. ಇದೀಗ ಜಪಾನ್ ಕಣ್ಣಿಗೆ ಕಾಣಿಸದ ಅಗೋಚರ ರೈಲಿನ ಸಿದ್ಧತೆಯಲ್ಲಿ ತೊಡಗಿದೆ. ಕಣ್ಣಿಗೆ ಕಾಣಿಸುವ ರೈಲಿನಲ್ಲೇ ಪಯಣಿಸುವುದು ದುಸ್ತರ. ಇದೇನಪ್ಪಾ ಕಣ್ಣಿಗೆ ಕಾಣಿಸದ ರೈಲಿನಲ್ಲಿ ಪಯಣಿಸುವುದು ಸಾಧ್ಯಾನಾ..? ರೈಲು ಕಾಣಿಸುವುದಿಲ್ಲ, ಪಯಣಿಸುವ ನಾವು ಮಾತ್ರ ಕಾಣಿಸುತ್ತೇವಾ..? ಇದೆಂಥಾ ಮ್ಯಾಜಿಕ್ ಎಂದನಿಸೋದು ನಿಜ. ಆದರೂ ಜಪಾನ್, `ಅಗೋಚರ ರೈಲನ್ನು ಓಡಿಸಿಯೇ ಸಿದ್ಧ’ ಎಂದು ಎದೆತಟ್ಟಿಕೊಂಡು ಹೇಳುತ್ತಿದೆ. ಅಂದಹಾಗೆ ಇದು ಜಪಾನಿನ ವಾಸ್ತುಶಿಲ್ಪಿ ಕಝಾಯೋ ಸೆಜಿಮಾ ಎಂಬಾಕೆಯ ಪರಿಕಲ್ಪನೆ. ವಿಸ್ಮಯ ಮೂಡಿಸುವ ಕಟ್ಟಡ ನಿರ್ಮಾಣದಲ್ಲಿ ಬೆರಗು ಮೂಡಿಸಿರುವ ಈಕೆ, ಅಗೋಚರ ರೈಲಿನ ಕಲ್ಪನೆ ದ್ರವ, ಪಾರದರ್ಶಕ, ಪ್ರಕೃತಿಯೊಂದಿಗೆ ಬೆರೆತುಕೊಂಡಿದೆ ಎನ್ನುತ್ತಾರೆ. ಈಗಾಗಲೇ ಫ್ರಾನ್ಸಿನ ಲೇ ಲೌವ್ರೇ ಸಂಗ್ರಹಾಲಯದಲ್ಲಿ ಇದರ ಪರಿಕಲ್ಪನೆಯನ್ನು ಕಾಣಬಹುದಾಗಿದೆ. ಜಪಾನಿನ ಸೀಬು ಕಂಪನಿಯ ಜೊತೆ ಈಗಾಗಲೆ ಒಪ್ಪಂದ ಮಾಡಿಕೊಂಡಿರುವ ಸೆಜಿಮಾ ಅಗೋಚರ ರೈಲನ್ನು ಸಿದ್ದಪಡಿಸುತ್ತಿದ್ದಾರೆ. ಈ ರೈಲು ಪ್ರತಿಫಲಿಸುವ ಮೇಲ್ಮೈಯನ್ನು ಹೊಂದಿದ್ದು ವಾತಾವರಣದಿಂದ ರೈಲನ್ನು ಅದೃಶ್ಯವಾಗುವಂತೆ ಮಾಡುತ್ತದೆಯಂತೆ. ಅಂದಹಾಗೆ 2018ಕ್ಕೆ ಈ ಅಗೋಚರ ರೈಲು ಲೋಕಾರ್ಪಣೆಯಾಗಲಿದೆ. ಮನುಷ್ಯನ ಬುದ್ಧಿವಂತಿಕೆಗೆ ಅವನೇ ಸರಿಸಾಟಿ ಬಿಡಿ. ಇನ್ನೇನೆಲ್ಲಾ ಮಾಡುತ್ತಾನೋ..? ಕಾದುನೋಡೋಣ.

  • ರಾ ಚಿಂತನ್

POPULAR  STORIES :

ನಾಗರಹಾವಿಗೆ ಎರಡು ಕಾಲು..! ಜನರು ದಂಗುಬಡಿದು ಹೋದರು..!

ಬಾಲಿವುಡ್ ಮಂದಿಯ ತಲೆ ಖಾಲಿಯಾಗಿದೆ..! ಅದು ಬಾಲಿವುಡ್ ಅಲ್ಲ, `ಖಾಲಿವುಡ್’

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

ಅಫ್ರಿದಿ ಮಗಳಿಗೆ ಕ್ಯಾನ್ಸರ್..! ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸಾವಿನ ಸುದ್ದಿ..!

ಈ ವ್ಯಕ್ತಿಯನ್ನ ಗರ್ಭಿಣಿ ಅನ್ನೋಕೆ ಕಾರಣವೇನು ಗೊತ್ತಾ..? ಹೊಟ್ಟೆಯಲ್ಲಿದ್ದದ್ದು ಮಗುವಲ್ಲದೆ ಮತ್ತೇನು..?

ಒಂದು ವಾರ ಉಚಿತ ಯೋಗ ವಿತ್ ಹಿರೋಯಿನ್ ಸಂಜನಾ..!!

ಸತ್ತಮೇಲೂ ಇವರು ಗ್ರೇಟ್..!! ಸೆಲೆಬ್ರಿಟಿಗಳೆಂದರೇ ಹೀಗಿರಬೇಕು..?

ಬ್ಲೂ ಫಿಲಂ ನಟಿ ಶಕೀಲಾಳನ್ನು ಅವಳಪ್ಪ ಹೊಡೆದು ಸಾಯಿಸಿಬಿಡುತ್ತಿದ್ದ..! ಶಕೀಲಾ ಲೈಫ್ ಸ್ಟೋರಿ.

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...