ನಿಮ್ಮ ಮಗು ಬಳಿ ಸ್ಮಾರ್ಟ್ ಫೋನ್ ಇದೆಯಾ ಹುಷಾರ್..!!

0
72

ಟ್ರಿಣ್ ಟ್ರಿಣ್ ಎಂದಾಗ ಮಾತ್ರ ಫೋನ್ ಬಳಿ ಹೋಗೋ ಕಾಲವೊಂದಿತ್ತು. ಆದರೆ ಈಗ ಕುತ್ತಿಗೆಗೆ ಫೋನ್ ನೇತಾಕಿಕೊಂಡು ತಿರುಗೋ ಕಾಲ ಬಂದಿದೆ. ಎಲ್ಲಿ ನೋಡೆಂದರಲ್ಲಿ ಒಂದಕ್ಕಿಂತ ಒಂದು ಸ್ಮಾರ್ಟ್ ಆಗಿರೊ ಪೋನ್ ಗಳೆ…. ಈಗಿನ ಸಮೀಕ್ಷೆಯ ಪ್ರಕಾರ ಮಕ್ಕಳಲ್ಲಿ ಈ ಸ್ಮಾರ್ಟ್ ಪೋನ್ ಉಪಯೋಗಿಸುವವರ ಸಂಖೆ ಹೆಚ್ಚುತ್ತಿದೆ ಎನ್ನಲಾಗಿದೆ. ಅಳುತ್ತಿರುವ ಕಂದಮ್ಮನಿಂದ ಹಿಡಿದು ಕಾಲೇಜು ಮೆಟ್ಟಿಲೇರುವ ಟೀನೇಜುಗಳಿಗೂ ಇದೊಂದು ಬಲು ದೊಡ್ಡ ಸಂಗಾತಿಯಾಗಿದೆ ಎಂದರೆ ತಪ್ಪಾಗಲಾರದು. ಪುಟ್ಟ ಕಂದಮ್ಮ ಅಳುತ್ತಿರುವಾಗ ಬಾಯಿಗೆ ನಿಪ್ಪಲ್ ಇಡೊ ಆ ಹೆತ್ತವರೆಲ್ಲಿ? ಈಗ ಕೈಗೆ ಸ್ಮಾರ್ಟ್ ಪೋನ್ ತುರುಕಿಸಿ ಕಣ್ರೆಪ್ಪೆ ಮಿಟುಕಿಸೊದ್ರೊಳ್ಗೆ ಅಳು ನಿಲ್ಸೊ ಈ ಹೆತ್ತವರೆಲ್ಲಿ? ನಮೊನ್ ನಮಃ.. ನಮ್ಮಗು ತುಂಬಾ ಚೂಟಿ ಕಣ್ರಿ…ಇನ್ನೂ 1 ವರ್ಷ ಆಗಿಲ್ಲ ಆವಾಗ್ಲೆ ಸೆಲ್ಲ್ ಫೊನ್ ಹೆಂಗೆ ಯೂಸ್ ಮಾಡೋದು ಅಂತ ಗೊತ್ತು….ಈ ಹಾಡು, ವೀಡಿಯೊ, ಈ ಗೇಮ್ಸ್ ಎಲ್ಲ ಹೆಂಗೆ ಪ್ಲೇ ಮಾಡ್ತಾನೆ ಗೊತ್ತಾ ಅಂತ ಹೆಮ್ಮೆಯಿಂದ ಹೇಳಿಕೊಳ್ಳೊ ಹೆತ್ತವರಿಗೆ ತಮ್ಮ ಮಕ್ಕಳನ್ನು ಯಾವ ಅಪಾಯಕ್ಕೆ ತಳ್ಳುತ್ತಿದ್ದೇವೆ ಅನ್ನೊ ಪರಿಜ್ನಾನನೇ ಇಲ್ಲ. ಅಂತವ್ರಿಗಿದೊ ಒಂದು ಎಚ್ಚರಿಕೆ…..
ದಕ್ಶಿಣ ಕೊರಿಯಾದ ಚೊನ್ನಮ್ ನ ನ್ಯಾಷನಲ್ ಯೂನಿವರ್ಸಿಟಿ ಹಾಸ್ಪಿಟಲ್ ನ ಪರಿಣಿತ ಸಂಶೊಧಕರ ಪ್ರಕಾರ ಮಕ್ಕಳಲ್ಲಿ ಸ್ಮಾರ್ಟ್ ಫೊನ್ ನ ಬಳಕೆಯಿಂದ ಕಣ್ಣಿನ ಸಂಬಂಧಿ ಕಾಯಿಲೆಗಳು ಬರುತ್ತವೆ ಅಂತಾರೆ. ಅವರ ಪ್ರಕಾರ ಇದು ಕನ್ವರ್ಜೆಂಟ್ ಸ್ಟ್ರಾಬಿಸ್ಮಸ್ ಎಂಬ ಕಣ್ಣಿನ ತೊಂದರೆಗೆ ಗುರಿಯಾಗಬೇಕಾಗುತ್ತದೆ. ಕನ್ವರ್ಜೆಂಟ್ ಸ್ಟ್ರಾಬಿಸ್ಮಸ್ ಎಂಬುದು ಮಕ್ಕಳಲ್ಲಿ ಕಣ್ಣಿನ ಮಾಂಸಪೇಶಿಯ ದುರ್ಬಲತೆಯಿಂದಾಗಿ ಕಾಣಬರುವ ಕಣ್ಣಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಇದರ ಲಕ್ಷಣಗಳು 2 ಅಥವಾ 1 ಕಣ್ಣು ಒಳಭಾಗಕ್ಕೆ ಅಂದರೆ ಮೂಗಿನ ಕಡೆಗೆ ಬಾಗುವುದು ಅಥವಾ ೧ ಕಣ್ಣು ಇನ್ನೊಂದು ಕಣ್ಣಿನೊಂದಿಗೆ ಸಮಾನವಾಗಿ ಅಥವಾ ಏಕಪ್ರಕಾರವಾಗಿ ದೃಷ್ಟಿ ಹರಿಸಲು ಅಸಮರ್ಥವಾಗುವುದು. ಇದನ್ನು ಕ್ರಾಸ್ ಅಯ್ ಅಥವಾ ವಾಲ್ ಅಯ್ ಅಂತಲು ಕರೆಯಲಾಗುತ್ತದೆ.. ಇದನ್ನು 7 ರಿಂದ 16 ವರ್ಷ ಪ್ರಾಯದ 12 ಮಕ್ಕಳನ್ನು ವೈದ್ಯಕೀಯ ಪರೀಕ್ಶೆಗೊಳಪಡಿಸಿದಾಗ ಪತ್ತೆಹಚ್ಚಲಾಯಿತು. 30 ನಿಮಿಷಕ್ಕಿಂತಲೂ ಹೆಚ್ಚು ಸತತವಾಗಿ ಮೊಬೈಲ್ ಪರದೆಯನ್ನು ವೀಕ್ಷಿ ಸಲು ಮಕ್ಕಳನ್ನು ಬಿಡಬಾರದು. ಕಣ್ಣಿನ ಮತ್ತು ಮೊಬೈಲ್ ಪರದೆಯ ಅಂತರವು ಕನಿಷ್ಟ ಪಕ್ಷ 8 ರಿಂದ 12 ಇಂಚ್ ಗಳಷ್ಟಾದ್ರು ಇರ್ಲೇಬೇಕು. ಈ ಪ್ರಯೋಗದಲ್ಲಿ 12 ಮಕ್ಕಳನ್ನು 2 ತಿಂಗಳ ಮಟ್ಟಿಗೆ ಸ್ಮಾರ್ಟ್ ಫೋನ್ ನಿಂದ ದೂರವಿರಿಸಿದಾಗ ಬರೊಬ್ಬರಿ 9 ಮಕ್ಕಳಲ್ಲಿ ಉತ್ತಮ ಫಲಿತಾಂಶ ಕಂಡು ಬಂತು. ಯಾರಲ್ಲಾದರೂ ಕಣ್ಣಿಗೆ ಸಂಬಂಧಿಸಿ ಈ ತರನಾದ ವ್ಯತ್ಯಾಸ ಕಂಡುಬಂದಲ್ಲಿ ತಡಮಾಡದೆ ಆ ಕೂಡಲೇ ಡಾಕ್ಟರ್ ಬಳಿ ಸಂದರ್ಶಿಸಿ.
ದಯವಿಟ್ಟು ಎಲ್ಲ ಹೆತ್ತವರೂ ಈ ಸ್ಮಾರ್ಟ್ ಸ್ಮಾರ್ಟ್ ಆಗಿರೊ ಫೋನ್ ನಿಂದ ಮಕ್ಕಳನ್ನು ದೂರವಿಟ್ಟು ಇತರ ಹವ್ಯಾಸಗಳಾದ ಒಳ್ಳೊಳ್ಳೆ ಪುಸ್ತಕ ಓದುವುದು, ಚಿತ್ರ ಬಿಡಿಸುವುದು, ಹೀಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿ ನಿಮ್ಮ ಮಕ್ಕಳನ್ನು ಆರೋಗ್ಯವಂತರನ್ನಾಗಿಸಿ ಎಂಬುದೊಂದು ನಮ್ಮ ಕಳ ಕಳಿಯ ರಿಕ್ವೆಸ್ಟ್….ಪ್ಲೀಸ್….

  • ಸ್ವರ್ಣ ಭಟ್

POPULAR  STORIES :

ನಾಗರಹಾವಿಗೆ ಎರಡು ಕಾಲು..! ಜನರು ದಂಗುಬಡಿದು ಹೋದರು..!

ಬಾಲಿವುಡ್ ಮಂದಿಯ ತಲೆ ಖಾಲಿಯಾಗಿದೆ..! ಅದು ಬಾಲಿವುಡ್ ಅಲ್ಲ, `ಖಾಲಿವುಡ್’

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

ಅಫ್ರಿದಿ ಮಗಳಿಗೆ ಕ್ಯಾನ್ಸರ್..! ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸಾವಿನ ಸುದ್ದಿ..!

ಈ ವ್ಯಕ್ತಿಯನ್ನ ಗರ್ಭಿಣಿ ಅನ್ನೋಕೆ ಕಾರಣವೇನು ಗೊತ್ತಾ..? ಹೊಟ್ಟೆಯಲ್ಲಿದ್ದದ್ದು ಮಗುವಲ್ಲದೆ ಮತ್ತೇನು..?

ಒಂದು ವಾರ ಉಚಿತ ಯೋಗ ವಿತ್ ಹಿರೋಯಿನ್ ಸಂಜನಾ..!!

ಸತ್ತಮೇಲೂ ಇವರು ಗ್ರೇಟ್..!! ಸೆಲೆಬ್ರಿಟಿಗಳೆಂದರೇ ಹೀಗಿರಬೇಕು..?

ಬ್ಲೂ ಫಿಲಂ ನಟಿ ಶಕೀಲಾಳನ್ನು ಅವಳಪ್ಪ ಹೊಡೆದು ಸಾಯಿಸಿಬಿಡುತ್ತಿದ್ದ..! ಶಕೀಲಾ ಲೈಫ್ ಸ್ಟೋರಿ.

LEAVE A REPLY

Please enter your comment!
Please enter your name here