ಜಯಲಲಿತ ಜೀವನಾಧಾರಿತ ಸಿನಿಮಾ ಮಾಡ್ತಾರಂತೆ ಆರ್.ಜಿ.ವಿ..!

Date:

ಬರೀ ಕಾಂಟ್ರವರ್ಸಿ ಹೇಳಿಕೆ ನೀಡೊ ಮೂಲಕ ಬೇಕಂತ್ಲೆ ವಿವಾದಗಳನ್ನು ಎಳೆದುಕೊಳ್ಳುತ್ತಿದ್ದ ವಿವಾದಿತ ನಿರ್ದೇಶಕ ರಾಮ್‍ಗೋಪಾಲ್ ವರ್ಮ ಈಗ ಮತ್ತೊಂದು ವಿವಾದಾತ್ಮಕ ಸಿನಿಮಾ ಮಾಡಲು ಮುಂದಾಗಿದ್ದಾರೆ. ಥ್ರಿಲ್ಲರ್, ಭೂಗತ ಜಗತ್ತು, ರಾಜಕೀಯ, ಹಾರಾರ್ ಹೀಗೆ ಯಾವುದೇ ವಿಷ್ಯ ಇರ್ಲಿ ಅದಕ್ಕೆ ಜೀವ ತುಂಬೊ ಕೆಲಸವನ್ನು ಮಾಡೋ ಆರ್‍ಜಿವಿ ಈಗ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವಾನಾಧರಿತ ಸಿನಿಮಾ ಮಾಡೋಕೆ ಹೊರ್ಟಿದ್ದಾರಂತೆ..!
ರಾಮ್‍ಗೋಪಾಲ್ ವರ್ಮ ವಿವಾದಗಳು ನಮಗೆ ಗೊತ್ತೆ ಇದೆ. ಕೇವಲ ಅವ್ರ ಮೂವಿಗಳು ಮಾತ್ರ ವಿವಾದವನ್ನು ಸೃಷ್ಠಿ ಮಾಡ್ಲಿಲ್ಲ. ಬದ್ಲಾಗಿ ಅವರ ರಿಯಲ್ ಲೈಫ್ನಲ್ಲೂ ವಿವಾದವನ್ನು ಎಳೆದುಕೊಳ್ತಾನೆ ಇರ್ತಾರೆ. ಅದಕ್ಕೆ ಸೂಕ್ತ ನಿದರ್ಶನ ಅಂದ್ರೆ ಕಳೆದ ದಿನಗಳ ಹಿಂದೆ ರಜಿನಿಕಾಂತ್‍ರ ವಿರುದ್ದ ಮಾತನಾಡಿ ವಿವಾದವನ್ನು ಸೃಷ್ಟಿಸಿದ್ದ ಬೆನ್ನಲ್ಲೇ ಇತ್ತೀಚಿಗೆ ಬಿಡುಗಡೆಗೊಂಡ ಕೋಟಿಗೋಬ್ಬ-2 ಚಿತ್ರದಲ್ಲಿ ವಿಷ್ಣುವರ್ಧನ್‍ಗಿಂತ ಸುದೀಪ್ ಚೆನ್ನಾಗಿ ನಟಿಸಿದ್ದಾರೆ ಎಂದು ಟ್ವೀಟ್ ಮಾಡೋ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ರು. ರಾಜಕೀಯಕ್ಕೆ ವಿಚಾರದಲ್ಲಿ ನೋಡೊದಾದ್ರೆ ಆಟಲ್ ಬಿಹಾರಿ ವಾಜಪೇಯಿ, ಪಿ.ವಿ ನರಸಿಂಹರಾವ್, ಚಂದ್ರಶೇಖರ್ ಸಿಂಗ್ ಹಿಂದೆ ಕುಳಿತಿದ್ದು ಮುಂದೆ ಸೋನಿಯಾ ಗಾಂಧಿ ಕುಳಿತಿರುವ ಚಿತ್ರ ಹಾಕಿ ಹಿಂದೆ ಕುಳಿತುಕೊಳ್ಳುವವರಿಗೆ ಕೆಟ್ಟ ಚಾಳಿ ಇರುತ್ತೆದೆ ಎಂದು ಟ್ವೀಟ್ ಮಾಡಿ ವಿವಾದಕ್ಕೆ ಗುರಿಯಾಗಿದ್ದು ಗೊತ್ತೇ ಇದೆ. ಸ್ವಮೇಕ್ ಚಿತ್ರಗಳನ್ನು ತೆರೆಯ ಮೇಲೆ ತರುವಲ್ಲಿ ನಿಸ್ಸೀಮನಾಗಿರುವ ರಾಮ್‍ಗೋಪಾಲ್, ಇವರಿಗಿಂತ ಸೂಪರ್ ಡೂಪರ್ ಸಿನಿಮಾ ಕೊಡೋಕೆ ಯಾರಿಂದ್ಲೂ ಸಾಧ್ಯ ಇಲ್ವೇನೊ… ಮುಂಬೈ ಆಟ್ಯಾಕ್ ಕುರಿತಾದ ಚಿತ್ರ ಇರಬಹುದು, ಭೂತ್, ಕಿಲ್ಲಿಂಗ್ ವೀರಪ್ಪನ್, ರಕ್ತಚರಿತ ಹೀಗೆ ಸಾಲು ಸಾಲು ರಿಯಲ್ ಚಿತ್ರಗಳನ್ನು ಮಾಡ್ತಾ ಬಂದ ನಿರ್ದೇಶಕ ಅಂದ್ರೆ ಅದು ವರ್ಮಾ. ವೀರಪ್ಪನ್ ಕುರಿತಾದ ಚಿತ್ರಗಳನ್ನು ಮಾಡಿ ಸಕ್ಸಸ್ ಕಂಡಿರುವ ವರ್ಮಾ ಈಗ ಮತ್ತೊಂದು ರಿಯಲ್ ಸ್ಟೋರಿ ಆಧಾರಿತವಾದ ಚಿತ್ರ ಮಾಡಲು ಹೋರಟ್ಟದ್ದಾರೆ. ಆ ರಿಯಲ್ ಸ್ಟೋರಿ ಬೇರ್ಯಾರದ್ದೂ ಅಲ್ಲ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರದ್ದು. ಸಿನಿಮಾ ರಂಗದಿಂದ ರಾಜಕೀಯ ವಲಯದವರೆಗೂ ತಮಿಳುನಾಡಿನ ಅಮ್ಮಾ ಬೆಳೆದು ಬಂದ ದಾರಿ, ಅಲ್ಲಿ ಅವರು ಅನುಭವಿಸಿದ್ದ ಕಷ್ಟ ನಷ್ಟಗಳು ಹೀಗೆ ಇನ್ನು ಅನೇಕ ವಿಚಾರಗಳ ಕುರಿತು ಅವರ ಸಂಪೂರ್ಣ ಜೀವನ ಚಿತ್ರಣವನ್ನು ಎಳೆಎಳೆಯಾಗಿ ಚಿತ್ರದ ಮೂಲಕ ಬಿಂಬಿಸಲು ಹೊರಟಿದ್ದಾರಂತೆ ಆರ್‍ಜಿವಿ..!
ಸದಾ ಕಾಂಟ್ರವರ್ಸಿಯಲ್ಲಿರೊ ಈ ಟಾಲಿವುಡ್ ನಿರ್ದೇಶಕನಿಗೆ ಜಯಲಲಿತಾ ಜೀವನಾಧಾರಿತ ಸಿನಿಮಾ ಮಾಡೋಕೆ ಅನುಮತಿ ಸಿಗುತ್ತಾ..? ಕಾದು ನೋಡಬೇಕಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

LIVE : ಬಿಗ್‍ಬಾಸ್ ಕನ್ನಡ ಸೀಸನ್-04 ಈ ಮೂವರಲ್ಲಿ ಫೈನಲ್ ತಲಪುವವರು ಯಾರು.?

ರಾಜಮೌಳಿಯ ಮಹಾಭಾರತದಲ್ಲಿ ಸುದೀಪ್ ಕರ್ಣ?

ಸೋಷಿಯಲ್ ಮೀಡಿಯಾದಲ್ಲಿ ಕಿರಿಕ್ ಕೀರ್ತಿ ಬಗ್ಗೆ ಅಪಪ್ರಚಾರ

ಮೋದಿಗೆ ಧನ್ಯವಾದ ಹೇಳಿದ ಒಬಾಮಾ ಯಾಕೆ ಗೊತ್ತಾ.?

ಮೆಣಸಿನಕಾಯಿ ತಿಂದು ಬೀಗಿದ ಪ್ರಥಮ್.

ಮನಿ ಪ್ಲಾಂಟ್ ಮನೆಗೆ ಸೊಬಗೋ ಮನಿಯ ಸಂಕೇತವೋ???

ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?

ವಿಕೃತ ಕಾಮುಕ: 14 ವರ್ಷದಲ್ಲಿ 700 ರೇಪ್..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...