ಕನ್ನಡ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಒಬ್ಬರಾದ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಅವರು ಬಿಜೆಪಿ ಸೇರಲಿದ್ದಾರೆ…?!
ಬಿಜೆಪಿ ನಾಯಕರು ಜಯಶ್ರೀನಿವಾಸನ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಪಕ್ಷ ಸೇರಿದ ಬಳಿಕ ತಮ್ಮ ಜನಪ್ರಿಯತೆಯಿಂದ ತಮಗೆ ಟಿಕೆಟ್ ಸಿಗುತ್ತೆ ಎಂಬ ನಿರೀಕ್ಷೆ ಜಯಶ್ರೀನಿವಾಸನ್ ಅವರದ್ದು ಎಂದು ಹೇಳಲಾಗುತ್ತಿದೆ.
ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಶ್ರೀನಿವಾಸನ್ ಅವರಿಗೆ ಸಿನಿಮಾದಲ್ಲೂ ಅವಕಾಶ ಸಿಕ್ಕಿದೆ. ರಿವಾನ್ ವಿಕ್ರಮ್ ನಿರ್ಮಾಣದ. y5=x ಚಿತ್ರದಲ್ಲಿ ಜಯಶ್ರೀನಿವಾಸನ್ ಹೀರೋ…! ಮಾರ್ಚ್ ಮೊದಲವಾರದಿಂದ ಶೂಟಿಂಗ್ ಶುರುವಾಗಲಿದೆ.ಇದರ ಜೊತೆಗೆ ಮತ್ತೆರಡು ಚಿತ್ರಗಳಿಗೂ ಶ್ರೀನಿವಾಸನ್ ಸಹಿ ಮಾಡಿದ್ದಾರೆ. ಈ ನಡುವೆ ರಾಜಕೀಯಕ್ಕೂ ಎಂಟ್ರಿಕೊಡ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.