ನಾವು ಎಲ್ಲರಿಗಿಂತ ವಿಭಿನ್ನವಾಗಿ ಗುರುತಿಸಿಕೊಳ್ಳಬೇಕು ಎಂಬ ಆಸೆ ಸಾಮಾನ್ಯವಾಗಿ ಎಲ್ಲರಲ್ಲಿರುತ್ತದೆ. ಬಹುತೇಕರು ಮದ್ವೆ ಮುಂತಾದ ಸವಿ ಸಂದರ್ಭಗಳನ್ನು ವಿಭಿನ್ನವಾದ ಶೈಲಿಯಲ್ಲಿ ಸಾಕ್ಷೀಕರಿಸುತ್ತಾರೆ.
ನೀವು ನೀರಿನಲ್ಲಿ, ವಿಮಾನದಲ್ಲಿ, ರೋಪ್ ವೇ ನಲ್ಲಿ ಮದ್ವೆ ಯಾಗಿರೋದನ್ನು ನೋಡಿದ್ದೀರಿ,ಕೇಳಿದ್ದೀರಿ…! ಆದ್ರೆ, ಜೆಸಿಬಿಯಲ್ಲಿ ಮದ್ವೆ ಆಗಿದ್ದನ್ನು ಕಂಡಿದ್ದೀರ..?
ಇಂಥಾದ್ದೊಂದು ಮದ್ವೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಂಟ್ಯಾರ್ ಈ ಮದ್ವೆಗೆ ಸಾಕ್ಷಿಯಾಗಿದೆ.
ಜೆಸಿಬಿ ಆಪರೇಟರ್ ಚೇತನ್ ಹಾಗೂ ಮಮತಾ ಅವರ ಮದುವೆ ದಿಬ್ಬಣ ಹೀಗೆ ಜೆಸಿಬಿಯಲ್ಲಿ ನಡೆದಿರೋದು .ಮದ್ವೆಯಲ್ಲೂ ಕೆಲಸದ ಪ್ರೀತಿಯನ್ನು ಚೇತನ್ ತೋರಿಸಿದ್ದಾರೆ.