ಹುತಾತ್ಮ ಯೋಧರ ಕುಟುಂಬಸ್ಥರಿಗೆ ಸರ್ಕಾರಿ ನೌಕರಿ

0
52

ಹುತಾತ್ಮ ಯೋಧರ ಕುಟುಂಬಸ್ಥರಿಗೆ ಪರಿಹಾರ ಧನ ಮತ್ತು ಸೈಟ್ ಕೊಡುವುದರ ಬದಲು, ಅನಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ಕೊಡ್ತೇವೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಕೆಪಿಎಸ್ ಸಿ ಆಯ್ಕೆಯಲ್ಲಿ ಡಿ ಗ್ರೂಪ್ ಗೆ ವೈವಾ ಮಾಡದೇ, ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಲು ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ರೈತ ವಿದ್ಯಾ ನಿಧಿ ಯೋಜನೆ ವಿಸ್ತರಣೆ ಮಾಡಲು ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಪ್ಪಳ, ಕೊಡಗು ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ತೆರೆಯಲು ಸಹ ತೀರ್ಮಾನ ಮಾಡಲಾಗಿದೆ ಎಂದರು. ಇದೇ ವೇಳೆ ಡಿಸಿಸಿ ಬ್ಯಾಂಕ್ ನ ಹಗರಣದ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಇದರ ಬಗ್ಗೆ ಮಾತಾಡಬಾರದು ಅಂದುಕೊಂಡಿದ್ದೆ, ಆದರೆ ಶೀಘ್ರವೇ ಈ ಬಗ್ಗೆ ಸುದ್ದಿಗೋಷ್ಢಿ ಕರೆದು ಮಾತಾಡುತ್ತೀನಿ. ಬ್ಯಾಂಕಿನ ಅಕ್ರಮದ ಕುರಿತು ದಾಖಲೆ ಬಿಡುಗಡೆ ಮಾಡ್ತೀನಿ ಎಂದು ಕೆ. ಎನ್. ರಾಜಣ್ಣ ವಿರುದ್ಧ ಸಮರ ಸಾರಿದ್ದಾರೆ. ಬಳಿಕ ಗುತ್ತಿಗೆದಾರ ಕೆಂಪಣ್ಣ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, Who is kempanna.. ಕೆಂಪಣ್ಣ ಏನ್ ಆಟ ಆಡ್ತಿದ್ಧಾರಾ..? ಕೆಂಪಣ್ಣ ದಾಖಲೆ ಕೊಟ್ರೆ ಕಮಿಟಿ ಮಾಡಿ ತನಿಖೆ ಮಾಡ್ತೀವಿ. ಎಲ್ಲಾ MLAಗಳು ಕರೆಪ್ಟ್ ಅಂದರೆ ರಾಜ್ಯಕ್ಕೆ ಗೌರವ ಬರುತ್ತೇನ್ರಿ..? ಅವರು ಎಲ್ಲ ಶಾಸಕರ ಮೇಲೂ ಆರೋಪ ಮಾಡಿದ್ದಾರೆ. ಕೆಂಪಣ್ಣ ಗುತ್ತೆಗೆದಾರರಾಗಿ ಎಲ್ಲಿ ಕೆಲಸ ಮಾಡಿದ್ದಾರೆ ಅಂತ ಗೊತ್ತಿಲ್ಲ. ಹೀಗಿರುವಾಗ ಅವರ ಆರೋಪವನ್ನು ಹೇಗೆ ಪರಿಗಣಿಸೋದು ಎಂದು ಸಚಿವರು ಪ್ರಶ್ನೆ ಮಾಡಿದ್ಧಾರೆ

LEAVE A REPLY

Please enter your comment!
Please enter your name here