ರಿಲಯಾನ್ಸ್ ಜಿಯೋ 4ಜಿ ಎಷ್ಟರ ಮಟ್ಟಿಗೆ ಜನ ಮನ್ನಣೆ ಪಡೀತಾ ಬಂತೋ ಅದೇ ಗ್ರಾಹಕರು ಈ ಜಿಯೋನಿಂದ ಸಾಕಷ್ಟು ತೊಂದರೆಗಳನ್ನ ಅನುಭವಿಸುತ್ತಿದ್ದಾರೆ. ಆದರೆ ತಾನು ಮಾಡದ ತಪ್ಪಿಗೆ ಶಿಕ್ಷೆಯನ್ನ ಜಿಯೋ ಅನುಭವಿಸ್ತಾ ಇದೆ. ಮೂರು ತಿಂಗಳ ಕಾಲ ಫ್ರೀ 4ಜಿ ಡೆಟಾ ಹಾಗೂ ಕಾಲ್ ವ್ಯವಸ್ಥೆಯನ್ನು ಗ್ರಾಹಕರಿಗೆ ನೀಡಿದ್ದೇ ತಡ ತನ್ನ ಎದುರಾಳಿ ಏರ್‍ಟೆಲ್ ಐಡಿಯಾ ವೊಡಾಫೋನ್‍ಗಳಿಗೆ ಭಾರೀ ಪ್ರಮಾಣದ ಒಡೆತ ಬಿತ್ತು. ಈ ಹಿನ್ನಲೆಯಲ್ಲಿ ಈ ಮೂರು ಟೆಲಿಕಾಮ್ ಸಂಸ್ಥೆಗಳು ರಿಲಯಾನ್ಸ್ ಸಿಮ್‍ನಿಂದ ತಮ್ಮ ನೆಟ್‍ವರ್ಕ್‍ಗಳಿಗೆ ಕರೆ ಮಾಡಿದರೆ ಅದ್ಯಾವ ಕರೆಗಳೂ ಕೂಡ ಕನೆಕ್ಟ್ ಆಗದೇ ಇರುವ ರೀತಿಯಲ್ಲಿ ಮಾಡಿಕೊಂಡಿದ್ದಾರೆ. ಇದೀಗ ಈ ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳಾಗುತ್ತಿದ್ದು, ಇವಕ್ಕೆಲ್ಲಾ ಮೂಲ ಕಾರಣ ಈ ಮೂರು ಸಂಸ್ಥೆಗಳೆಂದು ಟ್ರಾಯ್ ಬೊಟ್ಟು ಮಾಡಿದೆ. ಅದೇ ವಾಸ್ತವ ಎನ್ನುವಂತೆ ಜಿಯೋನಿಂದ ಕರೆ ಮಾಡಲಾದ ಯಾವುದೇ ಕರೆಗಳನ್ನ ಈ ಸಂಸ್ಥೆಯ ನೆಟ್‍ವರ್ಕ್ ಪಡೆದುಕೊಳ್ಳುತ್ತಿಲ್ಲ ಎನ್ನುವುದು ಜಿಯೋ ಗ್ರಾಹಕರ ವಾದ. ವರದಿ ಹೇಳುವಂತೆ ಪ್ರತಿದಿನ ಜಿಯೋನಿಂದ ಈ ಮೂರು ನೆಟ್‍ವರ್ಕ್‍ಗಳಿಗೆ ಕರೆ ಮಾಡುವಾಗ 12 ಕೋಟಿಗೂ ಅಧಿಕ ಕರೆಗಳನ್ನು ಕಾಲ್ ಡ್ರಾಪ್ ಮಾಡಲಾಗ್ತಾ ಇದೆ ಎಂಬ ಗಂಭೀರವಾದ ಅಂಶ ಬೆಳಕಿಗೆ ಬಂದಿದೆ.
ಇನ್ನು ಟ್ರಾಯ್ ನಿಯಮದ ಪ್ರಕಾರವಾಗಿ ಯಾವುದೇ ನೆಟ್‍ವರ್ಕ್‍ನಲ್ಲಿ ಕಾಲ್ ಡ್ರಾಪ್ ಸಮಸ್ಯೆಯು ಶೇ.5ರಷ್ಟು ಮೀರಬಾರದೆಂಬುದು ಟ್ರಾಯ್‍ನ ನಿಯಮ. ಆದರೆ ಜಿಯೋ ವಿಷಯಕ್ಕೆ ಬಂದರೆ ಅದರ ಪ್ರಮಾಣ ಶೇ.80ಕ್ಕೂ ಅಧಿಕ ಎನ್ನಲಾಗ್ತಾ ಇದೆ. ಇದರಿಂದ ಟ್ರಾಯ್ ಸಂಸ್ಥೆ ಈ ಮೂರು ಸಂಸ್ಥೆಯ ಪ್ರತಿನಿಧಿಗಳನ್ನು ಕರೆಸಿ ವಿಚಾರಣೆ ನಡೆಸಲಾಗುವುದು ಎಂದು ವರದಿ ಮಾಡಿದೆ. ಬೇರೆ ನೆಟ್‍ವರ್ಕ್‍ನಿಂದ ಬಂದ ಕರೆಗಳನ್ನು ಸ್ವೀಕರಿಸುವ ಸಲುವಾಗಿ ಆಯಾ ನೆಟ್‍ವರ್ಕ್ ಸಂಸ್ಥೆಗಳು ಪಾಯಿಂಟ್ ಆಫ್ ಇಂಟರ್ ಕನೆಕ್ಷನ್ (ಪಿಓಐ) ಸೇವೆಯನ್ನು ಒದಗಿಸಬೇಕು. ಆದರೆ ರಿಲಯಾನ್ಸ್ ನೆಟ್‍ವರ್ಕ್‍ನಿಂದ ಬಂದಂತಹ ಕರೆಗಳು ಈ ಮೂರು ಸಂಸ್ಥೆಗಳು ಸರಿಯಾಗಿ ಒದಗಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ. ಆದರೆ ಈ ಮೂರು ಸಂಸ್ಥೆಗಳು ತಮ್ಮ ಮೇಲೆ ಬಂದ ಆರೋಪವನ್ನು ನಯವಾಗಿ ತಿರಸ್ಕರಿಸಿದ್ದಾರೆ. ನಾವು ಯಾವುದೇ ರೀತಿಯ ಕಾಲ್‍ಡ್ರಾಪ್ ಮಾಡ್ತಾ ಇಲ್ಲ. ರಿಲಯಾನ್ಸ್ ಜಿಯೋಗಾಗಿ ನಮ್ಮ ಸಂಸ್ಥೆಗಳು ಪಿಓಐಗಳನ್ನು ಸರಿಯಾಗಿ ಮಾರ್ಪಾಟು ಮಾಡಿದ್ದೇವೆ ಎಂದು ಹೇಳಿಕೊಂಡಿದೆ. ಇನ್ನು ಜಿಯೋ ನೆಟ್‍ವರ್ಕ್‍ಗಳಿಗಾಗಿ ಏರ್‍ಟೆಲ್ ವೊಡಾಫೋನ್ ಹಾಗೂ ಐಡಿಯಾ ಸಂಸ್ಥೆಗಳು ಸ್ಥಾಪಿಸಿಕೊಂಡಿರೋ ಪಿಓಐಗಳ ಸಂಖ್ಯೆ ಕ್ರಮವಾಗಿ 651, 462, 523 ಇದೆ. ಆದರೆ ಜಿಯೋ ನೆಟ್‍ವರ್ಕ್‍ಗಳಿಗಾಗಿ ಇವುಗಳೆಲ್ಲವೂ ಸ್ಥಾಪಿಸಿಕೊಳ್ಳಬೇಕಾದ ಪಿಓಐ ಸಂಖ್ಯೆ 4 ಸಾವಿರದಿಂದ ಐದು ಸಾವಿರ ಎನ್ನಲಾಗಿದೆ.
ಏರ್‍ಟೆಲ್, ಐಡಿಯಾ, ವೊಡಾಫೋನ್ ಸಂಸ್ಥೆಗಳು ಕಾಲ್ ಡ್ರಾಪ್ ಮಾಡ್ತಾ ಇದಾರೆ ಎನ್ನುವ ಅಂಶ ಬಹಿರಂಗವಾದರೆ, ಅಥವಾ ಉದ್ದೇಶಪೂರ್ವಕವಾಗಿ ಸರಿಯಾದ ನೆಟ್‍ವರ್ಕ್ ಒದಗಿಸುತ್ತಿಲ್ಲವೆಂಬ ಅಂಶ ಸಾಬೀತಾದರೆ ಟ್ರಾಯ್ ಸುಮಾರು 9900 ಕೋಟಿ ರೂ ಈ ಮೂರು ಸಂಸ್ಥೆಗಳಿಗೆ ದಂಡ ವಿಧಿಸುವ ಸಾಧ್ಯತೆ ಹೆಚ್ಚಿದೆ.
Like us on Facebook The New India Times
POPULAR STORIES :
“ಅಣ್ಣಾ ಕಿಸಾನ್ ಬಾಬುರಾವ್ ಹಜಾರೆ” ಈ ಬಾರಿಯ ಕಪಿಲ್ ಶರ್ಮಾ ಶೋನಲ್ಲಿ..!
ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?
ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!
ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!