ಜಾನ್ ಸೀನಾ… ಈತನ ಹೇಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.. ಸಣ್ಣ ಮಕ್ಕಳನ್ನು ಕರೆದು ಇವರ ಫೋಟೋ ತೋರಿಸಿ ಇವರ್ಯಾರು ಪುಟ್ಟ ಅಂದ್ರೆ ಮೊದಲು ಹೇಳುವುದು ಡಬ್ಲ್ಯೂಡಬ್ಲ್ಯೂಇ ಸೂಪರ್‍ಸ್ಟಾರ್ ಅಂತ.. ಅಷ್ಟು ಪ್ರಸಿದ್ದ ಇವರ ಹೆಸರು. ಅರೆ ಈಗ ಇವರ ವಿಷಯ ಯಾಕೆ ಅಂತಿರಾ… ನಾವು ಇವರನ್ನ ಸುದ್ದಿ ಮಾಡ್ತಾ ಇಲ್ಲ, ಬದಲಾಗಿ ಅವರೆ ಈಗ ವಿಶ್ವದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಆಗ್ತಾ ಇದ್ದಾರೆ..
ಅದೇನು ವಿಷಯ ಅಂತೀರಾ?.. ಬೇರೇನೂ ಅಲ್ಲ ಜಾನ್ ಸೀನಾ ಅವರು ತಮ್ಮ ಫೇಸ್ ಬುಕ್ ಅಕೌಂಟ್‍ನಲ್ಲಿ ಇಂಡಿಯನ್ ಕ್ರಿಕೆಟ್ ಅಗ್ರೆಸೀವ್ ಆಟಗಾರ ವಿರಾಟ್‍ಕೊಹ್ಲಿಯ ಚಿತ್ರವನ್ನು ಹರಿಬಿಟ್ಟಿದ್ದಾರೆ. ಆದ್ದರಿಂದ ಈಗ ಎಲ್ಲರಲ್ಲೂ ಕಾಡಿರೋ ಪ್ರಶ್ನೆ ಅಂದರೆ ಇವರಿಬ್ಬರ ನಡುವೆ ಏನಿದೆ ಸಂಭಂದ ಎಂದು. ಆದರೆ ಅದರ ನಿಜವಾದ ವಿಷಯವೇ ಬೇರೆ ಇದೆ ಇಲ್ಲಿ ನೋಡಿ… ಡಬ್ಲ್ಯೂಡಬ್ಲ್ಯೂಇ ಸೂಪರ್‍ಸ್ಟಾರ್ ಖ್ಯಾತಿಯ ಜಾನ್ ಸೇನಾ ಈಗ ತಮ್ಮ ಜರ್ಸಿಯ ಬ್ರಾಂಡ್‍ನ್ನು ಬದಲಾಯಿಸಿದ್ದಾರೆ.
ಇನ್ನು ಮುಂದೆ ಜಾನ್ ಸೀನಾ ನೀಲಿ ಅಂಗಿಯ ಬ್ಲೀಡ್ ಬ್ಲ್ಯೂ ನಲ್ಲಿ ಕಾಣಿಸಿಕೊಳಲಿದ್ದು, ಈ ಹಿಂದೆ ಹಲವಾರು ಪಂದ್ಯಗಳಲ್ಲಿ ಭಾರತೀಯ ಕ್ರಿಕೆಟ್ ತಂಡ ಈ ಬಟ್ಟೆಯಲ್ಲಿ ಮಿಂಚಿತ್ತು.
ಆದರೆ ಈಗ ಇದೇ ಜರ್ಸಿಯಲ್ಲಿ ಜಾನ್‍ಸೀನಾ ಮಿಂಚಲಿದ್ದಾರೆ. ಈ ಕಾರಣದಿಂದಲೇ ಕೊಹ್ಲಿಯ ಬ್ಲೀಡ್ ಬ್ಲ್ಯೂ ಜರ್ಸಿಯ ಫೋಟೋವನ್ನು ಅಪ್ಲೋಡ್ ಮಾಡಿ ಸುದ್ದಿಯಾಗಿದ್ದಾರೆ.
POPULAR STORIES :
ಸುಲ್ತಾನ ಸಿನಿಮಾ ಗಳಿಸಿದ ಒಟ್ಟು 500 ಕೋಟಿ ಆದಾಯದಲ್ಲಿ ಸಲ್ಮಾನ್‍ನ ಗಳಿಕೆ ಎಷ್ಟಿರಬಹುದು ???
ಕಣ್ಣು ಕಾಣದಿದ್ದರೇನು ಗೆಳತಿ ನಾನಿಲ್ಲವೇ ನಿನ್ನ ಕಣ್ಣಾಗಿ…!
ಬಣ್ಣ ಲೇಪಿತ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ರಾಜ್ಯದಲ್ಲಿ ಸಂಪೂರ್ಣ ನಿಷೇಧ.
ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ… ನಿಮಗಿಲ್ಲ ಸರ್ಕಾರವನ್ನು ಟೀಕಿಸುವ ಅಧಿಕಾರ.!
ತಿಮ್ಮಪ್ಪನ ಉರುಳು ಸೇವೆಗೆ ಆಧಾರ್ ಕಡ್ಡಾಯ..!
ಇದು ಅಂಧ ಡಾಕ್ಟರ್‍ನ ಅಮೇಜಿಂಗ್ ಸ್ಟೋರಿ..!
ಹ್ಯಾಟ್ರಿಕ್ ಹೀರೋ ಶಿವಣ್ಣ ಕ್ರಿಕೆಟ್ ಆಡಿದ್ರು..! ಬ್ಯಾಟಿಂಗ್, ಬೌಲಿಂಗ್ ಮಾಡಿ ಮಿಂಚಿದ್ರು..,!
ಕೊನೆಯುಸಿರೆಳೆಯುತ್ತಿದ್ದ ಅವಳ ಮದುವೆಯಾಯ್ತು..! ಅವಳಿಷ್ಟದಂತೆ ಮದುವೆ, ಮುಂದೇನಾಯ್ತು?