ಇವರೇ ಕೊನೆಯ ಬಾರಿಗೆ ಅಯ್ಯಪ್ಪನ ದರ್ಶನ ಪಡೆದ ಮಹಿಳೆ

1
143

ಸುಪ್ರೀಂಕೋರ್ಟ್ ಎಲ್ಲಾ ವಯೋಮಾನನದ ಮಹಿಳೆಯರೂ ಕೂಡ ಅಯ್ಯಪ್ಪನ ದರ್ಶನ ಪಡೆಯಬಹುದು ಎಂದು ತೀರ್ಪಿತ್ತಿರೋದು ನಿಮ್ಗೆ ಗೊತ್ತೇ ಇದೆ.‌

ಆದರೆ, ಶಬರಿ ಮಲೆಗೆ 10-50 ವರ್ಷ ವಯೋಮಾನದ ಮಹಿಳೆಯರ ಪ್ರವೇಶವನ್ನು ನಿಷೇಧಿಸಿದಾಗ ಕೊನೆಯ ಬಾರಿ ಅಯ್ಯಪ್ಪನ ದರ್ಶನ ಪಡೆದ ಮಹಿಳೆ ಯಾರ್ ಗೊತ್ತಾ?
1994-95 ರ ಅವಧಿಯಲ್ಲಿ ಹೈಕೋರ್ಟ್ ದೇವಸ್ಥಾನದ ಆಡಳಿತ ಮಂಡಳಿ ಅಯ್ಯಪ್ಪನ ದರ್ಶನಕ್ಕೆ ಯಾವ ಸುರಕ್ಷಾ ಏರ್ಪಾಡುಗಳನ್ನು ಮಾಡಿದೆ ನೋಡ್ಕೊಂಡು ಬಂದು ವರದಿ ಸಲ್ಲಿಸಿ ಅಂತ ಜಿಲ್ಲಾಧಿಕಾರಿಗೆ ಸೂಚಿಸಿತ್ತು. ಆಗ ಜಿಲ್ಲಾಧಿಕಾರಿಯಾಗಿದ್ದವರು ಕೆ.ಬಿ ವಲ್ಸಲ ಕುಮಾರಿ. ಇವರೇ ಕೊನೆಯ ಬಾರಿಗೆ ಅಯ್ಯಪ್ಪನ ದರ್ಶನ ಪಡೆದ ಮಹಿಳೆ.‌


41 ವರ್ಷದ ವಲ್ಸಲ ಕುಮಾರಿ ಪಥನಂತಿಟ್ಟ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಆ ವೇಳೆ ಭಕ್ತಾಧಿಗಳಿಗೆ ದೇವಸ್ಥಾನದ ಆಡಳಿತ ಮಂಡಲಿ ಏನೆಲ್ಲಾ ಏರ್ಪಾಡುಗಳನ್ನ ಮಾಡಿದೆ ಎಂಬುದನ್ನು ಖುದ್ದು ವೀಕ್ಷಿಸಿ, ಖಾತ್ರಿ ಪಡಿಸಿಕೊಳ್ಳಲು ಆ ಸಂದರ್ಭದಲ್ಲಿ ಅವರು ಒಟ್ಟು 4 ಬಾರಿ ಅಯ್ಯಪ್ಪನ ದರ್ಶನ ಪಡೆದುಕೊಂಡಿದ್ದರಂತೆ.

1 COMMENT

LEAVE A REPLY

Please enter your comment!
Please enter your name here