‘ಕಾಲ’ ಸಿನಿಮಾ ಬಿಡುಗಡೆಯಾಗುತ್ತಿರುವ ಚಿತ್ರಮಂದಿರಗಳಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ ರಜನಿಕಾಂತ್ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.
‘ನಾನೇನು ತಪ್ಪು ಮಾಡಿಲ್ಲ. ಕಾವೇರಿ ವಿಚಾರವಾಗಿ ಸುಪ್ರೀಂಕೋರ್ಟ್ ಏನು ಹೇಳಿದೆಯೋ ಅದನ್ನೇ ನಾನೂ ಹೇಳಿದ್ದೇನೆ. ಈ ಸಿನಿಮಾವನ್ನು ಯಾರು ನೋಡಬೇಕು ಅಂತಿದ್ದಾರೋ ಅವರಿಗೆ ತೊಂದರೆ ಕೊಡ್ಬೇಡಿ. ಸಿನಿಮಾ ರಿಲೀಸ್ ಆಗೋದಕ್ಕೆ ಸಹಕಾರ ನೀಡಿ ಅಂತ ನಾನು ಬಹಳ ನಮ್ರತೆಯಿಂದ ತಮ್ಮ ಬಳಿ ಕೇಳಿ ಕೊಳ್ತೀನಿ” ಎಂದು ಕನ್ನಡದಲ್ಲೇ ರಜನಿಕಾಂತ್ ಕೇಳಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಕಾಲ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಲ ಚಿತ್ರತಂಡ ಹೈಕೋರ್ಟ್ ಮೊರೆ ಹೋಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ , ಕರ್ನಾಟಕದಲ್ಲಿ ಕಾಲ ಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಲವಂತ ಪಡಿಸಲಾಗದು. ಚಿತ್ರಮಂದಿರಗಳಿಗೆ ಭದ್ರತೆ ನೀಡೋದನ್ನು ಪರಿಗಣಿಸಬಹುದಷ್ಟೇ ಎಂದು ಹೇಳಿತ್ತು.
ಭದ್ರತೆ , ಕಾನೂನು ಸುವ್ಯವಸ್ಥೆ ಸರ್ಕಾರದ ಹೊಣೆ.ಇದರಲ್ಲಿ ವಿಫಲವಾದರೆ ನ್ಯಾಯಾಲಯಕ್ಕೆ ಬನ್ನಿ. ಸಂಘಟನೆಗಳ ಬೆದರಿಕೆ ಇದ್ದರೆ ಸರ್ಕಾರದ ಗಮನಕ್ಕೆ ತನ್ನಿ ಎಂದು ಕೋರ್ಟ್ ಹೇಳಿತ್ತು. ಈಗ ರಜಿನಿಕಾಂತ್ ಸಹ ಚಿತ್ರಮಂದಿರಗಳಿಗೆ ಭದ್ರತೆ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.