ಟೀಸರ್, ಟ್ರೈಲರ್ ಮತ್ತು ಹಾಡುಗಳ ಮೂಲಕ ಸೂಪರ್ ಸ್ಟಾರ್ ರಜನಿ ಅಭಿನಯದ ಕಬಾಲಿ ಈಗಾಗಲೇ ಧೂಳೆಬ್ಬಿಸಿದೆ. ಎಲ್ಲಿ ನೋಡಿದ್ರೂ ರಜನಿ ಮೇನಿಯಾ ಶುರುವಾಗಿದೆ. ಇದೀಗ ಎಲ್ಲರೂ ತಮ್ಮತ್ತ ತಿರುಗಿ ನೋಡುವಂತಹ ದಾಖಲೆ ಮಾಡಿದೆ ಕಬಾಲಿ. ಹೌದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಏರ್ ಏಷ್ಯಾ ಏರ್ ಲೈನ್ ಕಂಪೆನಿ ತಮ್ಮ ವಿಮಾನವೊಂದನ್ನು ಕಬಾಲಿ ಚಿತ್ರಕ್ಕೆಂದು ಮೀಸಲಿಟ್ಟಿದೆ.
ರಜನಿಕಾಂತ್ ಗೆ ವಿಭಿನ್ನವಾಗಿ ಶುಭಕೋರುವ ನಿಟ್ಟಿನಲ್ಲಿ ಹಾಗೂ ಪ್ರಚಾರ ಸಂಬಂಧ ಕಬಾಲಿ ವಿಶೇಷ ವಿಮಾನವನ್ನೇ ಸಿದ್ಧಗೊಳಿಸಲಾಗಿದೆ. ಏರ್ ಏಶ್ಯಾ ವಿಮಾನದ ಹೊರಭಾಗದಲ್ಲಿ ಕಬಾಲಿ ಡಾನ್ ಪಾತ್ರದ ರಜನಿಕಾಂತ್ ಅವರ ಬೃಹತ್ ಚಿತ್ರವನ್ನು ಬಿಡಿಸಲಾಗಿದೆ.
ಸಿನಿಮಾ ರಿಲೀಸ್ ನ ಮೊದಲ ದಿನದ ಶೋಗೆ ರಜನಿ ಅಭಿಮಾನಿಗಳನ್ನು ಏರ್ ಏಶ್ಯಾ ವಿಮಾನದಲ್ಲಿ ಬೆಂಗಳೂರು ಟು ಚೆನ್ನೈಗೆ ಕರೆದೊಯ್ಯುವ ಸಿದ್ಧತೆ ಮಾಡಿಕೊಂಡಿದೆ. ವಿಮಾನದಲ್ಲಿ ಕಬಾಲಿ ವಿಶೇಷ ತಿಂಡಿ, ತಿನಿಸನ್ನು ವಿಮಾನದಲ್ಲಿ ವಿತರಿಸಲಾಗುವುದು ಎಂದು ವರದಿ ಹೇಳಿದೆ.
ವಿಶೇಷ ವಿನ್ಯಾಸದ ಕಬಾಲಿ ವಿಮಾನ ಬೆಂಗಳೂರು, ನವದೆಹಲಿ, ಗೋವಾ, ಪುಣೆ, ಚಂಡೀಗಢ, ಜೈಪುರ, ಗುವಾಹಟಿ, ಇಂಪಾಲ್, ವಿಝಾಗ್ ಮತ್ತು ಕೊಚ್ಚಿಗೆ ಹಾರಾಡಲಿದೆ. ಈ ಮೊದಲು ಕಬಾಲಿ ಜುಲೈ 15ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಸದ್ಯದ ವರದಿ ಪ್ರಕಾರ ಕಬಾಲಿ ಜುಲೈ 22ರಂದು ತೆರೆ ಕಾಣುವ ಸಾಧ್ಯತೆ ಇದೆ ಎಂದು ತಿಳಿಸಿದೆ.
- ಶ್ರೀ
POPULAR STORIES :
ಸತ್ತ ನಂತರವೂ ವ್ಯಕ್ತಿಗಳ ಜತೆ ಸಂವಹನ ನಡೆಸಿ!!
ವಿಮಾನದ ಮೆಟ್ಟಿಲಿನಿಂದ ಬಿದ್ದವಳು ಏನಾದಳು? ಹೆಂಗಿದ್ದ ಮಹಿಳೆ ಹೇಗಾದ್ಲು ಗೊತ್ತಾ?
ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ರಿಂಗಿಂಗ್ ಬೆಲ್ಸ್?
ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಯಲ್ಲಿ ಶೋಭ ಹಸ್ತಕ್ಷೇಪ ಇಲ್ವಂತೆ..!?
ಸುದೀಪ್, ಪ್ರಿಯ ಒಂದಾದ್ರ.? ಮತ್ತೆ ಒಂದಾಯ್ತು ಕಿಚ್ಚನ ಸಂಸಾರ..!?