ಬಳ್ಳಿಯಂತಹ ಸೊಂಟಕ್ಕೊಂದು ಕಮರ್ ಬಂದ್…

Date:

ಹೆಣ್ಣು ಮಕ್ಕಳ ಶೃಂಗಾರಕ್ಕೆ ಏನಿದ್ದರೂ ಕಡಿಮೆಯೇ. ಅನಾದಿ ಕಾಲದಿಂದಲೂ ಬಂದಿರೋ ಸೌಂದರ್ಯ ವರ್ಧಕ, ಸೌಂದರ್ಯ ಸಾಧನಗಳು, ಆಭರಣಗಳು ಕಾಲ ಬದಲಾದಂತೆ ಕೊಂಚ ಹೊಸ ಆವಿಷ್ಕಾರದೊಂದಿಗೆ ಇಂದಿನ ಯುವಜನತೆಯ ವಾರ್ಡ್‍ರೋಬ್‍ನಲ್ಲಿ ಸಂಗ್ರಹವಾಗುತ್ತಿವೆ.


ಹೌದು,ಮೊದಲು ನೀರೆಯರು ಸೀರೆಯನ್ನುಟ್ಟಾಗ ದೊಡ್ಡದಾದ ಬಂಗಾರದ ಡಾಬು ಸೊಂಟದ ಸೌಂದರ್ಯವನ್ನುಇಮ್ಮಡಿಗೊಳಿಸುತ್ತಿದ್ದವು. ಅದೇ ಡಾಬು ಇದೀಗ ವೆಸ್ಟ್ ಚೈನ್, ಬೆಲ್ಲಿ ಚೈನ್ ಅಥವಾ ಕಮರ್‍ಬಂದ್ಗಳಾಗಿ ಮಾರ್ಪಾಟಾಗಿ ಹೊಸ ಟ್ರೆಂಡ್‍ನ್ನೇ ಸೃಷ್ಟಿಸಿ,ಮಧ್ಯ ವಯಸ್ಸಿನ ಸ್ತ್ರೀಯರಿಂದ ಹಿಡಿದು ಟಿನೇಜರ್ಸ್‍ಗಳ ಹಾಟ್ ಫೇವರೇಟಗಳಾಗಿವೆ.


• ಇಂದು ಮಾರುಕಟ್ಟೆಗಳಲ್ಲಿ ಡೈಮಂಡ್, ಕುಂದನ್, ಸಿಲ್ವರ್, ಗೋಲ್ಡ್, ಪರ್ಲ್ ಸೇರಿದಂತೆ ನಾನಾ ವಿಧದಲ್ಲಿ ಬೆಲ್ಲಿ ಚೈನ್‍ಗಳು ಲಭ್ಯ.
• ಮದುವೆ ಸಮಾರಂಭಗಳಲ್ಲಿ ಧರಿಸುವ ರೇಷ್ಮೆ ಸೀರೆಗೆ ಸೆಟ್ಟಾಗುವ ಕುಂದನ್, ಪರ್ಲ್, ಡೈಮಂಡ್ಗಳಿಂದ ಹೊಳೆಯುವ ಕಮರ್‍ಬಂದ್ ಧರಿಸುವದರಿಂದ ಗ್ರ್ಯಾಂಡ್ ಲುಕ್ಕ್‍ನಿಂದ ಕಂಗೊಳಿಸಬಹುದು.
• ಹಬ್ಬ. ಹರಿದಿನಗಳಲ್ಲಿ ಅಥವಾ ಕಾಲೇಜ್ ಫಂಕ್ಷನ್‍ಗಳಲ್ಲಿ ಸಿಂಪಲ್ ಆಗಿ ಕಾಣುವ ಒಂದೆ ಎಳೆಯ ಸಿಲ್ವರ್, ಗೋಲ್ಡ್ ಬೆಲ್ಲಿ ಚೈನ್‍ಗಳನ್ನು ಧರಿಸಿ ಸಿಂಪಲ್ ಆ್ಯಂಡ್ ಬೆಸ್ಟ್ ಆಗಿ ಮಿಂಚಬಹುದು.
• ಸೀರೆ, ಗಾಗ್ರಾ ಚೋಲಿ, ಹಾಫ್ ಸಾರಿಗಳ ಮೇಲೆ ಚೆನ್ನಾಗಿ ಕಾಣುವ ಕಮರ್ ಬಂದ್‍ಗಳನು ಧರಿಸುವ ಧಿರಿಸುಗಳ ಒಪ್ಪುವ ಹಾಗೆ ಮ್ಯಾಚ್ ಮಾಡಿದರೆ ನಿಮ್ಮ ಬಳಕುವ ಸೊಂಟ ಇನ್ನಷ್ಟು ಕಂಗೊಳಿಸಬಲ್ಲದು.
• ಪ್ಲೇನ್ ಡಿಸೈನರ್ ಸೀರೆಗಳ ಮೇಲೆ ಕಲರ್ ಹರಳುಗಳ ಅಥವಾ ಮುತ್ತಗಳಿಂದ ಎಳೆ ಎಳೆಯಾಗಿ/ ಲೇಯರ್ಡ್ ಚೈನ್‍ಗಳು ಬಳ್ಳಿಯಂತಹ ಸೊಂಟಕ್ಕೆ ಮಾದಕ ಲುಕ್ ನೀಡುತ್ತವೆ.
• ಕೆಲ ಪ್ಲೇನ್ ವೆಸ್ಟರ್ನ್ ಡ್ರೆಸ್‍ಗಳ ಮೇಲೂ ಸಿಂಗಲ್ ವೆಸ್ಟ್ ಚೈನ್‍ಗಳನ್ನ ಹಾಕಿಂಕೊಂಡರೆ ಡ್ರೆಸ್‍ನ್ನ ಇನ್ನಷ್ಟು ಮೆರಗುಗೊಳಿಸಬಹುದು.


• ಸುಮಾರು 150 ರೂಪಾಯಿಗಳಿಂದ ಆರಂಭವಾಗಿ, ಸಾವಿರಾರು ರೂಪಾಯಿಗಳವರೆಗೆ ಬೆಲೆ ಬಾಳುವ ಕಮರ್ ಬಂದ್‍ಗಳು ಮಾರುಕಟ್ಟೆಯಲ್ಲಿ ಲಭ್ಯ.

  • ಸುರೇಖಾ ಪಾಟೀಲ, ಹುಬ್ಬಳ್ಳಿ

Share post:

Subscribe

spot_imgspot_img

Popular

More like this
Related

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು: ರೌಡಿಗಳನ್ನು,...

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ! ಎಲ್ಲಿ ನಡೆಯಲಿದೆ?

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್...

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ ಎಚ್ಚರ!

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ! ನವದೆಹಲಿ:- ದೇಶದಲ್ಲಿ ಪ್ರತಿ...