1. `ಫಸ್ಟ್ ರ್ಯಾಂಕ್ ರಾಜು’ನಿಂದ ವಿಜಯಪುರದ ಮಗುವಿಗೆ 2 ಲಕ್ಷ ರೂ…!
ನವೆಂಬರ್ 27ರಂದು ತೆರೆಕಂಡ `ಫಸ್ಟ್ ರ್ಯಾಂಕ್ ರಾಜು’ವಿನಿಂದ ವಿಜಯಪುರದ ಮಗುವಿಗೆ ಅದೃಷ್ಟ ಖುಲಾಯಿಸಿದೆ..! ವಿಜಯಪುರದ ಭೀಮಶಂಕರ್ ಮತ್ತು ಶಿವಲೀಲಾ ದಂಪತಿಗಳ ಮಗು ನೇತ್ರಾವತಿ ಆ ಅದೃಷ್ಟವಂತೆ..! ಚಿತ್ರ ಬಿಡುಗಡೆಯ ದಿನವೇ ಹುಟ್ಟಿ `ಫಸ್ಟ್ ರ್ಯಾಂಕ್ ರಾಜು’ವಿನಿಂದ 2 ಲಕ್ಷ ಎಜುಕೇಶನ್ ಬಾಂಡ್ ಅನ್ನು ಪಡೆದಿದ್ದಾಳೆ..!
ಹೌದು, `ಫಸ್ಟ್ ರ್ಯಾಂಕ್ ರಾಜು’ ಸಿನಿಮಾ ಬಿಡುಗಡೆಯ ದಿನದಂದು ಹುಟ್ಟುವ ಒಂದು ಮಗುವಿಗೆ ಎರಡು ಲಕ್ಷ ರೂಪಾಯಿಗಳ ಎಜುಕೇಶನ್ ಬಾಂಡ್ ಇಡುವುದಾಗಿ ನಿರ್ಮಾಪಕ ಮಂಜುನಾಥ್ ಕಂದಕೂರ ಅವರು ಹೇಳಿದ್ದರು. ಅದರಂತೆ ಅವರು ಆ ದಿನ ಹುಟ್ಟಿದ ನೇತ್ರಾವತಿ ಎಂಬ ಹೆಣ್ಣು ಮಗುವಿಗೆ 2 ಲಕ್ಷ ರೂಗಳ ಎಜುಕೇಶನ್ ಬಾಂಡ್ ಇಡುವುದಾಗಿ ಘೋಷಿಸಿದ್ದಾರೆ. ಪತ್ರಕರ್ತರ ಸಮ್ಮುಖದಲ್ಲೇ ಲಕ್ಕಿಡ್ರಾ ಮೂಲಕ ಆಯ್ಕೆಯಾದ ಅದೃಷ್ಟಶಾಲಿಮಗು ನೇತ್ರಾವತಿಯ ತಂದೆ ತಾಯಿಯನ್ನು ಕರೆಸಿ ಚಿತ್ರದ 50ನೇ ದಿನದ ಸಂದರ್ಭದಲ್ಲಿ ಎಜುಕೇಶನ್ ಬಾಂಡ್ ಕೊಡುವುದಾಗಿ ಅವರು ಹೇಳಿದ್ದಾರೆ. ನವೆಂಬರ್ 27ರಂದು (ಸಿನಿಮಾ ಬಿಡುಗಡೆಯ ದಿನ) ಹುಟ್ಟಿದ ಮಕ್ಕಳಲ್ಲಿ 40 ಹೆಸರುಗಳು ಬಂದಿದ್ದವು. ಅವುಗಳಲ್ಲಿ ಒಂದನ್ನು ಲಕ್ಕಿಡ್ರಾ ಮೂಲಕ ಫಸ್ಟ್ ರ್ಯಾಂಕ್ ರಾಜುವಿನ 25ನೇ ದಿನದ ಸಂಭ್ರಮದಲ್ಲಿ ಆಯ್ಕೆಮಾಡಲಾಯಿತು.
2. ಐಸಿಸ್ ಸೇರಲಿದ್ದ ಹೈದರಬಾದ್ ನ ಮೂವರು ನಾಗ್ಪರದಲ್ಲಿ ಸೆರೆ
ಐಸಿಸ್ ಉಗ್ರ ಸಂಘಟನೆಯನ್ನು ಸೇರಲು ಹೊರಟಿದ್ದ ಮೂವರನ್ನು ಉಗ್ರ ನಿಗ್ರಹ ದಳ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.
ಬಂಧಿತರು ಹೈದರಾಬಾದ್ ನವರೆಂದು ತಿಳಿದು ಬಂದಿದ್ದು, ಮೂರು ದಿವಸಗಳ ಹಿಂದಷ್ಟೇ ನಾಗ್ಪುರಕ್ಕೆ ಬಂದಿದ್ದರು, ನಾಗ್ಪುರ ವಿಮಾನ ನಿಲ್ದಾಣದಲ್ಲಿ ಶ್ರೀನಗರಕ್ಕೆ ಹೋಗುವ ಇಂಡಿಗೋ ವಿಮಾನವನ್ನು ಹತ್ತುವರಿದ್ದರು. ತೆಲಂಗಾಣ ಮತ್ತು ಮಹರಾಷ್ಟ್ರದ ಉಗ್ರ ನಿಗ್ರಹ ದಳದವರು ಜಂಟಿ ಕಾರ್ಯಚರಣೆ ನಡೆಸಿ ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
3. ಕನ್ನಡತಿ ರೋಶ್ಮಿತಾ ಶೆಟ್ಟಿ `ಮಿಸ್ ಇಂಡಿಯಾ ಬೆಂಗಳೂರು’
“ಮಿಸ್ ಇಂಡಿಯಾ ಬೆಂಗಳೂರು-2016″ರ ಸ್ಪರ್ಧೆಯಲ್ಲಿ ಕನ್ನಡತಿ ರೋಶ್ಮಿತಾ ಹರಿಮೂರ್ತಿ ವಿಜೇತರಾಗಿದ್ದಾರೆ. ಕೊನೆಯ ಸುತ್ತಲ್ಲಿ 13 ಸುಂದರಿಯರು ಸ್ಪರ್ಧೆ ಒಡ್ಡಿದ್ದರು.
ಮಿಸ್ ಇಂಡಿಯಾ ಬೆಂಗಳೂರು 2016ರ ಸ್ಪರ್ಧೆಯಲ್ಲಿ ದೆಹಲಿ, ಬೆಂಗಳೂರು ಮತ್ತು ಕೋಲ್ಕತ್ತಾದ ಮೂರು ಪ್ರಾದೇಶಿಕ ಸ್ಪರ್ಧೆಗಳೂ ಒಳಗೊಂಡಂತೆ, ಹೈದರಾಬಾದ್, ಲಕ್ನೊ, ಜೈಪುರ, ಚಂಡಿಘಢ್, ಅಹಮದಾಬಾದ್, ಗೋವಾ, ನಾಗ್ಪುರ, ಪುಣೆ, ಗುವಾಹಟಿ, ಭುವನೇಶ್ವರ, ಭೋಪಾಲ್ ಹಾಗೂ ಚೆನ್ನೈ ಸೇರಿದಂತೆ 18 ನಗರಗಳಲ್ಲಿ ಸ್ಪರ್ಧೆ ನಡೆದಿತ್ತು. ಕನ್ನಡತಿ ರೋಶ್ಮಿತಾ ಶೆಟ್ಟಿ ಮಿಸ್ ಇಂಡಿಯಾ ಬೆಂಗಳೂರು ಕೀರಟವನ್ನು ಮುಡಿಗೇರಿಸಿಕೊಂಡರೆ, ಕೇರಳದ ಎಲಿಜಬೆತ್ ಥಡಿಕರನ್ ರನ್ನರ್ ಅಪ್ ಹಾಗೂ ಆಂಧ್ರದ ಜಿ ಎಲ್ ಸಂಜನಾ ದ್ವಿತೀಯ ರನ್ನರ್ ಅಪ್ ಆಗಿ ಹೊರಹೊಮ್ಮಿದರು.
4. ಪಾಕ್, ಅಫ್ಘಾನಿಸ್ತಾನದಲ್ಲಿ ಭೂಕಂಪ; ಉತ್ತರ ಭಾರತದಲ್ಲಿ ಭೂಕಂಪನ
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ನಿನ್ನೆ ರಾತ್ರಿ ಭೂಕಂಪ ಸಂಭವಿಸಿದೆ. ಕೇವಲ ಎರಡೇ ಎರಡು ತಿಂಗಳು ಅಂತರದಲ್ಲಿ
ತ್ತೆ ಸಂಭವಿಸಿದ ಭೂಕಂಪದ ಪರಿಣಾಮವಾಗಿ ದೆಹಲಿ , ಕಾಶ್ಮೀರ್ ಸೇರಿದಂತೆ ಉತ್ತರ ಭಾರತದಲ್ಲೂ ಭೂಕಂಪನದ ಅನುಭವವಾಗಿದೆ.
ಅಫಘಾನ್ನಲ್ಲಿ 6.2 ರಷ್ಟು, ಪಾಕ್ ನಲ್ಲಿ 6.9ರಷ್ಟು ತೀವ್ರತೆಯ ಭೂಕಂಪವಾಗಿರೋದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ.
5. ಯುದ್ಧವಿಲ್ಲದೇ ಭಾರತದೊಂದಿಗೆ ಪಾಕ್, ಬಾಂಗ್ಲಾ ವಿಲೀನ- ರಾಮ್ ಮಾಧವ್
ಭಾರತ, ಪಾಕ್, ಬಾಂಗ್ಲದೇಶಗಳು ಒಂದು ಗೂಡಿ `ಅಖಂಡ ಭಾರತ’ ನಿರ್ಮಾಣವಾಗುತ್ತದೆ ಎಂದು ರಾಮ್ ಮಾಧವ್ ಭವಿಷ್ಯ ನುಡಿದಿದ್ದಾರೆ.
ಅಲ್ಜಜೀರಾ ಅಂತರಾಷ್ಟ್ರೀಯ ನ್ಯೂಸ್ ನೆಟ್ ವರ್ಕ್ ನೀಡಿದ ಸಂದರ್ಶದಲ್ಲಿ ಅವರು ಈ ರೀತಿ ಮೂರೂ ದೇಶಗಳು ಬೆಚ್ಚಿ ಬೀಳುವಂತ ಹೇಳಿಕೆಯನ್ನು ನೀಡಿದ್ದಾರೆ. ಇವರ ಈ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಬಿಜೆಪಿ ನಾಯಕ ಈ ರೀತಿಯ ಹೇಳಿಕೆಗಳ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದೆ.
6. ಏಷ್ಯಾ ಹೂಡಿಕೆ ಬ್ಯಾಂಕ್ ಗೆ ಅಧಿಕೃತ ಚಾಲನೆ
ಭಾರತ, ಚೀನಾದಂತ ದೇಶಗಳ ಬೆಂಬಲ ಹೊಂದಿರುವ ಏಷ್ಯನ್ ಇನ್ ಫ್ರಾಸ್ಟ್ರಕ್ಚರ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ ಗೆ ಔಪಚಾರಿಕವಾಗಿ ಚಾಲನೆ ನೀಡಲಾಗಿದೆ. 59 ಸದಸ್ಯ ದೇಶಗಳು ಈ ಬ್ಯಾಂಕ್ ನಲ್ಲಿ ಸದಸ್ಯ ರಾಷ್ಟ್ರಗಳಾಗಿದ್ದು, ಮುಂದಿನ ತಿಂಗಳಿನಿಂದ ಅಧಿಕೃತವಾಗಿ ಕಾರ್ಯಾಚರಣೆ ಆರಂಭಿಸಲಿದೆ.
7. ಮೋದಿ ಪಾಕ್ ಭೇಟಿಯನ್ನು ಖಂಡಿಸಿದ ಹಫೀಜ್ ಸಯೀದ್
ಪಾಕಿಸ್ತಾನದ ಕಡುವೈರಿ ಭಾರತವನ್ನು ಈ ರೀತಿಯಲ್ಲಿ ಸ್ವಾಗತಿಸುವುದು ಒಳ್ಳೆಯದಲ್ಲ. ಇಷ್ಟಕ್ಕೂ ನರೇಂದ್ರ ಮೋದಿಯವರನ್ನು ಈ ರೀತಿಯಲ್ಲಿ ಸ್ವಾಗತಿಸುವ ಅಗತ್ಯವೇನಿತ್ತು ಎಂದು 26/11 ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್ ಹೇಳಿದ್ದಾನೆ.
8. ಹೊಸ ವರ್ಷಾಚರಣೆಗೆ ತಡರಾತ್ರಿವರೆಗೆ ಮದ್ಯ
ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ನೀಡಿರುವ ಅಬಕಾರಿ ಇಲಾಖೆ, ಕ್ರಿಸ್ಮಸ್ ಮತ್ತು ಹೊಸ ವಷರ್ಾಚರಣೆ ಅಂಗವಾಗಿ ಬೆಂಗಳೂರು ನಗರದಲ್ಲಿ ತಡರಾತ್ರಿ 1 ಗಂಟೆ ವರೆಗೆ ಬಾರ್ ಅಂಡ್ ರೆಸ್ಟೋರೆಂಟ್ ಗಳು, ಕ್ಲಬ್ ಗಳು ಮದ್ಯ ಮಾರಾಟ ಮಾಡಬಹುದು ಎಂದು ಹೇಳಿದೆ.
9. ಬಿಜೆಪಿ ಶಾಸಕನಿಗೆ ಇಸಿಸ್ ಉಗ್ರರಿಂದ ಬೆದರಿಕೆ
ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರಿಗೆ ಐಸಿಸ್ ಉಗ್ರರಿಂದ ಇಂಟರ್ನೆಟ್ ಕಾಲ್ ಮೂಲಕ ಜೀವ ಬೆದರಿಕೆ ಹಾಕಿದ್ದು, ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಹಿಂದಿಯಲ್ಲಿ ಮಾತಾಡುತ್ತಿದ್ದ ವ್ಯಕ್ತಿನಿಂದ ಎರಡು ಇಂಟರ್ ನೆಟ್ ಕಾಲ್ ಬಂದಿದ್ದು, ಫೋನ್ನಲ್ಲಿ ಮಾತಾಡಿದಾತ ತಾನು ಸಿರಿಯಾ ಇರಾಕ್ ಐಸಿಸ್ ಉಗ್ರ ಸಂಘಟನೆಯ ಸದಸ್ಯನೆಂದು ಹೇಳಿಕೊಂಡು ನಿನ್ನನ್ನು ಕೊಲ್ಲುವುದಕ್ಕೆ ನಾವು ಈಗಾಗಲೇ ಹಂತಕರನ್ನು ಕಳುಹಿಸಿದ್ದೇವೆ, ಪೊಲೀಸರು, ಭದ್ರತಾ ಪಡೆಗಳು ನಿನ್ನ ಹತ್ಯೆ ತೆಯಲಾರರು ಎಂದು ಹೇಳಿದ್ದಾನೆ. ತಾವು ತಾಕತ್ತಿದ್ದರೆ ನಮ್ಮನ್ನು ಕೊಲ್ಲು ಎಂದು ಹೇಳಿರುವುದಾಗಿ ಸೋಮ್ ತಿಳಿಸಿದ್ದಾರೆ. ಪೊಲೀಸರು ದೂರನ್ನು ಪರಿಗಣಿಸಿ ಇಂಟರ್ನೆಟ್ ಕಾಲ್ ಮೂಲವನ್ನು ಶೋಧಿಸುತ್ತಿದ್ದಾರೆ.
10 .ಜನವರಿ 15 ಇಂಡೋ-ಪಾಕ್ ವಿದೇಶಾಂಗ ಕಾರ್ಯದರ್ಶಿ ಸಭೆ
ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಮಟ್ಟದ ದ್ವಿಪಕ್ಷೀಯ ಮಾತುಕತೆ ಜನವರಿ 15ರಂದು ಇಸ್ಲಾಮಾಬಾದ್ ನಲ್ಲಿ ನಡೆಯುವ ಸಾಧ್ಯತೆ ಇದೆ. ಪಾಕಿಸ್ತಾನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಭೇಟಿ ಕೊಟ್ಟು ಹಳಸಿ ಹೋಗಿದ್ದ ಸಂಬಂಧ ಮತ್ತಷ್ಟು ಗಟ್ಟಿಯಾಗಲು ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗಿತ್ತು. ಆ ನಿಟ್ಟಿನಲ್ಲಿಯೇ ಉಭಯ ದೇಶಗಳ ನಡುವಿನ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ಪುನರ್ ಚಾಲನೆ ಸಿಕ್ಕಿದೆ ಎನ್ನಲಾಗಿದೆ.