No menu items!
13.9 C
Munich
Wednesday, April 29, 2026

50 ರೂಪಾಯಿ `ಧ್ವನಿಪೆಟ್ಟಿಗೆ' ಅಭಿವೃದ್ಧಿಪಡಿಸಿದ ಬೆಂಗಳೂರು ಡಾಕ್ಟರ್..!

Must read

ಗಂಟಲು ಕ್ಯಾನ್ಸರ್ ನಿಂದ ಧ್ವನಿಯನ್ನೇ ಕಳೆದುಕೊಂಡಿದ್ದ ವ್ಯಕ್ತಿ ಮತ್ತೆ ಮಾತಾಡುತ್ತಿದ್ದಾರೆ..! ಮಾತುಕಳೆದು ಕೊಂಡ ಬಡ ಕ್ಯಾನ್ಸರ್ ರೋಗಿಗೆ ಮಾತು ಬರುವಂತೆ ಮಾಡಿದ್ದು ಬೆಂಗಳೂರಿನ ಹೆಚ್ಸಿಜಿ ಕ್ಯಾನ್ಸರ್ ಕೇರ್ನ ಕ್ಯಾನ್ಸರ್ ತಜ್ಞ ಡಾ. ವಿಶಾಲ್ ರಾವ್. ಕೇವಲ 50 ರೂಪಾಯಿಗೆ ಕೃತಕ ಧ್ವನಿಪೆಟ್ಟಿಗೆ ಜೋಡಿಸಿ ಧ್ವನಿಕಳೆದು ಕೊಂಡವರಿಗೆ ಮತ್ತೆ ಮಾತನ್ನು ಕರಣಿಸಿದ್ದಾರೆ..!
ಗಂಟಲು ಕ್ಯಾನ್ಸರ್ನಿಂದ ಧ್ವನಿಪೆಟ್ಟಿಗೆ ಕಳೆದುಕೊಂಡು ಸಾವಿರಾರುಗಳನ್ನು ನೀಡಿ ಧ್ವನಿಪೆಟ್ಟಿಗೆ ಅಳವಡಿಸಿಕೊಳ್ಳಲಾಗದೇ ಇರೋ ಬಡವರಿನ್ನು ನೊಂದು ಕೊಳ್ಳಬೇಕಿಲ್ಲ..! ಕೇವಲ 50 ರೂಪಾಯಿಗಳಿಗೆ ಕೃತಕ ಧ್ವನಿ ಪೆಟ್ಟಿಗೆ ಲಭ್ಯವಿದೆ..!
ಧ್ವನಿಪೆಟ್ಟಿಗೆ ಕಳೆದುಕೊಂಡವರಿಗೆ ವಿದೇಶದ ವಾಯ್ಸ್ ಪ್ರೋಸ್ತೇಥಿಸ್ ಸೌಲಭ್ಯ ಇರೋದು ನಿಮಗೆ ಗೊತ್ತಿರ ಬಹದು..! ಇದಕ್ಕೆ ಏನೂ ಇಲ್ಲ ಅಂದ್ರೂ 20-25 ಸಾವಿರ ರೂಪಾಯಿಗಳು ಖರ್ಚಾಗುತ್ತವೆ..! ಇದಕ್ಕೆ ಪರ್ಯಾಯವಾಗಿ ವಿಶಾಲ್ ಅವರು 50 ರೂಪಾಯಿ ಧ್ವನಿ ಕೊಳವೆಯನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಾರೆ..!
ಯಾರೇ ಗಂಟಲು ಕ್ಯಾನ್ಸರ್ಗೆ ತುತ್ತಾದರೂ ಅವನ ಧ್ವನಿಪೆಟ್ಟಿಗೆಯನ್ನು ತೆಗೆಯೋದು ಅನಿವಾರ್ಯ..! ಅವನ ಧ್ವನಿಪೆಟ್ಟಿಗೆಯ ಜಾಗದಲ್ಲಿ ಕೃತಕವಾದ ಕೊಳವೆಯಾಕರದ ವಾಯ್ಸ್ ಪ್ರೋಸ್ತೇಥಿಸ್ ಬಳಸ್ತಾರೆ. ಹೀಗೆ ಶಸ್ತ್ರಚಿಕಿತ್ಸೆಯ ಮೂಲಕ ಕೃತಕ ಧ್ವನಿಪೆಟ್ಟಿಗೆ ಅಳವಡಿಸೋದು ಸರಿಸುಮಾರು ಹತ್ತು ವರ್ಷ ಹಿಂದಿನಿಂದಲೇ ನಡೆದುಕೊಂಡು ಬಂದಿದೆ..! ಆದರೆ ಹೀಗೆ ಅಳವಡಿಸಿದ ಧ್ವನಿಪೆಟ್ಟಿಗೆ ಯಿಂದ ಮೊದಲಿನಂತೆ ಮಾತಾಡೋಕೆ ಆಗ್ತಾ ಇರ್ಲಿಲ್ಲ..! ಗರಗರ ದನಿಯಲ್ಲಿ ಮಾತಾಡಬಹುಷ್ಟೇ..! ಆದರೆ ಈಗ ವಿಶಾಲ್ ಅವರು ಕೇವಲ 50 ರೂ ಬೆಲೆಯ ವಾಯ್ಸ್ ಪ್ರೋಸ್ತೇಥಿಸ್ ಅಭಿವೃದ್ಧಿಪಡಿಸಿ ರಾಮಕೃಷ್ಣ ಅನ್ನೋರಿಗೆ ಅಳವಡಿಸಿದ್ದಾರೆ..!
55 ವರ್ಷದ ರಾಮಕೃಷ್ಣ ಪೀಣ್ಯದಲ್ಲಿ ವಾಚ್ಮನ್ ಆಗಿ ಕೆಲಸ ಮಾಡ್ತಾ ಇರೋ ಬಡವ..! ಗಂಟಲು ಕ್ಯಾನ್ಸರ್ನಿಂದ ಧ್ವನಿಪೆಟ್ಟಿಗೆಯನ್ನು ಕಳೆದುಕೊಂಡಿದ್ದರು..! ಅವರಿಗೆ ವಾಯ್ಸ್ ಪ್ರೋಸ್ತೇಥಿಸ್ ಹಾಕಿಸಿಕೊಳ್ಳೋಕೆ ದೊಡ್ಡ ಮೊತ್ತದ ಹಣವಿರಲಿಲ್ಲ. ಅವರು ತಮ್ಮ ಅಳಲನ್ನು ಹೇಳಿಕೊಂಡರು. ಆಗಲೇ ವಿಶಾಲ್ ಅವರು ಅಭಿವೃದ್ಧಿ ಪಡಿಸಿರೋ 50 ರೂ ಬೆಲೆ ಬಾಳೋ ವಾಯ್ಸ್ ಪ್ರೋಸ್ತೇಥಿಸ್ ಅಳವಡಿಸಲಾಯಿತು..! ವಿಶೇಷ ಅಂದ್ರೆ ಸಿಕ್ಕಾಪಟ್ಟೆ ಹಣಕೊಟ್ಟು ಹಾಕಿಸಿಕೊಳ್ಳುವ ವಾಯ್ಸ್ ಪ್ರೋಸ್ತೇಥಿಸ್ಗಿಂತಲೂ ಇದನ್ನು ಹಾಕಿದರೆ ಸ್ಪಷ್ಟವಾಗಲು ಮಾತಾಡಲು ಸಾಧ್ಯವಾಗುತ್ತಂತೆ..!
ಎನಿವೇ, ಹೆಚ್ಸಿಜಿ ಕ್ಯಾನ್ಸರ್ ಕೇರ್ನ ಕ್ಯಾನ್ಸರ್ ತಜ್ಞ ಡಾ. ವಿಶಾಲ್ ರಾವ್ ಅವರಿಗೊಂದು ಸಲ್ಯೂಟ್..! ಬಡ ಗಂಟಲು ಕ್ಯಾನ್ಸರ್ ರೋಗಿಗಳಿಗೆ ವರ ವಾಗುವ ಕೇವಲ 50 ರೂಪಾಯಿಯ ವಾಯ್ಸ್ ಪ್ರೋಸ್ತೇಥಿಸ್ ಅಭಿವೃದ್ಧಿ ಪಡಸಿದ ಡಾ. ವಿಶಾಲ್ ಸರ್ ನಿಮಗೊಂದು ಸಲಾಂ

 

  • ಶಶಿಧರ ಡಿ ಎಸ್ ದೋಣಿಹಕ್ಲು

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

18 ವರ್ಷದಿಂದ ಒಂದೇ ಕಾಲಲ್ಲಿ ದುಡಿಯುತ್ತಿರುವ ರೈತ..! ಈತನ ಛಲದ ಮುಂದೆ ವಿಧಿಯೂ ಶರಣಾಗಿದೆ..!

50 ಕೋಟಿ ಬೆಲೆಬಾಳುವ ಕಂಪನಿ ಕಟ್ಟಿದ ಹುಟ್ಟು ಕುರುಡರಾದ ಶ್ರೀಕಾಂತ್…! ಇದು ಅಂಧನ ಯಶೋಗಾಥೆ..!

ರಷ್ಯಾದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಮೋದಿ..! #Video

ಮಾಸ್ಟರ್ ಪೀಸು… ಹಿಂಗೈತಿ ಬಾಸು..! – ಕಿರಿಕ್ ಕೀರ್ತಿ ..!

ಬರಲಿದೆ ವಾಟ್ಸ್ ಆ್ಯಪ್ ನಲ್ಲಿ ವೀಡಿಯೋ ಕಾಲಿಂಗ್..! ಅಚ್ಚರಿಗಳನ್ನು ಹೊತ್ತು ತರಲಿದೆ ಹೊಸ ಮಾದರಿ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article