ಇಂದಿನ ಟಾಪ್ 10 ಸುದ್ದಿಗಳು..! 03.02.2016

0
58

1. ರೋಬೋಟ್ ಮೂಲಕ “ಇನ್ವೆಸ್ಟ್ ಕರ್ನಾಟಕ 2016”ಕ್ಕೆ ಚಾಲನೆ
ಕರ್ನಾಟಕದಲ್ಲಿ ಸಿದ್ದರಾಮಯ್ಯ ಮುಂದಾಳತ್ವದ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದ ನಂತರ ಮೊಟ್ಟ ಮೊದಲ ಬಾರಿಗೆ ನಡೆಯುತ್ತಿರುವ ಬಂಡವಾಳ ಹೂಡಿಕೆದಾರರ ಸಮಾವೇಶ ” ಇನ್ವೆಸ್ಟ್ ಕರ್ನಾಟಕ 2016”ಗೆ ಇಂದು ಬೆಂಗಳರಿನ ಅರಮನೆ ಮೈದಾನದಲ್ಲಿ ರೋಬೋಟ್ ಮೂಲಕ ಚಾಲನೆ ನೀಡಲಾಯಿತು. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಮೂರು ದಿನಗಳ ಕಾಲ ಇನ್ವೆಸ್ಟ್ ಕರ್ನಾಟಕ ಎಂಬ ಹೆಸರಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ. ರತನ್ ಟಾಟಾ, ಅಜೀಂಪ್ರೇಂಜಿ, ಸಚಿನ್ ಜಿಂದಾಲ್, ನಾರಾಯಣಮೂರ್ತಿ, ಕಿರಣ್ ಮಜುಂದಾರಾ ಷಾ,ಬಾಬಾ ಕಲ್ಯಾಣಿ, ಲಕ್ಷ್ಮೀ ಮಿತ್ತಲ್,ಗೌತಮಿ ಅದಾನಿ ಅನಿಲ್ ಅಂಬಾನಿ ಮೊದಲಾದ ಹೆಸರಾಂತ ಉದ್ಯಮಿಗಳು, ಸಿಎಂ ಸಿದ್ದರಾಮಯ್ಯ, ಬೃಹತ್ ಕೈಗಾರಿಕ ಸಚಿವ ಆರ್.ವಿ ದೇಶಪಾಂಡೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

2. ರಾಮ ಮಂದಿರಕ್ಕಾಗಿ ಜಾಗ ದಾನ ಮಾಡಿದ ಮುಸ್ಲೀಮರು
ರಾಮ ಮಂದಿರ ನಿರ್ಮಿಸಲು ಮುಸ್ಲೀಂ ಸಮುದಾಯವೇ ಹಿಂದೂಗಳಿಗೆ ಜಾಗವನ್ನು, ಹಣಕಾಸಿನ ನೆರವನ್ನೂ ನೀಡಿದ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.
ಕೋಮು ಸೌಹಾರ್ದತೆಯನ್ನು ಈ ಘಟನೆ ಸಾರುತ್ತದೆ. ಮೊರೆನಾದ ಖೇಡಕಾಲಾ ಗ್ರಾಮದಲ್ಲಿ ಶ್ರೀ ರಾಮ್ ಜಾನಕಿ ದೇವಾಲಯ ನಿರ್ಮಾಣಕ್ಕಾಗಿ ಅಲ್ಲಿನ ಮುಸಲ್ಮಾನರು ಒಂದಿಷ್ಟು ಜಾಗವನ್ನು ದಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅಲ್ಲಿ ವಾಸವಾಗಿರುವ 80 ಮುಸ್ಲೀಂ ಕುಟುಂಬಗಳು ರಾಮ ಮಂದಿರಕ್ಕಾಗಿ 50 ಸಾವಿರ ರೂಪಾಯಿ ದೇಣಿಗೆ ಸಂಗ್ರಹಿಸಿಯೂ ಕೊಟ್ಟಿದ್ದಾರೆ.

3. ಯುಪಿಯಲ್ಲಿ ಸೆರೆಯಾದ ಸೌದಿ ಎಲ್ಟಿಟಿ ಕಮಾಂಡರ್ ಅಜೀಜ್
ಸೌದಿ ಅರೇಬಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಲ್.ಟಿ.ಟಿ (ಲಷ್ಕರ್ ಎ ತಯ್ಯಬ) ಕಮಾಂಡರ್ ಅಬ್ದುಲ್ ಅಜೀಜ್ ನನ್ನು ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ತಂಡ ಲಕ್ನೋ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.
ಸೌದಿ ಅರೇಬಿಯಾದ ಜೈಲಿನಲ್ಲಿದ್ದ ಅಜೀಜ್ ನನ್ನು ನಿನ್ನೆ ರಾತ್ರಿ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.

4. ಭಷ್ಟಚಾರ ನಿಗ್ರಹವಾಗದಿದ್ದರೆ ತೆರಿಗೆ ಪಾವತಿಸ ಬೇಡಿ : ಬಾಂಬೆ ಹೈಕೋರ್ಟ್

ದೇಶದಲ್ಲಿ ಭ್ರಷ್ಟಾಚಾರ ಹೀಗೇ ಮುಂದುವರೆದರೆ ತೆರಿಗೆ ಪಾವತಿದಾರರು ಸರ್ಕಾರಕ್ಕೆ ತೆರಿಗೆ ಪಾವತಿಸುವುದನ್ನೇ ನಿಲ್ಲಿಸುವ ಮೂಲಕ ಅಸಹಕಾರ ಚಳುಚವಳಿ ನಡೆಸಬೇಕೆಂದು ಮುಂಬೈ ಹೈಕೋರ್ಟ್ ನ ನಾಗಪುರ ಪೀಠ ಹೇಳಿದೆ.
ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ಪೌರಾಣಿಕ ಘಟಸರ್ಪಕ್ಕೆ ಹೋಲಿಕೆ ಮಾಡಿರುವ ನ್ಯಾಯಪೀಠ ` ಭಷ್ಟಚಾರವೆಂಬ ಘಟಸರ್ಪದ ತಲೆಯನ್ನು ಎಷ್ಟು ಬಾರಿ ಕಡಿದರೂ ಅದು ಪುನಃ, ಪುನಃ ಹುಟ್ಟುತ್ತಲಿರುತ್ತೆ. ಇದನ್ನು ನಿಗ್ರಹಿಸಲು ವಿಫಲವಾದರೆ ಜನರು ಸಕರ್ಾರಕ್ಕೆ ತೆರಿಗೆ ಪಾವತಿ ಮಾಡದೇ ಅಸಹಕಾರ ಚಳುವಳಿ ನಡೆಸಬೇಕೆಂದು ಸೂಚಿಸಿದೆ.

5. ತಾನು ಪತಿವ್ರತೆ ಎಂದು ಸಾಭೀತುಪಡಿಸಲು ಬೆತ್ತಲಾಗಬೇಕಂತೆ…!
ತಾನು ಪತಿವ್ರತೆ ಎಂದು ಸಾಭೀತುಪಡಿಸಲು ಮಹಿಳೆ ಜಾತಿ ಪಂಚಾಯಿತಿಯ ಪಂಚರ ಎದುರು ಬೆತ್ತಲಾಗಿ ಓಡಾಡಬೇಕು..! ಇಲ್ಲವೇ ಆಕೆ ಪವಿತ್ರಳೆಂದು ಸಮರ್ಥಿಸಲು ಆಕೆಯ ಮಗು (ಮಗ) ಬಿಸಿ ಕೊಡಲಿಯೊಂದನ್ನು ತನ್ನ ಕೈಗೆತ್ತಿಕೊಳ್ಳ ಬೇಕೆಂಬ ದುಷ್ಟ ಮೂಡನಂಭಿಕೆ ಮಹರಾಷ್ಟ್ರಾದ ನಂದೂರ್ಬಾರ್ ಜಿಲ್ಲೆಯ ಕಂಜಾರವಾಡಾ ಎಂಬಲ್ಲಿ ನಡೆದಿದೆ.

6. ರಾಜ್ಯದಲ್ಲಿ 120 ಬಿಲಿಯನ್ ಡಾಲರ್ ತನಕ ಹೂಡಿಕೆ ಮಾಡಬಹುದು : ಸಿಎಂ ಸಿದ್ದರಾಮಯ್ಯ
ಕರ್ನಾಟಕ ಬಂಡವಾಳ ಹೂಡಿಕೆಗೆ ಯೋಗ್ಯವಾದ ಸ್ಥಳವಾಗಿದ್ದು ರಾಜ್ಯದಲ್ಲಿ 120 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಗೆ ಅವಕಾಶವಿದೆ ಎಂದು ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

7. ಉತ್ತರ ಕರ್ನಾಟಕದಲ್ಲಿ ಯೂರಿಯಾ ಉತ್ಪಾದನಾ ಕಾರ್ಖನೆ ಸ್ಥಾಪನೆ : ಅನಂತ್ ಕುಮಾರ್
ಉತ್ತರ ಕರ್ನಾಟಕದಲ್ಲಿ ಯೂರಿಯಾ ಉತ್ಪದನಾ ಕಾರ್ಖಾನೆ ಸ್ಥಾಪಿಸುವುದಾಗಿ ಕೇಂದ್ರ ರಸ ಗೊಬ್ಬರ ಮತ್ತು ರಾಸಾಯನಿಕ ಸಚಿವ ಅನಂತ್ ಕುಮಾರ್ ತಿಳಿದ್ದಾರೆ. ಇವತ್ತು ಆರಂಭವಾದ ಇನ್ವೆಸ್ಟ್ ಕರ್ನಾಟಕ 2016ರಲ್ಲಿ ಮಾತಾಡಿದ ಅವರು ಉತ್ತರ ಕರ್ನಾಟಕದಲ್ಲಿ 1.3 ಮಿಲಿಯನ್ ಉತ್ಪಾದನಾ ಸಾಮರ್ಥ್ಯ ವಿರುವ ಯೂರಿಯಾ ರಸಗೊಬ್ಬರ ಕಾರ್ಖಾನೆಯನ್ನು ಆರಂಭಿಸುವ ಬಗ್ಗೆ ಮಾಹಿತಿ ನೀಡಿದರು.

8. ಬೆಂಗಳೂರಲ್ಲಿ ಅಂತರಿಕ್ಷಯಾನ ಸಂಶೋಧನಾ ಕೇಂದ್ರ ಸ್ಥಾಪನೆ : ಅನಿಲ್ ಅಂಬಾನಿ
ಸಿಲಿಕಾನ್ ಸಿಟಿ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಅಂತರಿಕ್ಷಯಾನ ಸಂಶೋಧನಾ ಕೇಂದ್ರ ಸ್ಥಾಪನೆ (ಏರೋಸ್ಪೇಸ್ ರಿಸರ್ಚ್ ಸೆಂಟರ್)ನ್ನು ಧೀರೂಬಾಯಿ ಅಂಬಾನಿಯವರ ಹೆಸರಲ್ಲಿ ಸ್ಥಾಪಿಸಲಾಗುತ್ತದೆಂದು ಇನ್ವೆಸ್ಟ್ ಕರ್ನಾಟಕದಲ್ಲಿ ಮಾತಾಡಿದ ಅನಿಲ್ ಅಂಬಾನಿ ತಿಳಿಸಿದ್ದಾರೆ.

9. ಸಿಯಾಚಿನ್ ಹಿಮಪಾತದಲ್ಲಿ 10 ಜನ ಯೋಧರು ಕಣ್ಮರೆ
ಜಮ್ಮು ಮತ್ತು ಕಾಶ್ಮೀರದ ಲಡಾಕ್ ಪ್ರದೇಶದ, ಸಿಯಾಚಿನ್ ನಲ್ಲಾದ ಹಿಮಪಾತದಿಂದ ಅಧಿಕಾರಿಯೊಬ್ಬರು ಸೇರಿದಂತೆ 10 ಜನ ಯೋಧರು ಇಂದು ಕಾಣೆಯಾಗಿದ್ದಾರೆಂದು ಸೇನೆಯ ವಕ್ತಾರ ಎಸ್.ಡಿ ಗೋಸ್ವಾಮಿ ಹೇಳಿದ್ದಾರೆ.

10 ಜೆಡಿಎಸ್ ಅಲ್ಪಸಂಖ್ಯಾತ ಘಟಕದ ರಾಜ್ಯಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಕೀಲ್ ನವಾಜ್

ಜೆಡಿಎಸ್ ನಲ್ಲಿ ಮತ್ತೆ ನಾಯಕರ ನಡುವೆ ಭಿನ್ನಾಭಿಪ್ರಾಯ ಸ್ಪೂಟಗೊಂಡಿದೆ. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್ಡಿ ದೇವೆಗೌಡರು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಕಾರಣ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಚ್.ಎಂ ಶಕೀಲ್ ನವಾಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌಡರು ಜಮೀರ್ ನನ್ನ ವಿರುದ್ಧ ಉದರ್ು ಭಾಷೆಯಲ್ಲಿ ಜಾಹೀರಾತುಗಳನ್ನು ಹಾಕಿಸಿದ್ದಾರೆ. ಪಕ್ಷಕ್ಕಾಗಿ ದೇವೇಗೌಡರು ಏನ್ ಬೇಕಾದ್ರೂ ಮಾಡ್ತಾರೆಂದು ಹೇಳುತ್ತಾರೆ..! ಅವರು ಯಾವ ಪಕ್ಷದಲ್ಲಿದ್ದಾರೆಂದು ಗೊತ್ತಾ ಎಂದು ಪ್ರಶ್ನಿಸಿದ್ದರು.

LEAVE A REPLY

Please enter your comment!
Please enter your name here