BSNL ನ 35 ಸಾವಿರ ನೌಕರರನ್ನ ಕೆಲಸದಿಂದ ತೆಗೆದು ಹಾಕಲು ಶಿಫಾರಸ್ಸು..!! ಕಾರಣ..?
ಖಾಸಗಿ ಟೆಲಿಕಾಂ ಕಂಪನಿಗಳ ನಡುವೆ ದೇಶದ ಬಿಎಸ್ಎನ್ಎಲ್ ಸಂಸ್ಥೆ ಸೊರಗಿ ಹೋಗಿದೆ.. ಸದ್ಯ ಖಾಸಗಿ ಕಂಪನಿಗಳು ಗ್ರಾಹಕರಿಗೆ ವಿಧವಿಧವಾದ ಆಫರ್ ಗಳನ್ನ ನೀಡುತ್ತಿದ್ದು, ದಿನೇ ದಿನೇ ಬಿಎಸ್ಎನ್ಎಲ್ ಗ್ರಾಹಕರ ಸಂಖ್ಯೆ ಕ್ಷೀಣಿಸುತ್ತಿದೆ.. ಹೀಗಾಗೆ ತೀರ್ವ ನಷ್ಟದಲ್ಲಿರುವ ಈ ಸಂಸ್ಥೆಯನ್ನ ಉಳಿಸಿಕೊಳ್ಳುವುದು ಹಾಗು ಸುಧಾರಿಸುವುದು ಹೇಗೆ ಎಂಬ ಸಲುವಾಗಿ ವರದಿ ಸಲ್ಲಿಸುವಂತೆ ಐಐಎಂ ಅಹ್ಮದಾಬಾದ್ ತಜ್ಞರಿಗೆ ತಿಳಿಸಿತ್ತು..
ಇದರ ಶಿಫಾರಸ್ಸಿನ ಪ್ರಕಾರ 35 ಸಾವಿರ ಉದ್ಯೋಗಿಗಳನ್ನು ಸೇವೆಯಿಂದ ಕೈಬಿಡಲು ಸಲಹೆ ನೀಡಲಾಗಿದೆ. ಹೀಗೆ ಕೆಲಸದಿಂದ ತೆಗೆದು ಹಾಕುವರಿಗೆ ವಿಆರ್ಎಸ್ ನೀಡುವಂತೆ ಸೂಚಿಸಿದ್ದು, ಇದಕ್ಕಾಗಿ ಸರ್ಕಾರ 13000 ಕೋಟಿ ಪಾವತಿಸಬೇಕಾಗಿದೆ.. ಜೊತೆಗೆ ಸದ್ಯ ಇಲ್ಲಿನ ಕೆಲಸಗಾರಿಗೆ ನೀಡುತ್ತಿರುವ ವೈದ್ಯಕೀಯ ಭತ್ಯೆ ಕಡಿತಗೊಳಿಸಲಾಗಿದ್ದು, ಅದರೊಂದಿಗೆ ಎಲ್ಟಿಸಿ, ವಿದ್ಯುತ್ ಹಾಗೂ ಆಡಳಿತಾತ್ಮಕ ವೆಚ್ಚಗಳ ಮೇಲೆ ನಿಯಂತ್ರಣ ಸಾಧಿಸಿದ್ದು, ಈ ಮೂಲಕ ಹಣ ಪೋಲಾಗದಂತೆ ತಡೆಯಲಾಗಿದೆ..
ಕಳೆದ ವರ್ಷದ ತ್ರೈಮಾಸಿಕ ಲೆಕ್ಕದಲ್ಲಿ ಸಂಸ್ಥೆಯು 1925.33 ಕೋಟಿ ನಷ್ಟ ಅನುಭವಿಸಿದೆ.. ಹೀಗೆ ಮುಂದುವರೆದೆ ಮುಂದಿನ ದಿನಗಳಲ್ಲಿ ಈ ಸಂಸ್ಥೆಯನ್ನ ಮುನ್ನಡೆಸುವುದು ಮತ್ತಷ್ಟು ಕಷ್ಟ ಎಂಬ ಮಾತು ಕೇಳಿ ಬಂದಿದ್ದು, ಹೀಗಾಗೆ ಈ ನಿರ್ಧಾರವನ್ನ ಮಾಡಲಾಗುತ್ತಿದೆ ಎನ್ನಲಾಗ್ತಿದೆ..