ಎಎಪಿ ಸಂಸದನಿಗೆ ನೀರು ನೀಡಿದರು ಮೋದಿ..!
ದೆಹಲಿ ಮುಖ್ಯಮಂತ್ರಿಗಳ ಕಚೇರಿಯ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ದೂರುತ್ತಾ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿ ಕೂಗಿ ನೀರಿಗಾಗಿ ಹುಡುಕಾಡಿದ ಎಎಪಿ ಸಂಸದ ಭಾಗವಂತ್ ಮನ್ ಅವರಿಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ನೀರನ್ನು ತಂದುಕೊಟ್ಟ ಅಪರೂಪದ ಪ್ರಸಂಗ ಸಂಸತ್ತಲ್ಲಿ ಜರುಗಿದೆ..!
ಸದನದ ಬಾವಿಯಲ್ಲಿ ಸರ್ಕಾರದ ವಿರುದ್ಧ ಅರಚುತ್ತಾ ನೀರಿಗಾಗಿ ಹುಡುಕುತ್ತಿದ್ದ ಮನ್ ಅವರನ್ನು ಗಮನಿಸಿದ ಮೋದಿಯವರು ಸ್ವತಃ ತಾವೇ ನೀರನ್ನು ತಂದು ಮನ್ ಅವರಿಗೆ ಕೊಟ್ಟಿದ್ದಾರೆ..! ಮುಗುಳ್ನಗುತ್ತಾ ನೀರು ಸ್ವೀಕರಿಸಿದ ಮನ್ ನೀರು ಕುಡಿದು ಸರ್ಕಾರಿ ವಿರೋಧಿ ಘೋಷಣೆಗಳನ್ನು ಕೂಗುವುದನ್ನು ಮುಂದುವರೆಸಿದರು..!
ಪ್ರಧಾನಿ ಅವರೇ ನೀರನ್ನು ನೀಡಿದ ವಿಷಯ ತಿಳಿಯುವಂತೆ ಸೋನಿಯಾ ಗಾಂಧಿ ಜೋರಾಗಿ ನಕ್ಕರು..! ಬಿಜೆಪಿ ಸದಸ್ಯರು ಮೇಜು ಕುಟ್ಟಿ ಮೋದಿ ನಡೆಯನ್ನು ಸ್ವಾಗತಿಸಿದರು..!
ಭಾರತಕ್ಕಾಗಿ ಗೂಗಲ್ ಯೋಜನೆಗಳು..!
ಭಾರತದಿಂದ ಹೆಚ್ಚಿನದನ್ನು ಪಡೆದುಕೊಂಡಿದ್ದೇನೆ. ಈಗ ಗೂಗಲ್ ಮೂಲಕ ಭಾರತಕ್ಕೆ ಏನನ್ನಾದರೂ ಕೊಡುವ ಅವಕಾಶ ನನ್ನ ಪಾಲಿಗೆ ಸಿಕ್ಕಿದೆ ಎಂದು ಭಾರತ ಪ್ರವಾಸದಲ್ಲಿರುವ ಗೂಗಲ್ ಸಿಇಒ ಸುಂದರ್ ಪಿಚ್ಚೈ ಹೇಳಿದರು.
ಪ್ರತಿ ತಿಂಗಳು ಲಕ್ಷಗಟ್ಟಲೆ ಭಾರತೀಯರು ಅಂತರ್ಜಾಲ ಬಳಕೆದಾರರಾಗುತ್ತಿದ್ದಾರೆ. ಡಿಜಿಟಲ್ ಕ್ರಾಂತಿ ಆಗ್ತಾ ಇರೋ ಈ ಸಂದರ್ಭದಲ್ಲಿ ಗ್ರಾಮೀಣ ಭಾಗಗಳಿಗೂ ಇಂಟರ್ನೆಟ್ ಸಂಪರ್ಕ ಸಾಧಿಸುವ ಗೂಗಲ್ ಉದ್ದೇಶವನ್ನು ಸಕಾರಗಳಿಸುವ ರೀತಿಯಲಲಿ ಮೋದಿ ಹಾಗೂ ಅವರ ಸರ್ಕಾರ ಕಾರ್ಯನಿರ್ವಹಿಸ್ತಾ ಇದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ..!
ಭಾರತಕ್ಕಾಗಿ ಗೂಗಲ್ನ ಯೋಜನೆಗಳನ್ನು ಪಿಚ್ಚೈ ತಿಳಿಸಿದ್ದಾರೆ..!
* ಮುಂದಿನ ಮೂರು ವರ್ಷದಲ್ಲಿ ಭಾರತದ 3,00,000 ಗ್ರಾಮಗಳ ಮಹಿಳೆಯರ ಸಬಲೀಕರಣ ಬೆಂಗೂರು ನಂತರ ಹೈದರಬಾದಿನಲ್ಲಿ ಹೊಸದಾಗಿ ಇಂಜಿನಿಯರಿಂಗ್ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಗೂಗಲ್ ಹೊರಟಿದೆ..!
*ಭಾರತದ 11 ಭಾಷೆಗಳಿಗೆ ಸಹಾಯವಾಗಬಲ್ಲ ಇಂಡಿಕ್ ಕೀಬೋರ್ಡ್ ಗೂಗಲಿನಿಂದ ಒದಗಲಿದೆ..!
* ಗ್ರಾಮೀಣ ಪ್ರದೇಶಗಳಿಗೆ ಸಹಕಾರಿ ಆಗಬಲ್ಲ ಕಡಿಮೆ ದರದ ಸಂಪರ್ಕ ಸಾಧ್ಯವಾಗಬಲ್ಲಂತ ಪ್ರಾಜೆಕ್ಟ್ ಲೂನ್ ಅನ್ನು ಭಾರತಕ್ಕೂ ತರುವ ಯೋಚನೆ ಗೂಗಲ್ಗಿದೆಯಂತೆ..!
*2016ರ ಕೊನೆಗೆ ಯುಎಸ್ಗಿಂತಲೂ ಹೆಚ್ಚು ಆಂಡ್ರಾಯ್ಡ್ ಬಳಕೆದಾರರು ಭಾರತದಲ್ಲಿರ್ತಾರೆ..!
*2016ರ ವರ್ಷಾಂತ್ಯದೊಳಗೆ ಗೂಗಲ್ ಸರ್ಚ್ ಮೂಲಕ ಕ್ರಿಕೆಟ್ ಲೈವ್ ಅಪ್ಡೇಟ್ ಸಿಗುವಂತೆ ಮಾಡೋ ಆಲೋಚನೆ ಇದೆ.
*2017ರ ಹೊತ್ತಿಗೆ ಭಾರತದ 500 ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ..!
ಹೀಗೆ ಭಾರತಕ್ಕಾಗಿ ಅನೇಕ ಯೋಜನೆಗಳನ್ನು ಗೂಗಲ್ ರೂಪಿಸಿಕೊಂಡಿದೆ..!
ರಂಗಿತರಂಗ, ಕೇರ್ ಆಫ್ ಫುಟ್ಪಾತ್ 2 ಆಸ್ಕರ್ ಸ್ಪರ್ಧೆಗೆ
ಕನ್ನಡದ ರಂಗಿತರಂಗ, ಕೇರ್ ಆಫ್ ಫುಟ್ಪಾತ್2 ಸಿನಿಮಾಗಳೂ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿಗೆ ಪೈಪೋಟಿ ನೀಡಲು ಅರ್ಹತೆ ಗಿಟ್ಟಿಸಿಕೊಂಡಿವೆ..! ಅದೇರೀತಿ ಮರಾಠಿ ಸಿನಿಮಾ `ಕೋರ್ಟ್’, ಮಲೆಯಾಳಂ ಸಿನಿಮಾ `ಜಲಂ’ ಮತ್ತು ಕೊಂಕಣಿ ಸಿನಿಮಾ `ನಾಚೋಮ್ ಇರ ಕುಂಪ್ಸಾಪುರ್’ ಕೂಡ ಅರ್ಹತೆಯ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿವೆ..! ಭಾರತೀಯ- ಆಸ್ಟ್ರೇಲಿಯನ್ ಸಿನಿಮಾ `ಸಾಲ್ಟ್ ಬ್ರಿಜ್’, ಹಿಂದಿ ಸಿನಿಮಾ `ಹೇಮಸ್ಕಸ’ ಮೊದಲಾದ ಸಿನಿಮಾಗಳೂ 305 ಸಿನಿಮಾಗಳ ಅರ್ಹತಾ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿವೆ..!
ಅಮೃತ್ ಯೋಜನೆಯಡಿ ಬೆಂಗಳೂರಿಗೆ ಬಂಪರ್..!
ಅಟಲ್ ನಗರ ನವೀಕರಣ ಮತ್ತು ಕಾರ್ಯಕಲ್ಪ(ಅಮೃತ್) ಯೋಜನೆಗೆ ಆಯ್ಕೆಯಾಗಿರೋ ಬೆಂಗಳೂರು ಸೇರಿದಂತೆ ಕರ್ನಾಟಕದ 27 ನಗರಗಳಿಗೆ ಕೇಂದ್ರ ಸರ್ಕಾರ 1,258 ಕೋಟಿ ರೂಪಾಯಿ ಮಂಜೂರು ಮಾಡಿದೆ..! ಬೆಂಗಳೂರಿಗೆ ಈ ಯೋಜನೆ ಅಡಿಯಲ್ಲಿ 173 ಕೋಟಿ ರೂ. ಮಂಜೂರಾಗಿದೆ..!
ಅರ್ಮತ್ ಯೋಜನಗೆ ಕರ್ನಾಟಕದ ಚಿತ್ರದುರ್ಗ, ಭದ್ರಾವತಿ, ಕೋಲಾರ ರಾಬರ್ಟ್ಸ್ನ್ ಪೇಟೆ, ಉಡುಪಿ, ಹಾಸನ, ರಾಣೆಬೆನ್ನೂರು, ಚಿಕ್ಕಮಗಳೂರು, ಮಂಡ್ಯ, ಧಾರವಾಡ, ಬೆಳಗಾವಿ, ವಿಜಪುರ, ಬಾಗಲಕೋಟೆ, ಗದಗ, ವೆಟಗೇರಿ, ಬೀದರ್, ಬಳ್ಳಾರಿ ಮೊದಲಾದ ನಗರಗಳು ಆಯ್ಕೆಯಾಗಿವೆ.
ವಿಶ್ವದ ಟಾಪ್ 10 ಕ್ರಿಮಿನಲ್ಗಳಲ್ಲಿ ಮೋದಿ ಒಬ್ಬರಂತೆ..!
ಪ್ರಧಾನಿ ಮೋದಿ ವಿಶ್ವದ ಟಾಪ್ 10 ಕ್ರಿಮಿನಲ್ಗಳಲ್ಲಿ ಮೋದಿ ಕೂಡ ಒಬ್ಬರು..! ಹೀಗೆಂದು ವಿವಾದಾತ್ಮಕ ಹೇಳಿಕೊಟ್ಟವರು ಸಮಾಜವಾದಿ ಪಕ್ಷದ ಸಚಿವ ಅಜಂ ಖಾನ್..!
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೋದಿಯನ್ನು ಕ್ರಿಮಿನಲ್ಗಳ ಸಾಲಿಗೆ ಸೇರಿಸಿದ ಖಾನ್ ನನಗೆ ಪ್ರಧಾನಿ ಯಾಗಬೇಕೆಂಬ ಆಸೆಯಿದೆ, ನಾನು ಆ ಹುದ್ದೆಗೆ ಸೂಕ್ತ, ಸಮರ್ಥ ವ್ಯಕ್ತಿ..! ಸಮಯ ಬಂದಾಗ ನಮ್ಮ ನಾಯಕ ಮುಲಾಯಂ ಸಿಂಗ್ ನನ್ನ ಹೆಸರನ್ನು ಪ್ರಧಾನಿ ಹುದ್ದೆಗೆ ಸೂಚಿಸುತ್ತಾರೆ ಎಥಲೂ, ಮೋದಿ ರಾಜೀನಾಮೆ ನೀಡಲಿ, ನಂತರ ಸಂಸದರು ನನ್ನನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಲಿ ಎಂದೂ ಕೂಡ ವಿವಾದಾತ್ಮಕ ಹೇಳಿಕೆಗಳ ಸರದಾರ ಅಜಂ ಖಾನ್ ಹೇಳಿದರು..!
ಬೆಂಗಳೂರಿನಲ್ಲೂ ಸಮ-ಬೆಸ ಸಂಖ್ಯೆ ವಾಹನ ಸಂಚಾರಕ್ಕೆ ಚಿಂತನೆ – ಪರಮೇಶ್ವರ್
ಬೆಂಗಳೂರಿನಲ್ಲೂ ದೆಹಲಿಯಂತೆ ಒಂದು ಸಮ ಸಂಖ್ಯೆಯ ವಾಹನ ಮತ್ತೊಂದು ದಿನ ಬೆಸ ಸಂಖ್ಯೆಯ ವಾಹನ ಸಂಚಾರ ಯೋಜನೆ ಜಾರಿಗೆ ತರುವ ಬಗ್ಗೆ ಚಿಂತನೆ ನಡೆದಿದೆ ಎಂದು ಬುಧವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ, ಬೆಂಗಳೂರು ನಗರದಲ್ಲಿ ಒಟ್ಟು 58 ಲಕ್ಷ ವಾಹನಗಳಿದ್ದು, ಇಷ್ಟೊಂದು ವಾಹನಗಳನ್ನು ತಡೆದುಕೊಳ್ಳುವ ಸಾಮಥ್ರ್ಯ ಬೆಂಗಳೂರಿನ ರಸ್ತೆಗಳಿಗಿಲ್ಲ. ಹೀಗಾಗಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಹಾಗೂ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಸಮ, ಬೆಸ ಸಂಖ್ಯೆಯ ಆಧಾರದಲ್ಲಿ ವಾಹನಗಳ ಸಂಚಾರ ನಿಯಮ ಜಾರಿಗೆ ತರುವ ಚಿಂತನೆ ಇದೆ ಎಂದರು.
ಸಿರಿಯಾ ದಲ್ಲಿ ಐಸಿಸ್ ಮೇಲೆ ದಾಳಿಗೆ ಭಾರತ ಸಿದ್ಧ: ಪರ್ರಿಕರ್
`ಐಸಿಸ್ ವಿರುದ್ಧ ಹೋರಾಟ ಮಾಡಲು ವಿಶ್ವಸಂಸ್ಥೆಯಲ್ಲಿ ನಿರ್ಣಯವಾದರೆ ಅದರನ್ವಯ ಭಾರತದ ನೀತಿಯಂತೆ ವಿಶ್ವಸಂಸ್ಥೆಯ ಧ್ವಜದಡಿ ದಾಳಿಯಲ್ಲಿ ಪಾಲ್ಗೊಳ್ಳಲು ಭಾರತ ಸಿದ್ದವಿದೆ’ ಎಂದು ಪರ್ರಿಕರ್ ತಿಳಿಸಿದ್ದಾರೆ. ಅಮೆರಿಕದ ಅಧಿಕಾರಿ ಅಸ್ಟನ್ ಕಾರ್ಟರ್ ಜೊತೆ ನಡೆದ ನಿರ್ಣಾಯಕ ಸಭೆಯಲ್ಲಿ ಪಾಲ್ಗೊಂಡು ವಾಪಾಸಾಗಿರುವ ಪರಿಕರ್ ಅವರು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ.
ಐಶಾರಾಮಿ ಕಾರು ನೋಂದಣಿ ರದ್ದು
ದೆಹಲಿಯಲ್ಲಿ 2000 ಸಿಸಿಗಿಂತ ಮೇಲಿನ ಡೀಸೆಲ್ ಎಸ್ಯುವಿಗಳು ಮತ್ತು ಕಾರುಗಳ ನೋಂದಣಿ ರದ್ದು ಮಾಡುವ ಮಹತ್ವದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಒಪ್ಪಿಗೆ ಸೂಚಿಸಿದೆ. ಅಷ್ಟೇ ಅಲ್ಲ, `ಶ್ರೀಮಂತರು ವಾತಾವರಣವನ್ನು ಮಲಿನಗೊಳಿಸುತ್ತಾ ಎಸ್ಯುವಿಗಳಲ್ಲಿ ಸಂಚರಿಸುವ ಅಗತ್ಯವಿಲ್ಲ’ ಎಂದೂ ಹೇಳಿದೆ. ಡೀಸೆಲ್ ಕಾರುಗಳನ್ನು ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹೊರಡಿಸಿದ ಆದೇಶದ ವಿರುದ್ಧ ಕಾರು ಡೀಲರ್ ಗಳು ಸಲ್ಲಿಸಿದ್ಧ ಅರ್ಜಿಗಳ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಧಾನಿ ಮೋದಿಗೆ ಗುಡ್ ನ್ಯೂಸ್, ಸ್ವಚ್ಛ ಭಾರತಕ್ಕೆ ವಿಶ್ವಬ್ಯಾಂಕ್ ನೆರವು
ಬುಧವಾರ “ಹ್ಯಾಶ್ ಟ್ಯಾಗ್ ವರ್ಲ್ಡ್ ಬ್ಯಾಂಕ್’ ಟಾಪ್ ಟ್ರೆಂಡ್ಗಳಲ್ಲಿ ಒಂದಾಗಿ ಕಾಣಿಸಿಕೊಂಡದ್ದು ಅಸಂಖ್ಯ ಟ್ವಿಟರ್ ಬಳಕೆದಾರರಿಗೆ ಅಚ್ಚರಿ ಉಂಟುಮಾಡಿದೆ. ಇದಕ್ಕೆ ಮುಖ್ಯವಾದ ಕಾರಣವೊಂದಿದೆ. ಅದೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನಕ್ಕೆ ವಿಶ್ವ ಬ್ಯಾಂಕ್ 1.5 ಶತಕೋಟಿ ಡಾಲರ್ಗಳ ಸಾಲಕ್ಕೆ ಅನುಮೋದನೆ ನೀಡಿದೆ.
ನೈಜೀರಿಯದ 3 ಗ್ರಾಮಗಳ ಮೇಲೆ ಬೋಕೋ ಹರಾಂ ದಾಳಿ: 30 ಜನರು ಬಲಿ
ಈಶಾನ್ಯ ನೈಜೀರಿಯದ ಮೂರು ಗ್ರಾಮಗಳಲ್ಲಿ ಭೀಕರ ದಾಳಿಯನ್ನು ನಡೆಸಿರುವ ಬೋಕೋ ಹರಾಮ್ ಉಗ್ರರು, 30 ಜನರನ್ನು ಕೊಂದು, 20 ಮಂದಿಯನ್ನು ಗಾಯಗೊಳಿಸಿದ್ದಾರೆ. ಹೆಚ್ಚಿನ ಜನರನ್ನು ಕೊಚ್ಚಿ ಕೊಲ್ಲಲಾಗಿದೆ. ಅನೇಕ ಜನರು ಉಗ್ರರ ಹರಿತವಾದ ಕತ್ತಿ, ಮಚ್ಚು, ಲಾಂಗುಗಳ ಹೊಡೆತದಿಂದ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಬೋಕೋ ಹರಾಂ ಉಗ್ರರ ವಿರುದ್ಧ ಹೋರಾಡುವುದಕ್ಕೆ ನೈಜೀರಿಯದ ಸೇನೆಗೆ ನೆರವಾಗುತ್ತಿರುವ ಪೌರ ಮುಸ್ತಾಫಾ ಕರಿಂಬೇ ತಿಳಿಸಿದ್ದಾರೆ.
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!
ಶ್ರೀಲಂಕಾದಲ್ಲಿ ಭಾರತದ ಧ್ವಜ ಹಾರಿಸಿದ ಕನ್ನಡಿಗ ರಘು..!
ಸಿನಿಮಾಕಥೆಯಂತಿದ್ದರೂ ಇದು ಸಿನಿಮಾ ಸ್ಟೋರಿಯಲ್ಲ..! ಇದು ಇಂಡಿಯಾ, ಸ್ವೀಡನ್ ಲವ್ ಸ್ಟೋರಿ..!
ಇಲ್ಲಿ ಉಳಿದುಕೊಳ್ಳೋಕೆ ಬೇಕಾಗಿದ್ದನ್ನೆಲ್ಲಾ ಸರ್ಕಾರವೇ ಕೊಟ್ಟು, ಸಂಬಳವನ್ನೂ ನೀಡುತ್ತೆ..!
ಭಾರತದ ಅಗ್ರ ಸೆಲೆಬ್ರಿಟಿ ಯಾರು ಗೊತ್ತಾ..? ಟಾಪ್ 10 ಪಟ್ಟಿಯಲ್ಲಿದ್ದಾಳೆ ನಮ್ಮ ಕನ್ನಡತಿ..!
ಈ ವ್ಯಕ್ತಿಗೆ ನಿದ್ದೆ ಮಾಡುವುದೇ ಮರೆತುಹೋಗಿದೆ..! 40 ವರ್ಷದಿಂದ ನಿದ್ದೆಯೇ ಮಾಡಿಲ್ವಂತೆ ಈ ಭೂಪ..!