ಭಾರತ ಮಾತೆಯ ವೀರ ಪುತ್ರ ಅಯಾನ್ ಕಾರ್ಡೋಜೋ ಪಾಕಿಸ್ತಾನಿ ಡಾಕ್ಟರ್ ನಿಂದ ಚಿಕಿತ್ಸೆ ಪಡೆಯಲ್ಲ ಎಂದ ವೀರ..!

0
97

ಅದು 1971ರ ಯುದ್ಧ. ಅದನ್ನು ಭಾರತದ ಶಕ್ತಿ ಪ್ರದರ್ಶನಕ್ಕೆ ಹಿಡಿದ ಕನ್ನಡಿ ಎಂದೇ ಕರೆಯಲಾಗುತ್ತದೆ. ಭಾರತದ ಮಿಲಿಟರಿ ಶಕ್ತಿ ಹೇಗಿತ್ತು ಎಂದರೆ ಕೇವಲ ಹದಿಮೂರೇ ದಿನಗಳಲ್ಲಿ ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿ ಅದರ ಒಂದು ಭಾಗವನ್ನು ವಿಮೋಚನೆಗೊಳಿಸಲಾಯಿತು. ಆ ಭಾಗ ಇಂದು ಬಾಂಗ್ಲಾದೇಶ ಎಂದು ಖ್ಯಾತಿ ಪಡೆದಿದೆ. ಆ ಯುದ್ಧದಲ್ಲಿ ಗೆಲುವು ಸಾಧಿಸಲು ನಮ್ಮ ಸೈನಿಕರೇ ಕಾರಣ. ಆಗಿನ ಕಾಲದಲ್ಲಿ ಬಾಂಗ್ಲಾದೇಶಕ್ಕೂ ನಮ್ಮ ಯೋಧರೇ ಹೀರೋಗಳಾಗಿದ್ದರು. ಅವರಲ್ಲೊಬ್ಬರು ಐಯಾನ್ ಕಾರ್ಡೋಜೋ.
ಅಯಾನ್ ಕಾರ್ಡೋಜೋ ರವರು ಅಪ್ರತಿಮ ವೀರರಾಗಿದ್ದರು. ಭಾರತ ದೇಶಕ್ಕಾಗಿ ಎಂಥದ್ದೇ ಕಷ್ಟ ಬಂದರೂ ಸರಿ, ಅದನ್ನು ಎದುರಿಸುವ ಛಾತಿಯನ್ನು ಹೊಂದಿದ್ದರು. ಆದರೆ ಯುದ್ದದಲ್ಲಿ ಒಂದು ಬಾರಿ ನೆಲಬಾಂಬ್ ಮೇಲೆ ಕಾಲಿಟ್ಟಿದ್ದರಿಂದ ಅವರ ಕಾಲಿಗೆ ತೀವ್ರವಾಗಿ ಗಾಯಗಳಾಗಿದ್ದವು. ಅಂದೇ ಅಯಾನ್ ಕಾರ್ಡೋಜೋರವರು ಭಾರತ ಸೇನೆಯಿಂದ ಹೊರಬೀಳಬೇಕಾಯಿತು. ಆ ಮಹಾನ್ ಯೋಧನ ಜೊತೆ ನಡೆಸಿದ ಒಂದು ಸಂದರ್ಶನದ ತುಣುಕು ಇಲ್ಲಿದೆ ನೋಡಿ.

ನಿಮಗೆ ಗಾಯಗೊಂಡ ಬಗ್ಗೆ ಹೇಳುತ್ತೀರಾ..?

ಅಯಾನ್ ಕಾರ್ಡೋಜೋ : ಯುದ್ದದ ಸಮಯದಲ್ಲಿ ನನಗೆ ಯಾವುದೇ ಗಾಯಗಳಾಗಿರಲಿಲ್ಲ. ಆದರೆ ಒಂದು ವೇಳೆ ಬಿ.ಎಸ್.ಎಫ್ ಕಮಾಂಡರ್ ಒಬ್ಬರು ನನ್ನ ಕೂಗಿ ಯಾರನ್ನಾದರೂ ಕಳುಹಿಸಿ ಎಂದರು. ತಡಮಾಡದೇ ನಾನೇ ಅತ್ತ ಧಾವಿಸಿದೆ. ಆದರೆ ನಾನು ಹೋಗುತ್ತಿದ್ದುದು ಸಿಡಿಗುಂಡುಗಳನ್ನು ಹುದುಗಿಸಿಟ್ಟ ಜಾಗದಲ್ಲಿ ಎಂದು ಗೊತ್ತಾಗಲಿಲ್ಲ. ತಕ್ಷಣವೇ ಒಂದು ಗುಂಡು ಸಿಡಿಯಿತು. ಅದರಿಂದ ನನ್ನ ಕಾಲಿಗೆ ತೀವ್ರವಾದ ಗಾಯಗಳಾದವು. ಕೂಡಲೇ ನನ್ನನ್ನು ಸೇನೆಯ ಒಂದು ಬೆಟಾಲಿಯನ್ ಗೆ ಕರೆದೊಯ್ಯಲಾಯಿತು.

ಅಯಾನ್ ಕಾರ್ಡೋಜೋ : ನನ್ನ ಕಾಲಿಗಾದ ಗಾಯವನ್ನು ಗಮನಿಸಿ ನನ್ನ ಕಾಲನ್ನು ಕತ್ತರಿಸಿ ಎಂದು ಸೂಚಿಸಿದೆ.

ವೈದ್ಯ : ಇದು ನನ್ನಿಂದಾಗದ ಕೆಲಸ.

ಅಯಾನ್ ಕಾರ್ಡೋಜೋ : ನನಗೆ ಕತ್ತಿ ಕೊಡು ನಾನೇ ನನ್ನ ಕಾಲನ್ನು ಕತ್ತರಿಸಿಕೊಳ್ಳುತ್ತೇನೆ. ನಂತರ ಅದನ್ನು ನೀನು ಹೂತು ಬಾ.. ಇದು ನನ್ನ ಆರ್ಡರ್ ಎಂದೆ. ಆದರೆ ಅದೇ ವೇಳೆಗೆ ಕಮಾಂಡಿಂಗ್ ಆಫಿಸರ್(ಸಿಓ) ಒಬ್ಬರು, ಪಾಕಿಸ್ತಾನಿ ವೈದ್ಯರ ಜೊತೆ ಬಂದರು.

ಸಿಓ : ಅಯಾನ್ ನೀನೇನೂ ತಲೆ ಕೆಡಿಸಿಕೊಳ್ಳಬೇಡ. ನಾನು ಪಾಕಿಸ್ತಾನದ ವೈದ್ಯರೊಬ್ಬರನ್ನು ಕರೆತಂದಿದ್ದೇನೆ. ಅವರು ನಿನಗೆ ಚಿಕಿತ್ಸೆ ನೀಡುತ್ತಾರೆ.

ಅಯಾನ್ ಕಾರ್ಡೋಜೋ : ಸಾರ್.. ನನಗೆ ಪಾಕಿಸ್ತಾನದ ವೈದ್ಯರಿಂದ ಚಿಕಿತ್ಸೆ ಪಡೆಯುವ ಅಗತ್ಯವಿಲ್ಲ. ನನ್ನನ್ನು ನನ್ನ ತಾಯ್ನಾಡು ಭಾರತಕ್ಕೆ ಕಳುಹಿಸಿಬಿಡಿ.

ದುರಾದೃಷ್ಟವಶಾತ್ ಆ ವೇಳೆ ಬಾಂಗ್ಲಾದೇಶದಲ್ಲಿ ಯಾವುದೇ ಹೆಲಿಕಾಪ್ಟರ್ ಇರಲಿಲ್ಲ. ಅದನ್ನು ನನಗೆ ತಿಳಿಸಲಾಯಿತು.

ಆಗ ನಾನು ನನ್ನ ಮೇಲಾಧಿಕಾರಿಗೆ ಎರಡು ನಿಬಂಧನೆಗಳನ್ನಿಟ್ಟೆ. ಮೊದಲನೇಯದೆಂದರೆ ನನಗೆ ಪಾಕಿಸ್ತಾನದ ರಕ್ತ ನೀಡಬಾರದು.

ಅದನ್ನು ಗಮನಿಸಿದ ನನ್ನ ಮೇಲಾಧಿಕಾರಿ ಕೋಪಗೊಂಡು ಯೂ ಆರ್ ಫೂಲ್ ಎಂದರು.

ಅಯಾನ್ ಕಾರ್ಡೋಜೋ : ಆದರೆ, ನಾನು ಎಲ್ಲದಕ್ಕೂ ಸಿದ್ಧನಾಗಿದ್ದೆ. ಮತ್ತು ನನಗೆ ಕೆಲಸ ಮಾಡಲು ಅನುಮತಿ ನೀಡಬೇಕು ಎಂದೆ. ಅದಕ್ಕೆ ಅವರು ಸಮ್ಮತಿ ಸೂಚಿಸಿದರು. ಬಳಿಕ ಪಾಕಿಸ್ತಾನದ ವೈದ್ಯ ಮೊಹಮ್ಮದ್ ಬಷೀರ್ ಎಂಬುವವರು ಆಪರೇಷನ್ ಮಾಡಿದರು. ಆದರೆ ಅದಕ್ಕೆ ಪ್ರತಿಯಾಗಿ ನಾನು ಒಲ್ಲದ ಮನಸ್ಸಿನಿಂದ ಥ್ಯಾಂಕ್ಸ್ ಹೇಳಿದೆ. ಆದರೆ ಆ ಬಳಿಕ ಅವರು ಎಂದೂ ನನಗೆ ಸಿಗಲೇ ಇಲ್ಲ.

ನಾನು ಆರ್ಮಿಯಿಂದ ಹೊರಬಂದ ಬಳಿಕ ಒಮ್ಮೆ ಸೇನೆಯ ವೈಸ್ ಚೀಫ್ ಒಬ್ಬರು ನನ್ನನ್ನು ಜಮ್ಮು-ಕಾಶ್ಮೀರಕ್ಕೆ ಕರೆದೊಯ್ದರು. ಅಲ್ಲಿ 6000 ಮೀಟರ್ ಎತ್ತರದಲ್ಲಿ ಹೆಲಿಕಾಪ್ಟರ್ ನಲ್ಲಿ ಕುಳಿತು ಹಾರಾಡುವ ಅವಕಾಶ ಸಿಕ್ಕಿತು. ನಾನು ರಸ್ತೆಯ ಮೂಲಕವೇ ಹೆಲಿಪ್ಯಾಡ್ ಗೆ ಹೋಗಿದ್ದೆ. ಅದನ್ನು ಗಮನಿಸಿದ ವೈಸ್ ಚೀಫ್ ರವರು ದಿಗ್ಭ್ರಮೆಗೊಳಗಾಗಿದ್ದರು. ನಂತರ ನಾನು ಹಿಮದ ಮಧ್ಯೆಯೇ ನಡೆದುಕೊಂಡೇ ಹೋದೆ. ಇದನ್ನು ಗಮನಿಸಿದರೆ ನನ್ನ ಒಂದು ಕಾಲು ಪ್ಲಾಸ್ಟಿಕ್ ನದ್ದು ಎಂದು ಅನ್ನಿಸುತ್ತಲೇ ಇಲ್ಲ. ಯೆಸ್.. ಯುದ್ದದ ಸಂದರ್ಭದಲ್ಲಿ ನನ್ನದೊಂದು ಕಾಲಿಗೆ ತೀವ್ರವಾದ ಗಾಯಗಳಾಗಿದ್ದವು. ಆದ್ದರಿಂದ ಆ ಕಾಲನ್ನು ಕತ್ತರಿಸಲಾಗಿತ್ತು. ಆದರೂ ಕೂಡಾ ನಾನು ಇಂದು ಹೆಚ್ಚು ಶಕ್ತಿಶಾಲಿಯಾಗಿದ್ದೇನೆ. ಪ್ರತಿದಿನ ಬೆಳಗ್ಗೆ ವಾಕ್ ಮಾಡುತ್ತೇನೆ. ಜೊತೆಗೆ ಎಕ್ಸರ್ಸೈಸ್ ಕೂಡಾ ಮಾಡುತ್ತೇನೆ. ಇತರರಿಗಿಂತ ಹೆಚ್ಚು ಆರೋಗ್ಯವಾಗಿದ್ದೇನೆ.

ದೇಶಕ್ಕಾಗಿ ಎಂಥದ್ದೇ ಸಮಯದಲ್ಲಾದರೂ ಸರಿ ನಮ್ಮ ಯೋಧರು ಹೋರಾಟಕ್ಕೆ ನಿಲ್ಲುತ್ತಾರೆ. ಅದೆಂಥದ್ದೇ ಶಕ್ತಿ ಎದುರಾದರೂ ಕೂಡಾ ಅದನ್ನು ಎದುರಿಸುತ್ತಾರೆ. ಆದರೆ ತಮಗಾದ ನೋವನ್ನು ಮರೆತು ಇತರರೊಂದಿಗೆ ಚೆನ್ನಾಗಿ ಬದುಕು ನಡೆಸುತ್ತಾರೆ. ಇದಕ್ಕೆ ನಮ್ಮ ಅಯಾನ್ ಕಾರ್ಡೋಜೋರವರೇ ಸಾಕ್ಷಿ ಅಲ್ಲವೇ..

ಅಯಾನ್ ಕಾರ್ಡೋಜೋ ವೀರ ಯೋಧನಿಗೆ ಸಲಾಂ..!

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಹೆಣ್ಣು ಮಕ್ಕಳಿಗೆ ಜನ್ಮನೀಡಿದ್ದೀಯಾ ಅಂತ ಅಮ್ಮನನ್ನು ಹಿಂಸಿಸುತ್ತಿದ್ದ ಅಪ್ಪ..! ಪುಟ್ಟ ಮಕ್ಕಳನ್ನು ಎತ್ತಿಕೊಂಡು ಉಟ್ಟ ಬಟ್ಟೆಯಲ್ಲೇ ರಾತ್ರೋ ರಾತ್ರಿ ಮನೆ ಬಿಟ್ಟ ತಾಯಿ..!

ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!

ಶ್ರೀಲಂಕಾದಲ್ಲಿ ಭಾರತದ ಧ್ವಜ ಹಾರಿಸಿದ ಕನ್ನಡಿಗ ರಘು..!

ಸಿನಿಮಾಕಥೆಯಂತಿದ್ದರೂ ಇದು ಸಿನಿಮಾ ಸ್ಟೋರಿಯಲ್ಲ..! ಇದು ಇಂಡಿಯಾ, ಸ್ವೀಡನ್ ಲವ್ ಸ್ಟೋರಿ..!

ಇಲ್ಲಿ ಉಳಿದುಕೊಳ್ಳೋಕೆ ಬೇಕಾಗಿದ್ದನ್ನೆಲ್ಲಾ ಸರ್ಕಾರವೇ ಕೊಟ್ಟು, ಸಂಬಳವನ್ನೂ ನೀಡುತ್ತೆ..!

ಭಾರತದ ಅಗ್ರ ಸೆಲೆಬ್ರಿಟಿ ಯಾರು ಗೊತ್ತಾ..? ಟಾಪ್ 10 ಪಟ್ಟಿಯಲ್ಲಿದ್ದಾಳೆ ನಮ್ಮ ಕನ್ನಡತಿ..!

ಬಿಇಡ್ ಗೆ ಸೇರಿದ್ದು 12,800 ವಿದ್ಯಾರ್ಥಿಗಳು, ಪಾಸ್ ಆದವರು 20,000..! ಇದು ಡಾ. ಬಿ.ಆರ್ ಅಂಬೇಡ್ಕರ್ ಯೂನಿವರ್ಸಿಟಿಯ ಕರ್ಮಕಾಂಡ..!

ಈ ವ್ಯಕ್ತಿಗೆ ನಿದ್ದೆ ಮಾಡುವುದೇ ಮರೆತುಹೋಗಿದೆ..! 40 ವರ್ಷದಿಂದ ನಿದ್ದೆಯೇ ಮಾಡಿಲ್ವಂತೆ ಈ ಭೂಪ..!

LEAVE A REPLY

Please enter your comment!
Please enter your name here