ಇಂದಿನ ಟಾಪ್ 10 ಸುದ್ದಿಗಳು..! 21.12.2015

Date:

1. ದಾಖಲೆ ಬೆಲೆಗೆ ‘ಚಕ್ರವ್ಯೂಹ’ ವಿತರಣಾ ಹಕ್ಕು ಸೇಲ್!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತೆ ಸುದ್ದಿ ಮಾಡುತ್ತಿದ್ದಾರೆ. ಚಕ್ರವ್ಯೂಹ’ ರಿಲೀಸ್ ಆಗುವುದಕ್ಕೆ ಇನ್ನೂ ಹೆಚ್ಚು ಟೈಮ್ ಇರುವಾಗಲೇ ಚಿತ್ರದ ವಿತರಣಾ ಹಕ್ಕು ದಾಖಲೆ ಬೆಲೆಗೆ ಮಾರಾಟವಾಗಿದೆ. ಬರೀ ಬಿಕೆಟಿ ಏರಿಯಾ (ಬೆಂಗಳೂರು, ಕೋಲಾರ ಮತ್ತು ತುಮಕೂರು) ಭಾಗದ ವಿತರಣೆ ಹಕ್ಕು ಬರೋಬ್ಬರಿ 5.4 ಕೋಟಿಗೆ ಸೇಲ್ ಆಗಿದೆ.

2. ಬಾಲಾಪರಾಧ ತಿದ್ದುಪಡಿ ಮಸೂದೆಗೆ ರಾಜ್ಯ ಸಭೆಯಲ್ಲಿ ಒಮ್ಮತ : 3 ದಿನದಲ್ಲಿ ಮಂಡನೆ?
ನಿರ್ಭಯಾ ಬಾಲಾಪರಾಧಿ ಬಿಡುಗಡೆ ಬಗ್ಗೆ ದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಪರಿಣಾಮ ರಾಜ್ಯಸಭೆಯಲ್ಲಿ ಹಾಗೇ ಉಳಿದು ಕೊಂಡಿದ್ದ ಬಾಲಾಪರಾಧ ತಿದ್ದುಪಡಿ ಮಸೂದೆ ಬಗ್ಗೆ ಚರ್ಚಿಸಿ ಅಂಗೀಕರಿಸಲು ರಾಜ್ಯಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯಸಭೆಯಲ್ಲಿ ತೃಣ ಮೂಲ ಕಾಂಗ್ರೆಸ್ನ ಸದಸ್ಯ ಎಂಪಿ ಡೆರಕ್ ಓ ಬ್ರಿಯನ್ ಬಾಲಾಪರಾಧ ತಿದ್ದುಪಡಿ ಮಸೂದೆ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ ಎಲ್ಲಾ ಸದಸ್ಯರು ಮಸೂದೆಯನ್ನು ಚರ್ಚಿಸಿ ಅಂಗೀಕರಿಸುವುದಕ್ಕೆ ಒಪ್ಪಿಗೆ ನೀಡಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಉಪರಾಷ್ಟ್ರಪತಿಗಳನ್ನು ಭೇಟಿ ಮಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಉಪ ರಾಷ್ಟ್ರಪತಿ ಹಮಿದ್ ಹನ್ಸಾರಿ ಅವರು ಈ ಮಸೂದೆ ಮೂರು ದಿನಗಳಲ್ಲಿ ಮಂಡನೆ ಆಗುವಂತೆ ಮಾಡುವುದಾಗಿ ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ.
3. ಆಲ್ಕೋಹಾಲ್ ಬದಲು ಹಾಲು ಮಾರಾಟ..!
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅಂದುಕೊಂಡಿದ್ದು ಆದಲ್ಲಿ ಮುಂದಿನ ವರ್ಷದ ಏಪ್ರಿಲ್ 1 ರಂದು ಎಲ್ಲಾ ಮದ್ಯದ ಅಂಗಡಿಗಳಲ್ಲಿ ಮದ್ಯದ ಬದಲು ಹಾಲು ಮಾರಾಟವಾಗಲಿದೆ..!
ನಿತೀಶ್ ಕುಮಾರ್ ಅವರ ಸರ್ಕಾರ ಏಪ್ರಿಲ್ 1 ರಿಂದ ಆಲ್ಕೋಹಾಲ್ ನಿಷೇಧ ಮಾಡುವುದಾಗಿ ಈ ಹಿಂದೆಯೇ ಘೋಷಿಸಿತ್ತು. ಈ ವಿಷಯದಲ್ಲಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿಸಿದ ಬಳಿಕ ಸುದ್ದಿಗಾರರೊಡನೆ ಮಾತಾಡಿದ ಬಿಹಾರ್ ಸಿಎಂ ಮುಚ್ಚಲಾಗುವ ಮದ್ಯದಂಗಡಿ ಜಾಗದಲ್ಲಿ ರಾಜ್ಯ ಹಾಲು ಒಕ್ಕೂಟ `ಸುಧಾ’ದ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡುವುದಾಗಿ ಹೇಳಿದ್ದಾರೆ. ಮದ್ಯದಂಗಡಿ ಮುಚ್ಚಿದ ಬಳಿಕ ಅದೇ ವ್ಯವಹಾರವನ್ನು ಅವಲಂಭಿಸಿರೋ ಕುಟುಂಬಗಳಿಗೆ ತೊಂದರೆ ಆಗುತ್ತೆ ಅನ್ನೋ ಉದ್ದೇಶದಿಂದ ಹಾಲಿನ ಉತ್ಪನ್ನ ಮಾರಾಟಕ್ಕೆ ಅವಕಾಶ ಮಾಡಿಕೊಡುವುದಾಗಿ ಅವರು ಹೇಳಿದ್ದಾರೆ.

4. 3 ದಿನಗಳಲ್ಲಿ ದಿಲ್ವಾಲೆ 65 ಕೋಟಿ, ಬಾಜಿರಾವ್ 46 ಕೋಟಿ ಗಳಿಕೆ..!
ಈ ವಾರ ತೆರೆಕಂಡು ಬಾಜಿರಾವ್ ಮಸ್ತಾನಿ ಮತ್ತು ದಿಲ್ವಾಲೆ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಒಳ್ಳೇ ಗಳಿಕೆಯನ್ನು ಮಾಡಿವೆ..! ಕೇವಲ ಮೂರು ದಿನಗಳಲ್ಲಿ ಶಾರುಖ್ ಖಾನ್ ಅಭಿನಯದ ಸಿನಿಮಾ ದಿಲ್ವಾಲೆ 65 ಕೋಟಿ ಗಳಿಸಿದೆ..! ಅದೇರೀತಿ ರಣವೀರ್ ಮತ್ತು ದೀಪಿಕಾ ಅಭಿನಯದ ಬಾಜಿರಾವ್ ಮಸ್ತಾನಿ 46 ಕೋಟಿ ರೂಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿವೆ.

5 `ರಾಜ್ಯ ಕ್ಯಾನ್ಸರ್ ಸಂಸ್ಥೆ’ ಯಾಗಲಿದೆ ಕಿದ್ವಾಯಿ ಆಸ್ಪತ್ರೆ
ಕರ್ನಾಟಕದ ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆಯಾಗಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಇನ್ನೆರಡು ದಿನದಲ್ಲಿ ರಾಜ್ಯ ಕ್ಯಾನ್ಸರ್ ಸಂಸ್ಥೆ ಎಂಬ ಮಾನ್ಯತೆ ಪಡೆಯಲಿದೆ.
ಇದೇ ತಿಂಗಳ 23ರಂದು ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಕಿದ್ವಾಯಿ ಆಸ್ಪತ್ರೆಯನ್ನು ರಾಜ್ಯ ಕ್ಯಾನ್ಸರ್ ಸಂಸ್ಥೆ ಎಂದು ಘೋಷಣೆ ಮಾಡಲಿದ್ದಾರೆ. ಇದರಿಂದಾಗಿ ಈ ಸಂಸ್ಥೆಯಲ್ಲಿ ಸುಮಾರು 120 ಕೋಟಿ ರೂ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯವನ್ನು ಒದಗಿಸುವ ಕಾರ್ಯಕ್ಕೂ ಚಾಲನೆ ದೊರೆಯಲಿದೆ. ಸುಸಜ್ಜಿತ ಚಿಕಿತ್ಸಾ ಕಟ್ಟಡ ನಿರ್ಮಾಣಕ್ಕೆ ಶಿಲಾವಿನ್ಯಾಸವನ್ನೂ ನೆರವೇರಿಸಲಿದ್ದಾರೆ. ಇಲ್ಲಿ ಹೈ ಎಂಡ್ ರೇಡಿಯೋ ಥೆರಪಿ, ರೋಬೋಟಿಕ್ ಯಂತ್ರಗಳನ್ನು ಅಳವಡಿಸುವುದರ ಜೊತೆಗೆ ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್ ಘಟಕಗಳನ್ನೂ ಸ್ಥಾಪಿಸಲಾಗುತ್ತದೆ.

6. ಇರಾಕ್ನಲ್ಲಿ 1972ರ ನಂತರ ಸೌಂದರ್ಯ ಸ್ಪರ್ಧೆ
ಧಾರ್ಮಿಕ ಕಟ್ಟುಪಾಡು, ಉಗ್ರರ ಅಟ್ಟಹಾಸದಿಂದ ಇರಾಕ್ನಲ್ಲಿ 1972ರಿಂದ ಯಾವುದೇ ಸ್ಪಧರ್ೆ ಏರ್ಪಡಿಸಲಾಗಿರಲಿಲ್ಲ..! ಈ 43 ವರ್ಷದ ನಂತರ ಮತ್ತೆ ಇರಾಕ್ನಲ್ಲಿ ಮಿಸ್ ಇರಾಕ್ ಸ್ಪರ್ಧೆ ನಡೆಯಿತು. ಈಜುಡುಗೆ ಅಥವಾ ತುಂಡು ಉಡುಗೆ, ಮದ್ಯಪಾನ ಪ್ರದರ್ಶನ ಮುಕ್ತವಾಗಿತ್ತು. ಈ ಸ್ಪರ್ಧೆಯಲ್ಲಿ 20 ವರ್ಷ ಶೈಮಾ ಅಬ್ಧೆಲ್ ರೆಹಮಾನ್ ಮಿಸ್ ಇರಾಕ್-2015 ಆಗಿ ಹೊರಹೊಮ್ಮಿದ್ದಾರೆ.

7. ನಿರ್ಭಯಾ ಕೇಸ್, ಬಾಲರಾಕ್ಷಸ ಬಿಡುಗಡೆ ತಡೆಗೆ ಸುಪ್ರೀಂ ನಕಾರ

2012ರಲ್ಲಿ ಸಂಭವಿಸಿದ್ದ ದಿಲ್ಲಿಯ ನರ್ಸಿಂಗ್ ವಿದ್ಯಾರ್ಥಿನಿ ಮೇಲಿನ ಅಮಾನುಷ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಾಲಾಪರಾಧಿ ಬಿಡುಗಡೆಗೆ ತಡೆ ಕೋರಿ ಮಹಿಳಾ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿ ತೀರ್ಪು ನೀಡಿದೆ.
ಚೀನಾದ ಶೆಂಝೆನ್ನಲ್ಲಿ ಭೂಕುಸಿತ: 91 ಮಂದಿ ನಾಪತ್ತೆ

8. ಕೇಜ್ರಿವಾಲ್ ಸೇರಿ 6 ಆಪ್ ನಾಯಕರ ವಿರುದ್ಧ ಜೇಟ್ಲಿ ದಾವೆ

ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯಲ್ಲಿ ಭಾರೀ ಹಗರಣ ನಡೆಸಿದ್ದಾಗಿ ತಮ್ಮ ವಿರುದ್ಧ ಗಂಭೀರ ಆರೋಪ ಮಾಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆರು ಆಪ್ ನಾಯಕರ ವಿರುದ್ಧ ಕೇಂದ್ರ ಹಣಕಾಸು ಸಚಿವ ದೆಹಲಿ ಹೈಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಮತ್ತೊಂದೆಡೆ ಎಎಪಿ ಮುಖಂಡರು ಜೇಟ್ಲಿ ವಿರುದ್ಧ ಪೊಲೀಸ್ ದೂರು ನೀಡಲು ನಿರ್ಧರಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ತನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು, ಅಲ್ಲದೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಿವಿಲ್ ಮತ್ತು ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಾಗಿ ಜೇಟ್ಲಿ ತಿಳಿಸಿದ್ದಾರೆ. ಇನ್ನುಳಿದಂತೆ ಎಎಪಿ ಮುಖಂಡರಾದ ಕುಮಾರ್ ವಿಶ್ವಾಸ್, ಅಶುತೋಷ್, ಸಂಜಯ್ ಸಿಂಗ್, ರಾಘವ್ ಹಾಗೂ ದೀಪಕ್ ಬಾಜಪಾಯಿ ವಿರುದ್ಧವೂ ಮಾನಹಾನಿ ಕೇಸ್ ದಾಖಲಿಸಿರುವುದಾಗಿ ಜೇಟ್ಲಿ ತಿಳಿಸಿದ್ದಾರೆ.

9. 70 ಭಾರತೀಯ ಮೀನುಗಾರರನ್ನು ಬಂಧಿಸಿದ ಪಾಕಿಸ್ತಾನ

ಗುಜರಾತ್ ತೀರದಿಂದ ಮುಂದುವರೆದ ಅಂತರಾಷ್ಟ್ರೀಯ ಸಮುದ್ರ ಗಡಿಯಲ್ಲಿ ಪಾಕಿಸ್ತಾನದ ನೌಕಾ ಭದ್ರತಾ ಏಜೆನ್ಸಿ 70 ಭಾರತೀಯ ಮೀನುಗಾರರನ್ನು ಬಂಧಿಸಿ ಅವರ 11 ದೋಣಿಗಳನ್ನು ವಶಪಡಿಸಿಕೊಂಡಿದೆ. 12 ದೋಣಿಗಳಲ್ಲಿ ಮೀನುಗಾರರು ಮೀನು ಹಿಡಿಯುತ್ತಿದ್ದರು ಆದರೆ ಪಾಕಿಸ್ತಾನದ ಭದ್ರತಾ ಏಜೆನ್ಸಿ ಗುಂಡು ಹಾರಿಸಿದ್ದರಿಂದ ಒಂದು ದೋಣಿಗೆ ಬೆಂಕಿ ಹತ್ತಿಕೊಂಡು ಮುಳುಗಿತು ಎಂದು ರಾಷ್ಟ್ರೀಯ ಮೀನು ಕಾರ್ಯಕರ್ತ ಸಂಘದ ಕಾರ್ಯದರ್ಶಿ ಮನೀಶ್ ಲೋಧಾರಿ ಹೇಳಿದ್ದಾರೆ.

 

10. ಮಿಸ್ ಯೂನಿವರ್ಸ್ ಘೋಷಣೆಯಲ್ಲಿ ಯಡವಟ್ಟು..! ವಿಜೇತೆ ಇವರಲ್ಲ, ಅವರು..!
ಮಿಸ್ ಯೂನಿವರ್ಸ್ 2015ರ ಸ್ಪರ್ಧೆ ಮುಗಿದು ವಿಶ್ವ ಸುಂದರಿಯ ಹೆಸರನ್ನು ಘೋಷಿಸುವಾಗ ಆಕಸ್ಮಿಕವಾಗಿ ಯಡವಟ್ಟಾಗಿದೆ..! 1. ಮಿಸ್ ಯೂನಿವರ್ಸ್ ನ್ನು ಘೋಷಿಸುವಾಗ ಸ್ಟೀವ್ ಹಾರ್ವೆ ಕೊಲಂಬಿಯಾದ ಗ್ಯುಟಿರ್ರೆಝಾ ಮಿಸ್ ಯೂನಿವರ್ಸ್ ಎಂದು ಘೋಷಿಸಿದರು. ಅವರಿಗೆ ಕಿರೀಟವನ್ನೂ ತೊಡಿಸಿ ಬಿಟ್ಟರು..! ಆದರೆ ತಾನು ತಪ್ಪು ಹೆಸರನ್ನು ಘೋಷಿಸಿರೋದನ್ನು ಮನಗಂಡ ಸ್ಟೀವ್ ಹಾರ್ವೆ ಕ್ಷಮೆಯಾಚಿಸಿ ಫಿಲಿಪಿನ್ಸ್ ನ ಸುಂದರಿ ಪಿಯಾ ಆಲೋಂಜೋರ ಹೆಸರನ್ನು ಘೋಷಿಸಿದರು..! ಎಲ್ಲರಿಗೂ ಶಾಕ್ ಆಯ್ತು. ಕೊಲಂಬಿಯಾದ ಸುಂದರಿಗೆ ಹೇಗಾಗಬೇಡ..!? ವಿಶ್ವಸುಂದರಿಯಾಗಿ ಹೊರಹೊಮ್ಮಿದ ಪಿಲಿಪಿನ್ಸ್ ನ ಚೆಲುವೆಗೆ ಶಾಕ್ ಜೊತೆಗೆ ಸಿಕ್ಕಾಪಟ್ಟೆ ಖುಷಿಯೂ ಆಯ್ತು..! ಈ ಯಡವಟ್ಟಿನ ವೀಡಿಯೋ ಇಲ್ಲಿದೆ ನೋಡಿ.

https://www.youtube.com/watch?v=mtUCzNn5wVE

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...