No menu items!
13.5 C
Munich
Sunday, April 26, 2026

ಸಾಮಾಜಿಕ ಜಾಲತಾಣಗಳಲ್ಲಿ ಇವರ ಒಂದು ಪೋಸ್ಟ್ ಮೌಲ್ಯ 8289993.75 -19898985.00 ರೂಪಾಯಿಗಳು..!

Must read

ಸಾಮಾಜಿಕ ಜಾಲತಾಣಗಳಲ್ಲಿಪೋಸ್ಟ್ ಮಾಡೋಕೆ ಇವರಿಗೆ ದೊಡ್ಡ ದೊಡ್ಡ ಕಂಪನಿಗಳು ದುಡ್ಡು ಕೊಡ್ತಾವೆ..!

ದುಡ್ಡು ಮಾಡೋಕೆ ಕಷ್ಟಪಟ್ಟು ದುಡಿ ಬೇಕು ಅಂತೀವಿ..! ಆದ್ರೆ ಕೇವಲ ಕಷ್ಟಪಟ್ಟು ದುಡಿದ್ವಿ ಅಂದ ಮಾತ್ರಕ್ಕೆ ನಾವು ದುಡ್ಡು ಮಾಡೋಕೆ ಆಗಲ್ಲ..! ಅದೃಷ್ಟವೂ ಬೇಕು. ಅದೃಷ್ಟ ಇದ್ರೆ ಕಷ್ಟಪಡದೇ ದುಡ್ಡನ್ನು ಮಾಡ್ಬಹದು..! ಹೆಸರು, ಕೀರ್ತಿ ಕೂಡ ದುಡ್ಡನ್ನು ತಂದು ಕೊಡ ಬಲ್ಲದು..! ಏನ್ ಗುರೂ ಹೆಸರು, ಕೀರ್ತಿ ಹೆಂಗಪ್ಪಾ ದುಡ್ಡು ತಂದು ಕೊಡುತ್ತೆ ಅಂತ ಪ್ರಶ್ನೆ ಮಾಡೋರೂ ಇದ್ದಾರೆ..!? ಇಲ್ಲ ಸ್ವಾಮಿ, ನೀವು ಹೇಗೆ ಒಳ್ಳೆ ಹೆಸರನ್ನು, ಕೀರ್ತಿಯನ್ನು ಸಂಪಾದಿಸ್ತಾ ಗೊತ್ತಿಲ್ಲ..! ಬಟ್ ಒಂದೇ ಒಂದ್ ಸಲ ನೀವು ಫೇಮಸ್ ಆಗ್ಬಿಟ್ಟರೆ ದುಡ್ಡೋ ದುಡ್ಡು..!
ಹೌದು ಹೀಗೂ ದುಡ್ಡು ಸಿಗುತ್ತೆ ಅಂತ ಗೊತ್ತಾಗಿದ್ದು `ಕೆಂಡಾಲ್ ಜೆನ್ನರ್, ಕಾರ ಡೆಲ್ವಿಗ್ನಿ, ಮತ್ತು ಗೀಗಿ ಹದೀದ್ ಎಂಬ ಮೂರು ಜನ ರೂಪದರ್ಶಿಗಳಿಂದ…! ಈ ಮೂವರು ಸಾಮಾಜಿಕ ಜಾಲತಾಣಗಳಲ್ಲಿ ಬರೊಬ್ಬರಿ 79 ಮಿಲಿಯನ್ ಅನುಯಾಯಿಗಳನ್ನು ಹೊಂದಿರೋ ಜನಪ್ರಿಯ ರೂಪದರ್ಶಿಗಳು..! ಇವರ ಜನಪ್ರಿಯತೆ ಇಂದಲೇ ಇವರಿಗೆ ಬೇಜಾನ್ ದುಡ್ಡು ಸಿಗ್ತಾ ಇದೆ…! ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಬ್ರಾಂಡ್ ನ ಬಗ್ಗೆ ಪೋಸ್ಟ್ ಮಾಡಿ ನಾವು ನಿಮಗೆ ದುಡ್ಡು ಕೊಡ್ತೀವಿ ಅಂತ ಇವರನ್ನು ಹುಡ್ಕೊಂಡು ದೊಡ್ಡ ದೊಡ್ಡ ಕಂಪನಿಗಳು ಹಿಂದೆ ಬಿದ್ದಿವೆ..!
ಈ ಮೂವರು ಹೆಸರಾಂತ ಮಾಡೆಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ಪ್ರಭಾವ ಬೀರಿರೋರು..! ಸಾಮಾಜಿಕ ಜಾಲತಾಣಗಳಲ್ಲಿ ಇವರ ಸ್ಟೇಟಸ್ ಗಳಿಗೆ ಭಾರಿ ಬೇಡಿಕೆ ಇದೆ..! ಇವರ ಸ್ಟೇಟಸ್ ಗಳಿಗೆ ಇನ್ನಿಲ್ಲದಂತ ಮೆಚ್ಚುಗೆ, ಮನ್ನಣೆಗಳು ಸಿಗಲಾರಂಭಿಸಿದಾಗ ಪ್ರಸಿದ್ಧ ಬ್ರಾಂಡ್ ಗಳು ಇವರ ಹಿಂದೆ ಬಿದ್ದವು..! ತಮ್ಮ ಬ್ರಾಂಡ್ ನ ಪ್ರಚಾರಕ್ಕೆ ಬನ್ನಿ ಬನ್ನಿ ಅಂತ ಇವರ ಸಮಯಕ್ಕಾಗಿ ಸರದಿಯಲ್ಲಿ ನಿಂತು ಕಾಯಲಾರಂಭಿಸಿದ್ವು..! ಈ ರೂಪದರ್ಶಿಗಳು ತಮ್ಮ ಸಾಮಾಜಿಕ ಜಾಲತಾಣಗಳ ಗೋಡೆಯಲ್ಲಿ ಒಂದೇ ಒಂದು ಸಣ್ಣ ಆಭರಣ ಅಥವಾ ಉಡುಪುಗಳನ್ನು ಪೋಸ್ಟ್ ಮಾಡಿದ ನಿಮಿಷಾರ್ಧದಲ್ಲೇ ಮಾರಾಟವಾಗಲಾರಂಭಿಸಿದ್ವು..! ಈ ನಟಿಯರ ಇಷ್ಟೊಂದು ಜನಪ್ರಿಯತೆಯನ್ನು, ಸಾಮಾಜಿಕ ಜಾಲತಾಣಗಳಲ್ಲಿನ ಇವರ ಪ್ರಭಾವವನ್ನು ಬಳಸಿಕೊಂಡು ಕಂಪನಿಗಳು ತಮ್ಮ ಉತ್ಪನ್ನ ಮಾರಾಟಕ್ಕೆ ಇವರನ್ನು ಕೋಟಿಗಟ್ಟಲೆ ಹಣನೀಡಿ ಪ್ರಚಾರ ಮಾಡಿ ಅಂತ ಕೇಳಿಕೊಳ್ಳಲಾರಂಭಿಸಿದ್ವು..!
ಸಾಮಾಜಿಕ ಜಾಲತಾಣಗಳು ಈ ರೂಪದರ್ಶಿಯರ ಪೋಸ್ಟಿಗಾಗಿ ಮುಗಿ ಬೀಳಲಾರಂಭಿಸಿದ್ವು..! ಡಿ ಮೇರಿ ಅನಾಲಿಸ್ಟಿಕ್ ಅಪ್ಲಿಕೇಷನ್ನ ಮಾಜಿ ಕಾಸ್ಟಿಂಗ್ ಡೈರೆಕ್ಟರ್ ಮತ್ತು ಮುಖ್ಯಸ್ಥರಾಗಿದ್ದ ಫ್ರಾಂಕ್ ಸ್ಪಡಫೋರಾ ಇನ್ಸ್ಟಾಗ್ರಾಂ, ಫೇಸ್ಬುಕ್, ಟ್ವಿಟರ್ ನಲ್ಲಿ ಒಂದೇ ಒಂದು ಪೋಸ್ಟನ್ನು ಶೇರ್ ಮಾಡಲು ಕೈ ತುಂಬಾ ದುಡ್ಡು ಕೊಟ್ಟಿದ್ದರಂತೆ..! ಪ್ರಸ್ತುತ ಈ ಮೂರು ಸಾಮಾಜಿಕ ಜಾಲತಾಣಗಳಲ್ಲಿ ಈ ಮೂರುನ ರೂಪದರ್ಶಿಗಳ ಪೋಸ್ಟ್ ನ ಮೌಲ್ಯ ಅಥವಾ ವ್ಯಾಲ್ಯು 8289993.75 ನಿಂದ 19898985.00 ರೂಪಾಯಿಗಳಿದೆಯಂತೆ..!
ಹೀಗೆ ಸಾಮಾಜಿಕ ಜಾಳತಾಣಗಳಲ್ಲಿ ಪೋಸ್ಟ್ ಮಾಡುವುದರಿಂದಲೂ ದುಡ್ಡನ್ನು ಮಾಡ್ಬಹುದು..! ಆದಕ್ಕೆ ಬೇಕಾಗಿರೋ ಮುಖ್ಯ ಅರ್ಹತೆ ಅಂದರೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಅನುಯಾಯಿಗಳನ್ನು ಹೊಂದಿರ್ಬೇಕು..! ನಿಮ್ಮ ಪೋಸ್ಟ್ ಗಳನ್ನು ತುಂಬಾ ಜನ ಇಷ್ಟಪಡ್ಬೇಕು, ಅದನ್ನು ಶೇರ್ ಮಾಡ್ಬೇಕು, ಲೈಕ್ ಮಾಡ್ಬೇಕು..! ನೀವು ಮಾಡಿದ ಪೋಸ್ಟ್ ಅನ್ನು ಅನುಸರಿಸುವ ಅಭಿಮಾನಿ, ಅನುಯಾಯಿಗಳನ್ನು ನೀವು ಪಡೆಯ ಬೇಕಷ್ಟೇ..?! ಯಾರ್ ಹಣೆಲಿ ಏನ್ ಬರ್ದಿದ್ಯಾ ಗೊತ್ತಿಲ್ಲ..! ಅಂಥಾ ಜನಪ್ರಿಯ ವ್ಯಕ್ತಿಗಳಲ್ಲಿ ನೀವೂ ಒಬ್ಬರಾದ್ರೂ ಆಗ್ಬಹುದು..! ಈ ಸ್ಟೋರಿ ಓದಿದ್ಮೇಲೆ ಒಳ್ಳೇರೀತಿಲಿ ಜನಪ್ರಿಯತೆ ಗಿಟ್ಟಿಸಿಕೊಳ್ಳೋ ಮನಸ್ಸು ಮಾಡಿ ದುಡ್ಡು ನಿಮ್ಮ ಜೊತೆ ಪ್ರಿತಿಸೋ ಜನರೂ ಇರ್ತಾರೆ..! ಜೊತೆಗೆ ದುಡ್ಡೂ ಇರುತ್ತೆ..!
ಹಂಗಂತ ಫ್ರೆಂಡ್ಸ್ ದುಡ್ಡಿಗಾಗಿ ಜನರು ನಿಮ್ಮನ್ನು ಇಷ್ಟಪಡುವಂತೆ ಮಾಡ್ಬೇಡಿ..! ಒಳ್ಳೇ ಕೆಲಸದ ಮೂಲಕ ಗುರ್ತಿಸಿಕೊಳ್ಳಿ. ಒಂದೇ ಒಂದು ಮಾತು ಹೇಳೋಕೆ ಇಷ್ಟಪಡ್ತೀನಿ..! ದುಡ್ಡಿಗಿಂತ ಜನ ಮುಖ್ಯ..! ದುಡ್ಡಿಗಾಗಿ ಯಾವತ್ತೂ ನಿಮ್ಮವರನ್ನು ಕಳ್ಕೊಳ್ಳ ಬೇಡಿ.

  • ಶಶಿಧರ ಡಿ ಎಸ್ ದೋಣೀಹಕ್ಲು

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

78 ವರ್ಷದ ಅಜ್ಜಿಯನ್ನು ರಕ್ಷಿಸಿದ 8ರ ಹುಡುಗಿ..! ಕಾಡಿನ ಮಧ್ಯೆ 4.5 ಕಿಮೀ ನಡೆದಿದ್ದಳಂತೆ ಆ ಪುಟ್ಟ ಬಾಲೆ..!

ರಷ್ಯಾದಲ್ಲಿ ನಡೆಯಿತು ಕೂದಲಿಗಾಗಿ 8 ಕೊಲೆ..! ಕೂದಲಿನ ವಿಷಯಕ್ಕೆ ಪತ್ನಿ, ಮಕ್ಕಳು, ತಾಯಿಯನ್ನೇ ಕೊಂದ..!

ಒಂಟೆಗೆ ಮುತ್ತಿಕ್ಕಿದಳು ಆತ ಡೈವೋರ್ಸ್ ಕೊಟ್ಟ..! ಇದು ಒಂ(ಟೆ)ದು ಮುತ್ತಿನ ಕಥೆ..!

ಕೂಲಿಯ ಮಗ ಇವತ್ತು 100 ಕೋಟಿ ಒಡೆಯ..! ಆರನೇ ಕ್ಲಾಸ್ ಫೇಲ್ ಆಗಿದ್ದ ಹುಡುಗ ಇವತ್ತು ಕೋಟ್ಯಾಧಿಪತಿ..!

ಹುಚ್ಚು ಪರಪಂಚದಲ್ಲಿ ಹುಚ್ಚ ವೆಂಕಟ್ ಗಾನಸುಧೆ.. !

ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article