`ವಿಕ್ರಮ್’ ಶೃಂಗೇರಿಯಲ್ಲಿ ಪಿಯುಸಿ ಓದ್ತಾ ಇದ್ದ. ಆಗ ಅದೇ ಕಾಲೇಜಿನಲ್ಲಿ `ಅನುಷಾ’ ಡಿಗ್ರಿ ಓದ್ತಾ ಇದ್ಲು..! ಒಬ್ಬರ ಪರಿಚಯ ಇನ್ನೊಬ್ಬರಿಗೆ ಇರ್ಲಿಲ್ಲ..! ತೀರ್ಥಹಳ್ಳಿಯಿಂದ ಶೃಂಗೇರಿಗೆ ಬಂದ ವಿಕ್ರಮ್ ಆಗತಾನೆ ಪಿಯುಸಿಗೆ ಜಾಯಿನ್ ಆಗಿದ್ದ. ಅನುಷಾ ಸೆಕೆಂಡ್ ಇಯರ್ ಬಿಕಾಂ ಸ್ಟೂಡೆಂಟ್..! ಹಿಂಗಿರುವಾಗ ಪರಿಚಯವಾದ್ರೂ ಹೇಗಿರುತ್ತೆ..?! ಹೀಗಿರುವಾಗ, ಅದೊಂದು ದಿನ, ಅನುಷಾ ಅವಳ ಗೆಳತಿಯರೊಡನೆ ಕ್ಯಾಂಟಿನ್ ಗೆ ಹೋಗ್ತಾಳೆ..! ಬಿಕೋ ಅನ್ನುತ್ತಿದ್ದ ಆ ಕ್ಯಾಂಟಿನ್ ನಲ್ಲಿ ವಿಕ್ರಮ್ ಒಬ್ಬನೇ ಕೂತಿದ್ದ..! ಕಾಫಿ ಕುಡಿಯುತ್ತಾ.. ಸಿಗರೇಟ್ ಸೇದ್ತಾ ಅವನ ಪಾಡಿಗೆ ಅವನು ಪೇಪರ್ ಓದ್ತಾ ಇದ್ದ..! ಅನುಷಾ ಮತ್ತು ಆಕೆಯ ಫ್ರೆಂಡ್ಸ್ ಬಂದು ಕುಳಿತರೂ ಅವನು ಅವನ ಪಾಡಿಗೆ ಸಿಗರೇಟ್ ಸೇದ್ತಾನೇ ಇದ್ದ..! ಪದೇ ಪದೇ ಅನುಷಾ ಅವನನ್ನು ಸಿಟ್ಟಿನಿಂದ ದುರುಗುಟ್ಟಿ ನೋಡ್ತಾಳೆ..! ಅವನು ಸಿಗರೇಟ್ ಸೇದುವುದನ್ನು ಬಿಡೋ ಥರ ಕಾಣ್ಲಿಲ್ಲ..! ಸಿಟ್ಟಿನಿಂದ ಎದ್ದು, ಅವನ ಟೇಬಲ್ ಬಳಿ ಹೋಗಿ.. `ಹಲೋ… ನಿಮಗೆ ಬುದ್ಧಿ ಇದೆಯಾ..? ಓದೋಕೆ ಬರುತ್ತಾ..’ ಅಂತ ಕೇಳ್ತಾಳೆ..! ಪರಿಚಯವಿಲ್ಲದ ಹುಡುಗಿಯೊಬ್ಬಳು ಹೀಗೆ ಮಾತಾಡಿಸ್ತಾಳಾ..?! ಅದೂ.. ಈ ಶೃಂಗೇರಿಯಲ್ಲಿ..?! ಅಂತ ವಿಕ್ರಮ್ ಗೆ ಆಶ್ಚರ್ಯ ಆಗುತ್ತೆ..! ಅವಳ ಮಾತಿಗೆ ಕಿವಿಗೊಡದೆ.. ಅವಳನ್ನೊಮ್ಮೆ ದಿಟ್ಟಿಸಿ ನೋಡಿ ಅವನ ಪಾಡಿಗೆ ಅವನು ಹೊಗೆ ಬಿಡೋ ಕೆಲಸವನ್ನು ಮುಂದುವರೆಸ್ತಾನೆ..! ಅನುಷಾಳ ಕೋಪ ನೆತ್ತಿಗೆ ಏರುತ್ತೆ..! ಫ್ರೆಂಡ್ಸ್ ಬಾರೆ..ಅಂತ ಕರೆದರೂ ವಾಪಸ್ಸು ಹೋಗದೆ.. ಅವನ ಕೈಯಲ್ಲಿದ್ದ ಸಿಗರೇಟ್ ಅನ್ನು ಕಿತ್ತು..`ನೋ ಸ್ಮೋಕಿಂಗ್’ ಎಂದು ಬರೆದಿದ್ದ ಪೋಸ್ಟರ್ ಅನ್ನು ತೋರಿಸ್ತಾಳೆ..! ಅದನ್ನು ನೋಡಿದ ವಿಕ್ರಮ್ ಸರಿ, ಸಾರಿ ರೀ.. ಯಾರು ಇಲ್ಲ ಅಂತ ಸೇದ್ತಾ ಇದ್ದೆ ಅಂತ ಹೇಳ್ತಾನೆ..! ಸರಿ, ಸರಿ.. ಇನ್ಮುಂದೆ ಹೀಗೆ ಮಾಡ್ಬೇಡಿ ಅಂತ ಬೈದು ಹೋಗ್ತಾಳೆ..! ಹೋಗುವಾಗ ಕಸಿದುಕೊಂಡಿದ್ದ ಸಿಗರೇಟ್ ಅನ್ನು ವಾಪಸ್ಸು ಅವನ ಕೈಗೆ ಕೊಟ್ಟು ಸ್ಮೈಲ್ ಕೊಡ್ತಾಳೆ..! ಆ ಸಿಗರೇಟ್ ಅನ್ನು ಕಾಲಿನಲ್ಲಿ ಹೊಸಕಿ ಕ್ಯಾಂಟಿನ್ ನಿಂದ ಹೊರಗೆ ಹೋಗ್ತಾನೆ..! ಮತ್ತೆಂದೂ ಆತ ಸಿಗರೇಟ್ ಮುಟ್ಟಲೇ ಇಲ್ಲ..!
ಗೆಳತಿಯರನ್ನೆಲ್ಲಾ ಹಾಸ್ಟೆಲ್ ಗೆ ಸಾಗಹಾಕಿ.. ಡಿಪಾರ್ಟ್ ಮೆಂಟ್ ಹತ್ತಿರ ನಿಲ್ಲಿಸಿದ್ದ ಸ್ಕೂಟಿಯನ್ನು ತೆಗೆದುಕೊಂಡು ಮನೆಗೆ ಹೋಗೋಕೆ ಅಂತ ಡಿಪಾರ್ಟ್ ಮೆಂಟ್ ಕಡೆಗೆ ಹೋಗ್ತಾಳೆ..! ಅಲ್ಲೇ ಕಟ್ಟೆಯಲ್ಲಿ ಮತ್ತದೇ ಪೇಪರ್ ಓದ್ತಾ ವಿಕ್ರಮ್ ಕೂತಿರ್ತಾನೆ..! ಇವಳನ್ನು ನೋಡಿದವನೇ ಅಲ್ಲಿಂದ ಎದ್ದು ಹೋಗ್ತಾನೆ..! ಅನುಷಾಗೆ ನಗು ಬರುತ್ತೆ..! ಅವನನ್ನು ನಗುತ್ತಲೇ.. ಸಾರ್..ಬನ್ನಿ ಇಲ್ಲಿ ಅಂತ ಕರೀತಾಳೆ..! ” ಸೀನಿಯರ್ ಅನ್ನೋ ಭಯದಿಂದ ಅವಳ ಬಳಿ ತಲೆ ತಗ್ಗಿಸಿಕೊಂಡು ಹೋಗ್ತಾನೆ..!
`ನಾನು ಅನುಷಾ.., ಇಲ್ಲೇ ಸೆಕೆಂಡ್ ಇಯರ್ ಬಿಕಾಂ ಮಾಡ್ತಾ ಇದ್ದೀನಿ’ ಅಂತ ಪರಿಚಯ ಮಾಡಿಕೊಳ್ತಾಳೆ..! `ಹಲೋ, ನಾನು ವಿಕ್ರಮ್, ಫಸ್ಟ್ ಪಿಯು, ಕಾಮರ್ಸ್ ಸ್ಟೂಡೆಂಟ್’ ಎಂದು ವಿಕ್ರಮ್ ಪರಿಚಯಿಸಿ ಕೊಳ್ತಾನೆ..! ಹೀಗೆ ಒಂದೇ ಒಂದು ಸಿಗರೇಟ್ ಇವರಿಬ್ಬರನ್ನು ಪರಸ್ಪರ ಪರಿಚಯ ಮಾಡಿಸುತ್ತೆ..!
ಪರಿಚಯ ಸ್ನೇಹವಾಗುತ್ತೆ..! ಇವರಿಬ್ಬರೂ ತುಂಬಾ ಅಂದ್ರೆ ತುಂಬಾನೇ ಕ್ಲೋಸ್ ಆಗ್ತಾರೆ..! ಇವನು ಪಿಯು ಮುಗಿಸಿ ಡಿಗ್ರಿಗೆ ಜಾಯಿನ್ ಆಗೋ ಹೊತ್ತಿಗೆ, ಅನುಷಾ ಡಿಗ್ರಿ ಮುಗಿಸಿ ಎಂ.ಕಾಂ ಮಾಡೋಕೆ ಅಂತ ಮಂಗಳೂರು ವಿವಿಗೆ ಸೇರ್ತಾಳೆ..! ಊರು ಬಿಟ್ಟು ಮಂಗಳೂರಿಗೆ ಹೋದ್ರೂ ಅನುಷಾ ದಿನಾ ವಿಕ್ರಮ್ ಜೊತೆ ಗಂಟೆಗಟ್ಟಲೇ ಮಾತಾಡ್ತಾ ಇದ್ಲು..! ಹೀಗೆ ಆ ಎರಡು ವರ್ಷವೂ ಕಳೆದೋಯ್ತು..! ವಿಕ್ರಮ್ ಗೆ ಅಷ್ಟರಲ್ಲಿಯೇ ಅನುಷಾ ಮೇಲೆ ಪ್ರೀತಿ ಹುಟ್ಟಿರುತ್ತೆ..! ಈ ವಿಷಯವನ್ನು ಹೇಳಿದ್ರೆ ಅನುಷಾ ಎಲ್ಲಿ ಕೋಪ ಮಾಡ್ಕೊಂಡು ಫ್ರೆಂಡ್ ಶಿಪ್ ಬೇಡ ಅಂತ ದೂರ ಆಗ್ತಾಳೋ ಅಂತ ಅನ್ಕೊಂಡು ಪ್ರಪೋಸ್ ಮಾಡ್ದೇ ಸುಮ್ಮನೇ ಇದ್ದ..! ಅನುಷಾಳ ಎಂಕಾಂ ಮುಗಿದಿದ್ದೇ ತಡ ಅವಳ ಮನೆಯಲ್ಲಿ ಹುಡುಗನ್ನು ಹುಡುಕೋಕೆ ಶುರು ಮಾಡಿದ್ರು..! `ಮನೆಯಲ್ಲಿ ಹುಡುಗನ್ನು ನೋಡ್ತಾ ಇದ್ದಾರೆ ಕಣೋ.. ನನ್ನ ಮದುವೆಗೆ ಓಡಾಟ ಮಾಡ್ಬೇಕು ಆಯ್ತಾ..? ಅಂತ ಅನುಷಾ ವಿಕ್ರಮ್ ಗೆ ಹೇಳ್ತಾಳೆ..! ಅನುಷಾಳ ಆ ಮಾತನ್ನು ಕೇಳಿ ಇವನಿಗೆ ದುಃಖ ತಡೆದುಕೊಳ್ಳೋಕೆ ಆಗಲ್ಲ..! ಆಮೇಲೆ ಫೋನ್ ಮಾಡ್ತೀನಿ..ಅಂತ ಕಾಲ್ ಕಟ್ ಮಾಡ್ತಾನೆ..! ಅವನ ದ್ವನಿ ಕೇಳಿ ಅನುಷಾಗೆ ಎಲ್ಲಾ ಅರ್ಥವಾಗಿರುತ್ತೆ..! ಅವಳಿಗೂ ಇವನ ಮೇಲೆ ಪ್ರೀತಿ ಇರುತ್ತೆ..! ಅವಳು ಮತ್ತೆ ಫೋನ್ ಮಾಡ್ತಾಳೆ..! `ಪ್ಲೀಸ್ ಕಟ್ ಮಾಡ್ಬೇಡ.. ನೀನು ಅಳ್ತಾ ಇದ್ದೀಯಾ..ಅಂತ ಗೊತ್ತು..! ನನ್ನ ಮದುವೆ ಫಿಕ್ಸ್ ಆದ್ರೆ ನಿಂಗೇಕೆ ಅಳು ಬರುತ್ತೆ.. ಅಂತ ಕೇಳ್ತಾಳೆ..! ಅದಕ್ಕೆ `ಅಳ್ತಾ ಇಲ್ಲ, ಅನು ಸ್ವಲ್ಪ ಬೇಜಾರ್ ಆಯ್ತು ಅಷ್ಟೇ.. ನೀನು ಮದುವೆ ಆದ್ಮೇಲೆ ನನ್ ಜೊತೆ ಇಷ್ಟುದಿನ ಮಾತಾಡ್ತಾ ಇದ್ದಂಗೆ ಮಾತಾಡೋಕೆ ಆಗಲ್ವಲಾ’ ಎಂದು ಹೇಳ್ತಾನೆ..!
“ಹೇ, ಪೆಂಗಾ..ಡ್ರಾಮಾ ಮಾಡ್ಬೇಡ.. ನಂಗೂ ಅರ್ಥ ಆಗುತ್ತೆ..! ನಾನು ನಿನಗಿಂತ ದೊಡ್ಡವಳು ಕಣೋ…ಆದ್ರೂ ಪರವಾಗಿಲ್ಲ.. ನನಗೆ ನೀನು ಇಷ್ಟವಾಗಿದ್ದೀಯ..! ನಿನಗೆ ನಾನು ಇಷ್ಟಾನಾ ಅಂತ ನೇರವಾಗೇ ಕೇಳ್ತಾಳೆ..! ಆ ಮಾತು ಕೇಳ್ತಾ ಇದ್ದಂಗೆ ವಿಕ್ರಮ್ ಫುಲ್ ಖುಷಿ..! `ಜಾಸ್ತಿ ಖುಷಿ ಪಡ್ಬೇಡಾ.. ಇನ್ನೂ ಒಂದು ವರ್ಷ ಡಿಗ್ರಿ ಇದೆ.. ಅದನ್ನ ಮುಗಿಸಿಕೋ.. ಆಮೇಲೆ ಎರಡು ವರ್ಷ ಮಾಸ್ಟರ್ ಡಿಗ್ರಿ ಮಾಡಿ ಕೆಲಸಕ್ಕೆ ಸೇರು ಅಷ್ಟೊತ್ತು ನಾನು ಕಾಯ್ತೀನಿ’ ಅಂತಾಳೆ ಅನುಷಾ..!
ಮನೆಯಲ್ಲಿ ಇಷ್ಟುಬೇಗ ಮದುವೆ ಬೇಡ ಅಂತ ಹಠ ಹಿಡಿಯುತ್ತಾಳೆ..! ಒಬ್ಬಳೇ ಮಗಳ ಮನಸ್ಸನ್ನು ನೋವಿಸೋಕೆ ಅಪ್ಪ ಅಮ್ಮಂಗೂ ಇಷ್ಟ ಆಗಲ್ಲ..! ಅವಳ ಇಷ್ಟದಂತೆ ಕೆಲಸಕ್ಕೆ ಕಳುಹಿಸ್ತಾರೆ..! ಅವಳು ಮೈಸೂರಿನ ಕಾಲೇಜ್ ಒಂದರಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡ್ತಾಳೆ..! ವಿಕ್ರಮ್ ಗೆ ಕೆಲವೊಮ್ಮೆ ದುಡ್ಡನ್ನೂ ಕೊಟ್ಟು, ಓದಲಿಕ್ಕೆ ಸಹಾಯ ಮಾಡ್ತಾಳೆ..! ವಿಕ್ರಮ್ ಬಿಕಾಂ ಮುಗಿಸಿ, ಎಂಬಿಎ ಕೂಡ ಮುಗಿಸ್ತಾನೆ..! ಎರಡು ವರ್ಷ ಕೆಲಸವನ್ನೂ ಮಾಡ್ತಾನೆ..! ಅಷ್ಟೊತ್ತಿಗೆ ಇವಳು ಕೆಲಸಕ್ಕೆ ಸೇರಿ ಐದು ವರ್ಷವಾಗಿರುತ್ತೆ..! ಅನುಷಾಳೇ ಅವಳ ಮನೆಯಲ್ಲಿ ಮಾತಾಡ್ತಾಳೆ..! ಅದೃಷ್ಟಕ್ಕೆ ಅವರಿಬ್ಬರ ಜಾತಿ ಒಂದೇ..! ಆದರೆ ಅನುಷಾ ವಿಕ್ರಮ್ ಗಿಂತ ಮೂರು ವರ್ಷ ದೊಡ್ಡವಳು..! ಅದೇ ಕಾರಣಕ್ಕಾಗಿ ಅವರಿಬ್ಬರ ಮನೆಯಲ್ಲೂ ಮೊದಮೊದಲಿಗೆ ಒಪ್ಪಲ್ಲ..! ಒಬ್ಬನೇ ಮಗನಾದ ವಿಕ್ರಮ್ ಗೆ ಬೇಜಾರು ಮಾಡೋಕೆ ಅವನ ತಂದೆ ತಾಯಿಗೆ ಇಷ್ಟವಾಗಲ್ಲ..! ಅದೇರೀತಿ ಒಬ್ಬಳೇ ಮಗಳಾದ ಅನುಷಾಳಿಗೆ ಬೇಜಾರು ಮಾಡೋಕೆ ಅವಳ ತಂದೆ ತಾಯಿಗೆ ಇಷ್ಟವಾಗಲ್ಲ..! ಎರಡೂ ಮನೆಯವರು ಒಪ್ಪಿ ಮದುವೆ ಮಾಡ್ತಾರೆ..! ಮದುವೆ ಆದ ಮೇಲೂ ಇಬ್ಬರೂ ಮೊದಲಿನಂತೇ ಒಬ್ಬರನ್ನೊಬ್ಬರು ಪ್ರೀತಿಸ್ತಾನೇ ಇದ್ದಾರೆ..! ಅನುಷಾ ವಿಕ್ರಮ್ಗಿಂತ ಮೂರು ವರ್ಷ ದೊಡ್ಡವಳಾದ್ದರಿಂದ ಅವಳೇ ಇವನಿಗೆ ಸರಿ ತಪ್ಪನ್ನು ತಿಳಿ ಹೇಳ್ತಾಳೆ..! ಅವಳ ಮಾತನ್ನು ಯಾವತ್ತೂ ವಿಕ್ರಮ್ ತೆಗೆದು ಹಾಕಿಲ್ಲ..! ವಿಕ್ರಮ್ ಮಾತನ್ನೂ ಅನುಷಾ ತೆಗೆದು ಹಾಕಲ್ಲ..! ಒಟ್ನಲ್ಲಿ ಇವರ ಸಂಸಾರ ಸಖತ್ ಹ್ಯಾಪಿಯಾಗಿದೆ..! ಇವರಿಬ್ಬರ ಜೊತೆ ಇವರಿಬ್ಬರ ಅಪ್ಪ ಅಮ್ಮ ಕೂಡ ಇದ್ದಾರೆ…! ಮನೆಯಲ್ಲೊಂದು ಪುಟ್ಟ ಪಾಪು ಕಿಲಕಿಲ ನಗುತ್ತಿದೆ..! ಈ ಫ್ಯಾಮಿಲಿ ಹೀಗೆ ನಗುತ್ತಾ ಇರಲೆಂದು ಆಶಿಸೋಣ..!
- ಶಶಿಧರ ಡಿ ಎಸ್ ದೋಣಿಹಕ್ಲು
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಎರಡು ಮುಖವುಳ್ಳ ಮಾನವನನ್ನು ಕಂಡಿದ್ದೀರಾ..?
12,000 ಹುಡುಗಿಯರನ್ನು ಲೈಂಗಿಕ ಗುಲಾಮಗಿರಿಯಿಂದ ಕಾಪಾಡಿದ ತಾಯಿ..! ಇವರು ಕಟ್ಟಿದ `ತಾಯಿಮನೆ’ ಸಂತ್ರಸ್ತರ ತವರು ಮನೆ..!
ಅಂದು ಅಮ್ಮ ಇಲ್ಲದಿದ್ದರೆ ಹೇಗಿರುತ್ತಿತ್ತು ಗೊತ್ತಾ..? ಅಪ್ಪ ಎಂಬ ಗುಮ್ಮ ಕೊನೆಗೂ ಹೀರೋ ಆದ
ಹುಚ್ಚ ವೆಂಕಟನ ಈ ಇಂಟರ್ವ್ಯೂ ನೋಡಿದೀರಾ..? ಅಯ್ಯೋ ಸಖತ್ ಮಜಾ ಇದೆ.. ನೋಡಿ…
ನಿಮ್ಮ ಪ್ರಕಾರ ಬಿಗ್ ಬಾಸ್ ಗೆಲ್ಲೋರು ಯಾರು..? ಈಗಲೇ ಕಮೆಂಟ್ ಮಾಡಿ, ಓಟ್ ಮಾಡಿ..!
ವಾಲ್ಮೀಕಿ ತನ್ನ ತಪ್ಪನ್ನು ತಿದ್ದಿಕೊಂಡಿದ್ದರಿಂದ ಮಹರ್ಷಿಯಾದರು..! ವಾಲ್ಮೀಕಿ ಜಯಂತಿಯ ಶುಭಾಶಯಗಳು..!