ಯಶ್ ಮನೆಗೆ‌ ನಾಳೆ‌ ಬರ್ತಿದೆ ಅಂಬರೀಶ್ ಅವರು ಗಿಫ್ಟ್ ಆಗಿ ಬುಕ್ ಮಾಡಿದ್ದ ತೊಟ್ಟಿಲು..

Date:

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ದಂಪತಿಗಳ ಮುದ್ದು ಮಗುವಿಗೆ ರೆಬಲ್ ಸ್ಟಾರ್ ಅಂಬರೀಷ್ ಅವರು ಪ್ರೀತಿಯಿಂದ ಬುಕ್ ಮಾಡಿದ್ದ ತೊಟ್ಟಿಲು ನಾಳೆಯೇ  ಯಶ್ ಮನೆಗೆ ತಲುಪಲಿದೆ. ಹೌದು, ಅಂಬಿ ಯಾರಿಗೂ ಗೊತ್ತಾಗದಂತೆ, ಯಶ್ ಮಗುವಿಗೆ ತೊಟ್ಟಿಲು ಬುಕ್ ಮಾಡಿದ್ದರು. ಇದೀಗ ಮಗುವಿಗೆ ಕೊಟ್ಟ ಉಡುಗೊರೆ ನಾಳೆ ಯಶ್ ಮನೆಗೆ ತಲುಪಲಿದೆ.

ಅಂಬರೀಶ್ ನೀಡಿದ ಈ ತೊಟ್ಟಿಲಿಗೆ ಕಿತ್ತೂರಿನಲ್ಲಿ ನಾಳೆ ಅಂದ್ರೆ ಫೆಬ್ರವರಿ 16ರಂದು ವಿಶೇಷ ಪೂಜೆ ನಡೆಯಲಿದೆ. ತೊಟ್ಟಿಲ ಮೇಲೆ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳ ಕಥೆಗಳನ್ನು ಸಾರುವ ಚಿತ್ರಗಳನ್ನು ಕೆತ್ತಲಾಗಿದೆಯಂತೆ. ಇಂಥ ಶ್ರೇಷ್ಠ ತೊಟ್ಟಿಲು ನಾಳೆಯೇ ಯಶ್ರಾಧಿಕಾ ದಂಪತಿಗಳ ಕೈ ಸೇರಲಿದೆ.

ಅಂಬಿಯ ಆಶಯದಂತೆ 1.5 ಲಕ್ಷ ರೂಪಾಯಿ ಮೌಲ್ಯದ ತೊಟ್ಟಿಲು ನಿರ್ಮಾಣವಾಗಿದ್ದು, ಯಶ್ ಮತ್ತು ರಾಧಿಕಾ ದಂಪತಿಗೆ ಸುಮಲತಾ ಅಂಬರೀಶ್ ಉಡುಗೊರೆಯಾಗಿ ನೀಡಲಿದ್ದಾರೆ.

Share post:

Subscribe

spot_imgspot_img

Popular

More like this
Related

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಪ್ರಾಚೀನ...

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್ ಬೆಂಗಳೂರು:...

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ...

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ, ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತ

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ,...