ಇಂದಿನ ಟಾಪ್ 10 ಸುದ್ದಿಗಳು..! 31.12.2015

Date:

1. ಭಾರತ-ಪಾಕ್ ಶತ್ರುಗಳಾಗಿಯೇ ಇರಲ್ಲ : ಶರೀಫ್
ಭಾರತ ಮತ್ತು ಪಾಕಿಸ್ತಾನ ಶತ್ರು ರಾಷ್ಟ್ರಗಳಾಗಿಯೇ ಮುಂದುವರೆಯಲು ಸಾಧ್ಯವೇ ಇಲ್ಲ ಎಂದು ಪಾಕ್ ಪ್ರಧಾನಿ ನವಾಜ್ ಶರೀಫ್ ಹೇಳಿದ್ದಾರೆ..!
ಚೀನಾ-ಪಾಕ್ ಆಥರ್ಿಕ ಕಾರಿಡಾರ್ (ಸಿಸಿಇಸಿ) ಯೋಜನೆಗೆ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತಾಡಿದ ಅವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಎಲ್ಲಾ ಸಮಸ್ಯೆಗಳ ಕುರಿತು ಮಾತುಕತೆ ನಡೆಸೋ ಅಗತ್ಯವಿದೆ, ಈ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರೋ ನಝೀರ್ ಜುಂಜುವಾ ಅವರು ಶೀಘ್ರದಲ್ಲೇ ಸಭೆ ಏರ್ಪಡಿಸಿ ಭಾರತದ ಅಧಿಕಾರಿಗಳೊಂದಿಗೆ ಸಮಸ್ಯೆ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

2. ಅಶ್ವಿನ್ ಐಸಿಸಿಯ ನಂಬರ್ 1 ಟೆಸ್ಟ್ ಬೌಲರ್ ; 42 ವರ್ಷಗಳಲ್ಲೇ ಮೊದಲ ಭಾರತೀಯ..!
ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಸಿಸಿಯ ಅಗ್ರಶ್ರೇಯಾಂಕಿತ ಟೆಸ್ಟ್ ಬೌಲರ್ ಎನಿಸಿಕೊಳ್ಳುವ ಮೂಲಕ 2015ನ್ನು ಸಂಭ್ರಮದಿಂದ ಮುಗಿಸಿದ್ದಾರೆ. ಅಶ್ವಿನ್ ನಂ1 ಟೆಸ್ಟ್ ಬೌಲರ್ ಆಗಿ ಹೊರ ಹೊಮ್ಮುವುದರ ಮೂಲಕ ಕಳೆದ 42 ವರ್ಷಗಳಲ್ಲಿ ಈ ಮಹತ್ತರ ಸಾಧನೆ ಮಾಡಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 1973ರಲ್ಲಿ ಬಿಷನ್ ಸಿಂಗ್ ಬೇಡಿ ಈ ಸಾಧನೆ ಮಾಡಿದ್ದರು. ಆ ಬಳಿಕ ಇಲ್ಲಿಯವರೆಗೆ ಯಾವೊಬ್ಬ ಭಾರತೀಯ ಬೌಲರ್ ಟೆಸ್ಟ್ ರ್ಯಾಕಿಂಗ್ನಲ್ಲಿ ನಂ1 ಪಟ್ಟಕ್ಕೇರಿರಲಿಲ್ಲ..!

3. ಪಾಕ್ ಮೂಲದ ಗಾಯಕ ಅದ್ನಾನ್ ಸಮಿಗೆ ಭಾರತೀಯ ಪೌರತ್ವ
ಪಾಕ್ ಮೂಲದ ಖ್ಯಾತ ಗಾಯಕ ಅದ್ನಾನ್ ಸಮಿ 2016ರಿಂದ ಭಾರತದ ನಾಗರಿಕರಾಗಲಿದ್ದಾರೆ. ಸಮಿ ಅವರಿಗೆ ಭಾರತೀಯ ಪೌರತ್ವ ನೀಡಲಾಗಿರುವ ಬಗ್ಗೆ ಗೃಹ ಇಲಾಖೆ ಘೋಷಿಸಿದೆ.

4. ನೋಟುಗಳಲ್ಲಿ ಅಂಬೆಡ್ಕರ್, ವಿವೇಕಾನಂದರನ್ನು ಫೋಟೋಕೆ ಒತ್ತಾಯ..!
ಕರೆನ್ಸಿ ನೋಟುಗಳಲ್ಲಿ ಬಿಆರ್ ಅಂಬೇಡ್ಕರ್ ಮತ್ತು ಸ್ವಾಮಿ ವಿವೇಕಾನಂದರ ಫೋಟೋಗಳನ್ನೂ ಚಿತ್ರಿಸಬೇಕೆಂದು ರಾಷ್ಟ್ರೀಯ ಸಲಹಾ ಮಂಡಳಿಯ ಮಾಜಿ ಸದಸ್ಯ ನರೇಂದ್ರ ಜಾದವ್ ಒತ್ತಾಯಿಸಿದ್ದಾರೆ.
1996ರ ನಂತರ ಎಲ್ಲಾ ನೋಟುಗಳಲ್ಲಿ ಗಾಂಧೀಜಿ ಫೋಟೋಗಳು ಮುದ್ರಿತವಾಘಿವೆ, ಆದರೆ ಅಂಬೇಡ್ಕರ್ ಹಾಗೂ ವಿವೇಕಾನಂದರ ಫೋಟೋ ಯಾಕಿಲ್ಲ ಎಂದು ಪ್ರಶ್ನಿಸಿರುವ ಅವರು ಅಮೇರಿಕಾ ಮತ್ತು ಬ್ರಿಟನ್ನಲ್ಲಿ ಅನೇಕ ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳನ್ನು ಕರೆನ್ಸಿ ನೋಟುಗಳಲ್ಲಿ ಮುದ್ರಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿರುವುದಾಗಿ ಹೇಳಿದ್ದಾರೆ.

5. ದೆಹಲಿ- ಮೀರತ್ 17 ಪಥಗಳ ಎಕ್ಸ್ ಪ್ರೆಸ್ ಹೈವೆ ಶಂಕುಸ್ಥಾಪನೆ ನೆರವೇರಿಸಿದ ಮೋದಿ

ಅಂದಾಜು 7500 ಕೋಟಿ ರೂಪಾಯಿ ವೆಚ್ಚದ ದೆಹಲಿ ಮತ್ತು ಮೀರತ್ ನಡುವಿನ 14 ಪಥಗಳ ಎಕ್ಸ್ಪ್ರೆಸ್ ಹೈವೆಯ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ನೆರವೇರಿಸಿದ್ದಾರೆ.
ಶಂಕುಸ್ಥಾಪನೆ ಬಳಿಕ ಮಾತನಾಡಿರುವ ಅವರು ದೆಹಲಿ- ಮೀರತ್ ನಡುವಿನ 14 ಪಥಗಳ ಹೈವೇ ಹೊಸ ವರುಷಕ್ಕೆ ಸರ್ಕಾರದ ಉಡುಗೊರೆಯಾಗಿದ್ದು, ಸಂಪರ್ಕ ವ್ಯವಸ್ಥೆಯೇ ದೇಶದ ಅಭಿವ್ರದ್ಧಿಯ ಕೀಲಿ ಕೈ ಅಂದಿದ್ದಾರೆ.

6.ದೆಹಲಿ ಸರ್ಕಾರದ ವಿರುದ್ಧ ಅಧಿಕಾರಿಗಳ ಪ್ರತಿಭಟನೆ

ದೆಹಲಿ ಕ್ಯಾಬಿನೆಟ್ ಟಿಪ್ಪಣಿಗೆ ಸಹಿಹಾಕಲು ನಿರಾಕರಿಸಿದ ಇಬ್ಬರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಿರುವ ದೆಹಲಿ ಸರ್ಕಾರದ ಕ್ರಮ ಖಂಡಿಸಿ 200 ಕ್ಕೂ ಹೆಚ್ಚು ಅಧಿಕಾರಿಗಳು ಸಾಮೂಹಿಕ ರಜೆ ತೆಗೆದುಕೊಳ್ಳುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಗಳ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ದೆಹಲಿ ಕ್ಯಾಬಿನೆಟ್ ಕಡತಕ್ಕೆ ಸಹಿ ಹಾಕಲು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳಾದ ಸುಭಾಶ್ ಚಂದ್ರ, ಯಶ್ ಪಾಲ್ ಗಾರ್ಗ್ ರನ್ನು ಅರವಿಂದ್ ಕೇಜ್ರಿವಾಲ್ ಸರ್ಕಾರ ಅಮಾನತುಗೊಳಿಸಿತ್ತು.

7. ಸೇನಾ ಯೋಧರ ಗುಂಡಿಗೆ 2 ಉಗ್ರರು ಬಲಿ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಯೋಧರ ಗುಂಡಿಗೆ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿರುವ ಉಗ್ರರು ಲಷ್ಕರ್ ಇ ತೊಯ್ಬಾ ಸಂಘಟನೆಗೆ ಸೇರಿದ್ದು, ಹಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಅಡಗಿ ಕುಳಿತಿರುವುದಾಗಿ ತಿಳಿದುಬಂದಿತ್ತು. ಹೀಗಾಗಿ ಇಂದು ಕಾರ್ಯಾಚರಣೆಗಿಳಿದಿದ್ದ ಭಾರತೀಯ ಭದ್ರತಾ ಪಡೆ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ.

8. ಪಂಜಾಬ್ ನಲ್ಲಿ ಅಪಘಾತ, 9 ಜನ ಸಾವು

ಖಾಸಗಿ ಬಸ್ಸೊಂದು ಜಟಕಾ ಬಂಡಿಗೆ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಸಾವನ್ನಪ್ಪಿ 15 ಮಂದಿ ಗಾಯಗೊಂಡಿರುವ ಘಟನೆ ಪಂಜಾಬ್ ನ ಅಮೃತಸರದಲ್ಲಿ ನಡೆದಿದೆ. ಕಾಮರ್ಿಕರನ್ನು ಹೊತ್ತು ಸಾಗುತ್ತಿದ್ದ ಜಟಕಾ ಬಂಡಿಗೆ ಹಿಂದಿನಿಂದ ಖಾಸಗಿ ಬಸ್ಸು ಗುದ್ದಿದ್ದು, ಸ್ಥಳದಲ್ಲೇ 9 ಜನ ಸಾವನ್ನಪ್ಪಿದ್ದಾರೆ. ಇನ್ನು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

9. ಅಗ್ರಿಗೋಲ್ಡ್ ಕಂಪನಿಯ ಆಸ್ತಿ ಹರಾಜಿಗೆ ಹೈಕೋರ್ಟ್ ಆದೇಶ

ಲಕ್ಷಾಂತರ ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿರುವ ಅಗ್ರಿಗೋಲ್ಡ್ ಕಂಪೆನಿಯ ಆಸ್ತಿಯನ್ನು ಹರಾಜು ಹಾಕುವಂತೆ ಹೈದರಾಬಾದ್ ಹೈಕೋಟರ್್ ಆದೇಶ ನೀಡಿದೆ. ಸಕರ್ಾರ ಮುಟ್ಟುಗೋಲು ಹಾಕಿರುವ 3,500 ಕೋಟಿ ರೂಪಾಯಿ ಮೌಲ್ಯದ ಖಾಲಿ ಕಟ್ಟಡಗಳು ಮತ್ತು ಇತರ ಆಸ್ತಿಯನ್ನು ಇ-ಹರಾಜಿನ ಮೂಲಕ ಮಾರಾಟ ಮಾಡಲು ಕೋರ್ಟ್ ಆದೇಶ ನೀಡಿದೆ.

10. ಪ್ರಧಾನಿ ನಿವಾಸಕ್ಕಿಂತ ಸೋನಿಯಾ ನಿವಾಸವೇ ದೊಡ್ಡದು!

ದೆಹಲಿಯ 7 ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ನಿವಾಸಕ್ಕಿಂತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ 10 ಜನ್ ಪಥ್ ರಸ್ತೆಯಲ್ಲಿರುವ ಅಧಿಕೃತ ಮನೆ ತುಂಬಾ ದೊಡ್ಡದಂತೆ. ಈ ವಿಷಯ ಆರ್ ಟಿಐ ಮಾಹಿತಿಯಿಂದ ಬಯಲಾಗಿದ್ದು ದೇವ್ ಆಶೀಶ್ ಭಟ್ಟಾಚಾರ್ಯ ಎಂಬವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದ ಪ್ರಶ್ನೆಗೆ ಈ ಉತ್ತರ ದೊರೆತಿದೆ. ಕಾಂಗ್ರೆಸ್ ವರಿಷ್ಠೆ ಸೋನಿಯಾ ನಿವಾಸ 15,181 ಚದರ ಅಡಿ ವಿಸ್ತಾರ ಹೊಂದಿದ್ದರೆ, ಪ್ರಧಾನಿ ಮೋದಿ ಅವರ ಆರ್ ಸಿಆರ್ ನಿವಾಸ 14,101 ಚದರ ಅಡಿ ವಿಸ್ತಾರ ಹೊಂದಿದೆ.

DEADLY ACCIDENT CAUGHT NEAR FREEDOM PARK ON CAMERA

https://www.youtube.com/watch?v=pGIj9atJJ2o

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...