ರತನ್ ಟಾಟಾ ಹೇಳಿದರು ಅನ್ನದ ಪಾಠ ಜರ್ಮನಿಯಲ್ಲಿ ಪಾಠ ಕಲಿಸಿದ್ದಳಂತೆ ಓರ್ವ ಅಜ್ಜಿ..!

0
137

ಅನ್ನದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ ಎಂಬುದು ನಮ್ಮ ಕಡೆಯ ಮಾತು. ಆದರೆ ಅದನ್ನು ಇತ್ತೀಚೆಗೆ ಮರೆಯಲಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆ. ಏಕೆಂದರೆ ದೊಡ್ಡ ದೊಡ್ಡ ಪಾರ್ಟಿಗಳ ಹೆಸರಲ್ಲಿ ಶ್ರೀಮಂತರೆನಿಸಿಕೊಂಡವರು ಅಪಾರ ಪ್ರಮಾಣದಲ್ಲಿ ಆಹಾರವನ್ನು ನಷ್ಟ ಮಾಡುತ್ತಿದ್ದಾರೆ. ಆದರೆ ಅದರ ಬೆಲೆ ಶ್ರೀಮಂತರಿಗೆ ಅರ್ಥವಾಗುವುದಿಲ್ಲ. ಆದರೆ ಬಡವ ಎನಿಸಿಕೊಂಡಾತ ಒಂದು ಅಗಳು ಅನ್ನದ ಬೆಲೆಯನ್ನು ಅರಿತುಕೊಂಡಿರುತ್ತಾನೆ. ಇಂಥದ್ದೇ ಒಂದು ಘಟನೆ ಭಾರತ ಕಂಡ ಶ್ರೇಷ್ಠ ಉದ್ಯಮಿ ರತನ್ ಟಾಟಾರವರ ಜೀವನದಲ್ಲೂ ನಡೆದಿತ್ತಂತೆ. ಅದನ್ನು ಅವರೇ ಟ್ವಿಟ್ ಮೂಲಕ ಹೇಳಿಕೊಂಡಿದ್ದಾರೆ.
ಒಂದು ಬಾರಿ ನಾವು ಜರ್ಮನಿಗೆ ಹೊಗಿದ್ದೆವು. ಅದು ಪ್ರಪಂಚದ ಅಭಿವೃದ್ಧಿ ದೇಶಗಳಲ್ಲಿ ಒಂದು. ಆಗ ಊಟ ಮಾಡಲು ಅಲ್ಲಿನ ಹೋಟೆಲ್ ಗೆ ಹೋದೆವು. ಅಲ್ಲಿ ಹೆಚ್ಚಿನ ಸಂಖ್ಯೆಯ ಟೇಬಲ್ ಗಳು ಖಾಲಿ ಇದ್ದದ್ದನ್ನು ಕಂಡು ಸ್ಥಿತಿವಂತರೇ ಆಗಿದ್ದರಿಂದ ಅವರೆಲ್ಲರೂ ತಮಗಿಷ್ಟದ ಹಾಗೂ ಹೆಚ್ಚು ಹೆಚ್ಚು ಪ್ರಮಾಣದ ಊಟ ತರಿಸಿಕೊಂಡು ಪ್ಲೇಟ್ ಪೂರ್ತಿ ಖಾಲಿ ಮಾಡಿ ಹೋಗುತ್ತಿದ್ದರು.
ಆದರೆ, ಒಂದು ಮೂಲೆಯ ಟೇಬಲ್ ನಲ್ಲಿ ಕೆಲ ವೃದ್ಧರು ಅಗತ್ಯ ಪ್ರಮಾಣದಲ್ಲಿ ಊಟ ತರಿಸಿಕೊಂಡು ಅದನ್ನು ಹಂಚಿಕೊಂಡು ತಿನ್ನುತ್ತಿದ್ದರು. ನಮ್ಮ ದೇಶದಲ್ಲಿ ಮಾತ್ರ ಇಂತಹ ಸಂಸ್ಕೃತಿಯನ್ನು ಕಂಡಿದ್ದ ನಮಗೆ ಜರ್ಮನಿಯಂತಹ ಶ್ರೀಮಂತ ದೇಶದಲ್ಲೂ ಹಂಚಿಕೊಂಡು ತಿನ್ನುತ್ತಿದ್ದರಲ್ಲ ಎನ್ನಿಸಿತು. ಬಳಿಕ ನಾವು ನಮ್ಮದೇ ಸ್ಟೇಟಸ್ ಗೆ ತಕ್ಕಂತೆ ತಿನಿಸುಗಳನ್ನು ತರಿಸಿಕೊಂಡು ತಿಂದೆವು.
ನಮ್ಮವರಿಗೆ ಕೆಲವು ತಿನಿಸುಗಳು ಇಷ್ಟವಾಲಿಲ್ಲ, ಆದ್ದರಿಂದ ಜಾಸ್ತಿ ಆಯಿತೆಂದು ಆಹಾರವನ್ನು ಪ್ಲೇಟ್ ನಲ್ಲಿಯೇ ಬಿಟ್ಟರು. ನಾವು ಅಲ್ಲಿಂದ ಹೊರಡುವ ಸಮಯದಲ್ಲಿ ವೃದ್ಧ ಮಹಿಳೆಯೊಬ್ಬರು ನಮ್ಮ ಬಳಿ ಬಂದು ಆಹಾರವನ್ನು ಹಾಗೆ ವೆಸ್ಟ್ ಮಾಡಬಾರದು ಎಂದಳು. ನಮ್ಮವರು ಅದು ನಮ್ಮಿಷ್ಟ ಎಂದು ಹೇಳಿದರು. ತಕ್ಷಣವೇ ಆಕೆ ಯಾರಿಗೂ ಪೋನ್ ಮಾಡಿದಳು.
ಕೆಲವೇ ನಿಮಿಷಗಳ ಅಂತರದಲ್ಲಿ ಪೊಲೀಸರು ಬಂದರು. ನಡೆದಿದ್ದನು ಕೇಳಿ ನಮಗೆ 50 ಯೂರೋ ದಂಡ ಹಾಕಿದರು. ಮರುಮಾತನಾಡದೇ ಕಟ್ಟಿದೆವು. ನಂತರ `ಹಣ ನಿಮ್ಮದಷ್ಟೇ, ಆದರೆ ಇಲ್ಲಿಯ ಸಂಪನ್ಮೂಲಗಳಲ್ಲ. ಇನ್ನೊಬ್ಬರು ತಿನ್ನುವುದನ್ನು ನೀವು ಹಾಳು ಮಾಡಿದ್ದೀರಿ. ಆ ಮೂಲಕ ನೀವು ನಮ್ಮ ದೇಶದ ಸಂಪತ್ತುನ್ನು ನಷ್ಟ ಮಾಡಿದ್ದೀರಿ. ದೇಶದ ಸಂಪತ್ತನ್ನು ನಷ್ಟ ಮಾಡುವ ಹಕ್ಕು ನಿಮಗಿಲ್ಲ’ ಎಂದು ಆ ಪೊಲೀಸರು ಹೇಳಿ ಹೋದರು.
ನಾವು ವಿವಿಧ ಸಮಾರಂಭಗಳನ್ನು ಸ್ಟೇಟಸ್ ಎಂಬ ಹೆಸರಿನಲ್ಲಿ ಎಷ್ಟು ಆಡಂಬರದಿಂದ ಮಾಡುತ್ತೇವೆ….? ಅಪಾರ ಪ್ರಮಾಣದ ಆಹಾರವನ್ನು ನಷ್ಟ ಮಾಡುತ್ತೇವೆ. ಆದರೆ ಕೆಲ ದೇಶದ ಜನರಿಗೆ ಒಂದು ಹೊತ್ತಿನ ಊಟವೂ ಸಿಗುತ್ತಿಲ್ಲ. ನಮ್ಮ ದೇಶದ ಎಷ್ಟೋ ಜನರಿಗೂ ಕೂಡಾ ಸೂಕ್ತ ಆಹಾರ ಸಿಗುತ್ತಿಲ್ಲ. ಆದ್ದರಿಂದ ರತನ್ ಟಾಟಾರವರು ಹೇಳಿದ ಈ ಪಾಠ ನಮಗೆ ಮಾದರಿಯಾಗಬೇಕಿದೆ.

  • ರಾಜಶೇಖರ ಜೆ .

Like us on Facebook  The New India Times

POPULAR  STORIES :

ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!

ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?

ಐಶ್ ಮೇಲೆ ಅಭಿ ಗುರ್ರ್ ಅಂದಿದ್ದು ಇದಕ್ಕಾ… ?

ಆಕ್ರಮಣಶೀಲ ಆಟಗಾರ ಕೋಹ್ಲಿ `ಪೇಂಟಿಂಗ್’ ಮೂಲಕ ಎಲ್ಲರನ್ನೂ ನಗಿಸಬಲ್ಲ!

ಅಜರ್ ಯಾಕೆ ತನ್ನ ಕಾಲರ್ ನ ಮೇಲಕ್ಕೆತ್ತಿ ಆಟವಾಡ್ತಿದ್ರು ಗೊತ್ತಾ..?

2012 ಕಟ್ಟುಕಥೆ..! 2050 ಅಸಲಿ ಕಥೆ..! ನಡುಗಿಸುತ್ತದೆ ಈ ವರದಿ..!

ಹುಲಿದೈವ ಸ್ಪರ್ಶಿಸಿದ್ರೆ ಸಾವು ಖಚಿತ….!

400 ವರ್ಷಗಳ ಹಿಂದಿನ ಶವಗಳು ಕೊಳೆತಿಲ್ಲ..! ಈ ಗುಹೆ ಪ್ರವೇಶಿಸುವುದಕ್ಕೆ ಎಂಟೆದೆ ಬೇಕು..!?

 

LEAVE A REPLY

Please enter your comment!
Please enter your name here