ಈ ಸ್ಟೋರಿ ನೋಡಿದ್ಮೇಲೆ ಹೀಗೂ ಹುಚ್ಚು ಅಭಿಮಾನಿಗಳಿರ್ತಾರಾ..? ಅನ್ನೊ ಪ್ರಶ್ನೆ ಕಾಡದೇ ಇರೊಲ್ಲ. ಯಾಕಂದ್ರೆ ಈ ಮಹಾನುಭವ ಮಾಡಿದ ಪ್ಲಾನ್ ಅಂತದ್ದು..! ಸಾಮಾನ್ಯವಾಗಿ ನಾವು ನೀವೆಲ್ಲಾ ತಮ್ಮ ನೆಚ್ಚಿನ ನಟ ನಟಿಯರನ್ನ ನೋಡೋಕೋ ಅಥವಾ ಮಾತ್ನಾಡ್ಸೊಕೊ ಕಾತರ ಇರುತ್ತೆ ಬಿಡಿ. ಎಲ್ಲೊ ಒಮ್ಮೆ ಶೂಟಿಂಗ್ ವೇಳೆ ಕಾಣಿಸಿಕೊಂಡಾಗ ಅವ್ರತ್ರ ಒಂದು ಸೆಲ್ಫಿ ತಗೊಂಡ್ ಖುಷಿಯಾಗಿ ಇರ್ತಿವಿ. ಅದ್ಬಿಟ್ರೆ ಬೇರೆ ಏನು ಮಾಡೋಕು ಆಗೊಲ್ಲ. ಆದ್ರೆ ಇಲ್ಲೋರ್ವ ಭೂಪ ತನ್ನ ನೆಚ್ಚಿನ ನಟಿನ ಮಾತ್ನಾಡುಸ್ಬೇಕು ಅಂತ ಡಿಸೈಡ್ ಮಾಡಿ ಅವಳ ಆದಾಯ ತೆರಿಗೆ ಖಾತೆಯನ್ನೆ ಹ್ಯಾಕ್ ಮಾಡಿ ಈಗ ಪೊಲೀಸ್ ಅಥಿತಿಯಾಗಿದ್ದಾನೆ ನೋಡಿ..! ವೃತ್ತಿಯಲ್ಲಿ ಅರೆ ಸೇನಾಪಡೆ ಅಧಿಕಾರಿಯಾಗಿರೊ 26 ವರ್ಷದ ಮನೀಷ್ ತಿವಾರಿ, ಬಾಲಿವುಡ್ ಬೆಡಗಿ ಕರೀನಾ ಕಪೂರ್‍ನ ಪಕ್ಕಾ ಅಭಿಮಾನಿಯಂತೆ. ಈಕೆಯೊಂದಿಗೆ ಮಾತ್ನಾಡುಸ್ಬೇಕು ಅಂತ ಡಿಸೈಡ್ ಮಾಡಿ ಹೇಗಾದ್ರೂ ಮಾಡಿ ತನ್ನ ನೆಚ್ಚಿನ ನಟಿಯ ಫೋನ್ ನಂಬರ್ ಪಡಿಲೇ ಬೇಕು ಅಂದ್ಕೊಂಡ ಆಸಾಮಿ ಕರೀನಾ ಕಪೂರ್ ಅವರ 2016-17ನೇ ಸಾಲಿನ ಆದಾಯ ತೆರಿಗೆ ಖಾತೆಯನ್ನೆ ಹ್ಯಾಕ್ ಮಾಡಿದ್ದಾನೆ..! ಆನ್‍ಲೈನ್‍ನಲ್ಲಿ ಕರೀನಾ ಅವರ ಪ್ಯಾನ್ ನಂಬರ್ ಪಡ್ಕೊಂಡು, ಅದರ ಮೂಲಕ ವಿವಿಧ ಐಪಿ ಅಡ್ರೆಸ್ ಕಲೆಕ್ಟ್ ಮಾಡಿ ಅವರ ಆದಾಯ ತೆರಿಗೆ ಖಾತೆ ಹ್ಯಾಕ್ ಮಾಡಿದ್ದಾನೆ..! ಮನೀಷ್ ತಿವಾರಿ ಇಷ್ಟೆಲ್ಲಾ ಸರ್ಕಸ್ ಮಾಡಿದ್ದು ಯಾಕೆ ಗೊತ್ತಾ..? ಕೇವಲ ಆದಾಯ ತೆರಿಗೆ ಖಾತೆಯಲ್ಲಿರೋ ಮೊಬೈಲ್ ನಂಬರ್ ಪಡಿಯೋಕೆ..! ಆದ್ರೆ ವಿಪರ್ಯಾಸ ಅಂದ್ರೆ ಈ ವ್ಯಕ್ತಿ ತನ್ನ ಆಸೆ ಈಡೇರಿಕೆಗೂ ಮುನ್ನ ಪೊಲೀಸರ ಅಥಿತಿಯಾಗಿದ್ದಾನೆ ನೋಡಿ..! ಕಳೆದ ಕೆಲವು ದಿನಗಳ ಹಿಂದೆ ತನ್ನ ಆದಾಯ ತೆರಿಗೆ ಖಾತೆ ಹ್ಯಾಕ್ ಆಗಿದೆ ಅಂತ ಕರಿನಾ ಕಪೂರ್ ಅವರ ಚಾರ್ಟರ್ ಅಕೌಂಟೆಡ್ ಪ್ರಕಾಶ್ ಠಕ್ಕರ್‍ನಿಂದ ಮಾಹಿತಿ ಪಡೆದು ಪೊಲೀಸ್ ಸ್ಟೇಷನ್‍ಗೆ ಕಂಪ್ಲೆಂಟ್ ಕೊಟ್ಟಿದ್ರು. ಕಂಪ್ಲೆಂಟ್ ರಿಜಿಸ್ಟರ್ ಮಾಡ್ಕೊಂಡು ಹ್ಯಾಕರ್‍ನ ಬೆನ್ನತ್ತಿದ ಪೊಲೀಸರಿಗೆ ಆತನನ್ನು ಹುಡ್ಕೋಕೆ ಹೆಚ್ಚು ದಿನಗಳೇನು ತಗೊಂಡಿಲ್ಲ. ಹ್ಯಾಕರ್ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ ಪೊಲೀಸರಿಗೆ ಒಂದು ಅಚ್ಚರಿಯ ವಿಷಯ ಗೊತ್ತಾಗಿದೆ. ಕರೀನಾ ಕಪೂರ್ ಅವರ ಅಪ್ಪಟ ಅಭಿಮಾನಿಯಾದ ಮನೀಷ್ ತಿವಾರಿ ಅವರೊಂದಿಗೆ ಮಾತನಾಡಲು ಅವರ ಆದಾಯ ತೆರಿಗೆ ಖಾತೆಯನ್ನು ಹ್ಯಾಕ್ ಮಾಡಲಾಯ್ತು ಎಂದಿದ್ದಾನೆ..! ಇನ್ನೊಂದು ಅಚ್ಚರಿ ಅಂದ್ರೆ ಈ ಅಭಿಮಾನಿ ಕೇಂದ್ರ ಸಶಸ್ತ್ರ ಮೀಸಲು ಪಡೆಯ ಅಧಿಕಾರಿಯಾಗಿದ್ದು, ಛತ್ತೀಸ್‍ಘಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾನೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಅಂತೂ ಮುಗೀತು ಜಿಯೋ ವೆಲ್‍ಕಮ್ ಆಫರ್..! ಹಾಗಾದ್ರೆ ಮುಂದಿನ ಪ್ಲಾನ್ ಏನು..?
ಇನ್ಮುಂದೆ ವಾಹನ ಅಡ್ಡ ಹಾಕಿ ಡಿಎಲ್ ಪರಿಶೀಲನೆ ಮಾಡುವಂತಿಲ್ಲ..!
ಭಾರತೀಯರೇ..! ಮತ್ತೊಮ್ಮೆ ಕೆಲಸ ಕಳೆದುಕೊಳ್ಳಲಿದ್ದೀರಿ ಎಚ್ಚರ..!!
ಕಿರಿಕ್ ಪಾರ್ಟಿ ಟ್ರೇಲರ್‍ನ ಕಿರಿಕ್ ಕನ್ನಡಿಗರು ಮಾಡುದ್ರೆ ಹೇಗಿರುತ್ತೆ ಗೊತ್ತಾ..?
ಈ ವಾರ ಯಾರೂ ಪ್ರಥಮ್‍ನ ನಾಮಿನೇಟ್ ಮಾಡಲಿಲ್ಲ ಯಾಕೆ ಗೊತ್ತಾ.? ಇದರ ಹಿಂದಿನ ರಹಸ್ಯ ಬಯಲು.!!!
ಹಗಲಿನಲ್ಲಿ ಟಾಪ್ ಸಾಫ್ಟ್ ವೇರ್ ಇಂಜಿನಿಯರ್.! ರಾತ್ರಿ ಆದ್ರೆ ಸೀರೆ ಧರಿಸುವ ಗಂಡ..!
ಉಪೇಂದ್ರ ಹಾಗೂ ಯಶ್ ಬಗ್ಗೆ ಹಂಸಲೇಖ ಹೇಳಿದ್ದಾದ್ರೂ ಏನು..?
ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ ಈ ಪುಟ್ಟ ಹೃದಯ…!! Real Love Story