ಬೆಳ್ಳಿ ಪರದೆ ಮೇಲೆ ಮೂಡಿ ಬರ್ತಾ ಇದೆ ಚಿನ್ನದ ಹುಡುಗನ ಯಶೋಗಾಥೆ..!

Must read

ಈ ಬಾರಿಯ ರಿಯೋ ಪ್ಯಾರಾಲಿಂಪಿಕ್‍ನಲ್ಲಿ ದಾಖಲೆ ಜಿಗಿತದೊಂದಿಗೆ ಚಿನ್ನ ಬೇಟೆಯಾಡುವ ಮೂಲಕ ದೇಶಕ್ಕೆ ಕೀರ್ತಿ ತಂದ ತಮಿಳುನಾಡಿನ ಕುವರ ಮರಿಯಪ್ಪನ್ ತಂಗವೇಲು ಅವರ ಜೀವನದ ಕಥೆಯಾಧಾರಿತ ಸಿನಿಮ ಸದ್ಯದಲ್ಲೆ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲಿದೆ..! ರಿಯೋ ಪ್ಯಾರಾಲಿಂಪಿಕ್‍ನ ಹೈಜಂಪ್ ಸ್ಪರ್ಧೆಯಲ್ಲಿ ದಾಖಲೆ ಜಿಗಿತದೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದ್ದ ಮರಿಯಪ್ಪನ್ ಅವರ ಜೀವನ ಅಷ್ಟು ಸುಲಭವಾಗಿ ಏನು ಇರ್ಲಿಲ್ಲ..! ಅಪಘಾತವೊಂದರಲ್ಲಿ ತನ್ನ ಒಂದು ಕಾಲು ಕಳೆದುಕೊಂಡಾಗ ಕೈ ಹಿಡಿಬೇಕಾಗಿದ್ದ ಆತನ ತಂದೆ ಮಗ ಮತ್ತು ಪತ್ನಿಯನ್ನು ಕೈ ಬಿಟ್ಟಿದ್ದ. ಹೀಗಿರುವಾಗ ತನ್ನ ತಾಯಿಯನ್ನು ಸಾಕಲು ಮರಿಯಪ್ಪನ್ ಇಟ್ಟಿಗೆ ಕಾರ್ಖಾನೆ, ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡ. ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಮರಿಯಪ್ಪನ್ ತನ್ನ ಒಂಟಿ ಕಾಲಿನ ಸಹಾಯದಿಂದಲೆ ಹೈ ಜಂಪ್ ತರಬೇತಿ ಪಡೆದ. ಕರ್ನಾಟಕದ ಪ್ಯಾರಾ ಅಥ್ಲೀಟ್ ಕೋಚ್ ಸತ್ಯನಾರಾಯಣ ಅವರ ಗರಡಿಯಲ್ಲಿ ಪಳಗಿದ ಮರಿಯಪ್ಪನ್ ರಿಯೋನಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ. ಮರಿಯಪ್ಪನ್ ಜೀವನದ ಏಳು ಬೀಳಿನ ಕುರಿತಾಗಿ ಸಿನಿಮಾ ನಿರ್ಮಾಣ ಮಾಡೋಕೆ ಹೊರಟಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಪುತ್ರಿ ಐಶ್ವರ್ಯಾ ಧನುಶ್, ಚಿತ್ರವನ್ನು ಇಂಗ್ಲೀಷ್ ಹಾಗೂ ತಮಿಳಿನಲ್ಲಿ ನಿರ್ಮಿಸಲಿದ್ದಾರೆ ಎಂದು ಬಾಲಿವುಡ್ ಸ್ಟಾರ್ ಶಾರೂಕ್ ಟ್ವಿಟರ್‍ನಲ್ಲಿ ಟ್ವೀಟ್ ಮಾಡಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಅಂತೂ ಮುಗೀತು ಜಿಯೋ ವೆಲ್‍ಕಮ್ ಆಫರ್..! ಹಾಗಾದ್ರೆ ಮುಂದಿನ ಪ್ಲಾನ್ ಏನು..?

ಇನ್ಮುಂದೆ ವಾಹನ ಅಡ್ಡ ಹಾಕಿ ಡಿಎಲ್ ಪರಿಶೀಲನೆ ಮಾಡುವಂತಿಲ್ಲ..!

ಭಾರತೀಯರೇ..! ಮತ್ತೊಮ್ಮೆ ಕೆಲಸ ಕಳೆದುಕೊಳ್ಳಲಿದ್ದೀರಿ ಎಚ್ಚರ..!!

ಕಿರಿಕ್ ಪಾರ್ಟಿ ಟ್ರೇಲರ್‍ನ ಕಿರಿಕ್ ಕನ್ನಡಿಗರು ಮಾಡುದ್ರೆ ಹೇಗಿರುತ್ತೆ ಗೊತ್ತಾ..?

ಈ ವಾರ ಯಾರೂ ಪ್ರಥಮ್‍ನ ನಾಮಿನೇಟ್ ಮಾಡಲಿಲ್ಲ ಯಾಕೆ ಗೊತ್ತಾ.? ಇದರ ಹಿಂದಿನ ರಹಸ್ಯ ಬಯಲು.!!!

ಹಗಲಿನಲ್ಲಿ ಟಾಪ್ ಸಾಫ್ಟ್ ವೇರ್ ಇಂಜಿನಿಯರ್.! ರಾತ್ರಿ ಆದ್ರೆ ಸೀರೆ ಧರಿಸುವ ಗಂಡ..!

ಉಪೇಂದ್ರ ಹಾಗೂ ಯಶ್ ಬಗ್ಗೆ ಹಂಸಲೇಖ ಹೇಳಿದ್ದಾದ್ರೂ ಏನು..?

ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿ ಈ ಪುಟ್ಟ ಹೃದಯ…!! Real Love Story

- Advertisement -spot_img

More articles

- Advertisement -spot_img

Latest article