ಚಾಲೆಂಜಿ ಸ್ಟಾರ್ ದರ್ಶನ್ ಅಭಿನಯದ 50ಚಿತ್ರ ‘ಕುರುಕ್ಷೇತ್ರ’ ಶೂಟಿಂಗ್ ನಡೀತಾ ಇದೆ. ಈ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.
ಈ ನಡುವೆ ದರ್ಶನ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಕರಿಯ’ ಬಿಡುಗಡೆಯಾಗಿ ಇಂದಿಗೆ 15 ವರ್ಷ.
ದರ್ಶನ್‍ಗೆ ಸ್ಯಾಂಡಲ್‍ವುಡ್‍ನಲ್ಲಿ ಗಟ್ಟಿ ನೆಲೆ ಕಲ್ಪಿಸಿದ ಚಿತ್ರ ಕರಿಯ. 2003ರ ಜನವರಿ 3ರಂದು ತೆರೆಕಂಡಿತ್ತು. ಪ್ರೇಮ್ ನಿರ್ದೇಶನದ ಈ ಚಿತ್ರಕ್ಕೆ ಆನೆಕಲ್ ಬಾಲರಾಜ್ ಬಂಡವಾಳ ಹಾಕಿದ್ದರು. ಅಭಿನಯಶ್ರೀ ಚಿತ್ರದ ನಾಯಕಿ. ಗುರುಕಿರಣ್ ಸಂಗೀತ ನೀಡಿದ್ದರು.