ಕಿತ್ತು ತಿನ್ನೊ ಬಡತನ ಇರುತ್ತೆ..! ನಾವು ಪಟ್ಟ ಕಷ್ಟ ನಮ್ಮ ಮಕ್ಕಳು ಪಡಬಾರ್ದು ಅಂತ ತಂದೆ-ತಾಯಿ ಸಾಲ ಮಾಡಿ ಮಕ್ಕಳನ್ನು ಓದಿಸ್ತಾರೆ..! ಪದವಿ, ಸ್ನಾತಕೋತ್ತರ ಪದವಿಯನ್ನೂ ಮಾಡ್ತಾರೆ..! ಮಕ್ಕಳ ವಿದ್ಯಾಭ್ಯಾಸ ಮುಗೀತಾ ಇದ್ದಂಗೆ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡ್ತಾರೆ..! ಅಬ್ಬಾ.., ನಮ್ಮ ಮಗ/ಮಗಳ ವಿದ್ಯಾಭ್ಯಾಸ ಮುಗೀತಲ್ಲಾ..ವಿದ್ಯಾವಂತ ಮಕ್ಕಳಿಗೆ ಕೆಲಸ ಸಿಗುತ್ತೆ..! ಅವರ ಲೈಫೂ ಚೇಂಜ್ ಆಗಿ ಬಿಡುತ್ತೆ..! ನಮ್ಮ ಸಾಲನೂ ತೀರುತ್ತೆ..! ಮಕ್ಕಳ ಜೊತೆ ಆರಾಮಾಗಿ ಕಾಲ ಕಳೆಯ ಬಹುದೆಂದು ಪೋಷಕರು ಯೋಚಿಸ್ತಾರೆ..! ಕಷ್ಟಪಟ್ಟು ಪದವಿ, ಸ್ನಾತಕೋತ್ತರ ಪದವಿಯನ್ನು ಪಡೆದ ಬಡ ಮಕ್ಕಳು ಕೂಡ ಕೆಲಸ ಗಿಟ್ಟಿಸಿಕೊಂಡು ನೆಮ್ಮದಿಯ ಜೀವನ ನಡೆಸೋ ಕನಸನ್ನು ಕಂಡಿರ್ತಾರೆ..! ಆದರೆ ಪದವಿ, ಸ್ನಾತಕೋತ್ತರ ಪದವಿಯನ್ನು ಪಡೆದವರಿಗೆಲ್ಲಾ ಕೆಲಸ ಸಿಗುತ್ತಾ..?!
ಇಲ್ಲಾ ಸ್ವಾಮಿ, ಇಲ್ಲವೇ ಇಲ್ಲ..! ಡಿಗ್ರಿ, ಮಾಸ್ಟರ್ ಡಿಗ್ರಿ ಮಾಡಿದವರು ಕೆಲಸಕ್ಕಾಗಿ ಅಲೆದು ಅಲೆದು ಸುಸ್ತಾಗಿ, ಬೇರೆ ದಾರಿಯೇ ಇಲ್ಲದೆ `ಭಿಕ್ಷಾಟನೆ’ ಮಾಡಿ ಜೀವನ ನಡೆಸ್ತಾ ಇದ್ದಾರೆ..!
ಏನು..? ಪದವೀಧರರು, ಸ್ನಾತಕೋತ್ತರ ಪದವೀಧರರು ಭಿಕ್ಷೆ ಬೇಡ್ತಾ ಇದ್ದಾರ..? ಎಂದು ನೀವು ಅಚ್ಚರಿ ಪಡಬಹುದು..! ಇದು ಅಚ್ಚರಿ ಅನಿಸಿದರೂ ಕಟು ಸತ್ಯ ಸ್ವಾಮಿ..! ಇಡೀ ಭಾರತದ ಲೆಕ್ಕಾಚಾರ ಸದ್ಯಕ್ಕೆ ಬೇಡ..! ಕರ್ನಾಟಕದ ಕಥೆಯೇ ದೊಡ್ಡದಿದೆ..! ನಮ್ಮ ಕರ್ನಾಟಕದಲ್ಲಿಯೇ 169 ಪದವಿಧರರು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆಂದು ತಿಳಿದು ಬಂದಿದೆ..!
ನಮ್ಮಲ್ಲಿ 125 ಪದವೀಧರರು ಮತ್ತು 44 ತಾಂತ್ರಿಕ ಅಥವಾ ಸ್ನಾತಕೋತ್ತರ ಪದವಿಧರರು ಭಿಕ್ಷೆ ಬೇಡ್ತಾ ಇದ್ದಾರೆಂದು ಜನಗಣತಿ ಆಯೋಗ ಬಿಡುಗಡೆ ಮಾಡಿರುವ 2011ರ ಜನಗಣತಿಗೆ ಸಂಬಂಧಿಸಿದ `ಉದ್ಯೋಗರಹಿತರ ಶಿಕ್ಷಣಮಟ್ಟ ಹಾಗೂ ಮುಖ್ಯ ಚಟುವಟಿಕೆ’ ಎಂಬ ವರದಿಯಲ್ಲಿ ಬಹಿರಂಗವಾಗಿದೆ..! ಅಷ್ಟೇ ಅಲ್ಲದೇ ಈ ವರದಿ ಹೇಳುವಂತೆ ಕರ್ನಾಟಕದಲ್ಲಿ 10,682 ಭಿಕ್ಷುಕರು ಇದ್ದಾರಂತೆ..! ಈ 10,682 ಭಿಕ್ಷುಕರಲ್ಲಿ 2,547 ಜನ ಅಕ್ಷರಸ್ತರೇ..! ಈ ಅಕ್ಷರಸ್ತರಲ್ಲಿ 1,446 ಜನ ಹೈಸ್ಕೂಲ್, 459 ಜನರು ಎಸ್ಎಸ್ಎಲ್ಸಿ ಅಥವಾ ಪಿಯುಸಿ ಮುಗಿಸಿದವರಿದ್ದಾರೆ..! 23 ಜನ ತಾಂತ್ರಿಕ ಡಿಪ್ಲೋಮಾ ಪೂರೈಸಿದ ವಿದ್ಯಾವಂತರಾಗಿದ್ದಾರೆಂದು ವರದಿ ತಿಳಿಸಿದೆ..!
ರಾಜ್ಯದಲ್ಲಿನ ಭಿಕ್ಷುಕರಲ್ಲಿ ಹೆಚ್ಚು ಜನ ರಾಜಧಾನಿ ಬೆಂಗಳೂರಲ್ಲೇ ಇದ್ದಾರೆ..! ಬೆಂಗಳೂರಲ್ಲಿರೋ ಭಿಕ್ಷುಕರಲ್ಲಿ 77 ಜನ ಪದವಿಧರರು ಮತ್ತು 25 ಜನ ತಾಂತ್ರಿಕ ಅಥವಾ ಸ್ನಾತಕೋತ್ತರ ಪದವಿ ಪಡೆದವರಾಗಿದ್ದಾರೆ..! ಬೆಂಗಳೂರಿನಲ್ಲಿನ 206 ಭಿಕ್ಷುಕರು ಮೆಟ್ರಿಕ್ ಅಥವಾ ಪಿಯುಸಿ ಪೂರೈಸಿದವರಾಗಿದ್ದಾರೆಂಬ ಅಂಶವೂ ಕೂಡ ವರದಿಯಿಂದ ಬೆಳಕಿಗೆ ಬಂದಿದೆ..!
ಇನ್ನು ಎರಡನೇ ಸ್ಥಾನದಲ್ಲಿರೋ ಮೈಸೂರಲ್ಲಿ 9 ಪದವಿಧರರು, 3 ಸ್ನಾತಕೋತ್ತರ ಪದವಿಧರರು ಭಿಕ್ಷೆ ಬೇಡ್ತಾ ಇದ್ದಾರೆ..! ಇನ್ನು ಕೊಡಗಿನಲ್ಲಿರೋದೇ 30 ಜನ ಭಿಕ್ಷುಕರು, ಅದರಲ್ಲಿ 14 ಜನ ಶಿಕ್ಷಿತರು..!
ಈ ಪದವೀಧರ ಭಿಕ್ಷುಕರಲ್ಲಿ ಎಷ್ಟೋ ಜನ ಭಿಕ್ಷಾಟನೆಗೆ ಇಳಿಯುವ ಮೊದಲು ಕೆಲಸಕ್ಕೂ ಹೋಗಿದ್ದರು..! ಆದರೆ ಸಿಗುವ ಸಂಬಳದಿಂದ ಬದುಕುವುದು ಕಷ್ಟವಾಗಿ, ಹೆಂಡತಿ ಮಕ್ಕಳನ್ನು ಸಾಕಲಾಗದೇ ಭಿಕ್ಷೆ ಬೇಡೋಕೆ ಬಂದವರು..! ಕೆಲಸ ಮಾಡಿ ಗಳಿಸುತ್ತಿದ್ದ ಸಂಬಳಕ್ಕಿಂತ ಹೆಚ್ಚಾಗಿ ಭಿಕ್ಷಾಟನೆಯ್ಲಲ್ಲೇ ಹಣ ಸಿಗುತ್ತೆ ಅಂತ ಪದವೀಧರ ಭಿಕ್ಷುಕರೇ ನೋವಿನಿಂದ ಹೇಳ್ತಾರೆ..!
ಇದನ್ನೆಲ್ಲಾ ನೋಡ್ತಾ ಇದ್ರೆ ನಾವು ಪಡೆಯುತ್ತಿರುವ ಶಿಕ್ಷಣದ ಬಗ್ಗೆಯೇ ಅಸಹ್ಯವಾಗುತ್ತೆ..! ವಿದ್ಯಾವಂತರಾಗಿದ್ರೂ ನಿರುದ್ಯೋಗ ಕಾಡುತ್ತೆ ಅಂದ್ರೆ ತುಂಬಾ ಬೇಜಾರಾಗುತ್ತೆ..! ನಮ್ಮ ಶಿಕ್ಷಣದ ಗುಣಮಟ್ಟದಲ್ಲಿ ದೋಷ ಇದೆ. ಅದೇನೇ ಇರಲಿ ಪದವೀಧರರೂ ಭಿಕ್ಷೆ ಬೇಡ್ತಾ ಇದ್ದಾರೆಂದರೆ ಅದು ಅವರಿಗಾಗುವ ಅವಮಾನ ಅಲ್ಲ..! ಇಡೀ ರಾಜ್ಯಕ್ಕಾಗುವ ಅನುಮಾನ..! ಎಲ್ಲಾ ವಿದ್ಯಾವಂತರಿಗೂ ಸರ್ಕಾರಿ ಕೆಲಸವನ್ನೇ ನೀಡಬೇಕೆಂದಿಲ್ಲ..! ಆದರೆ ರಾಜ್ಯದಲ್ಲಿನ ಖಾಸಗಿ ಕಂಪನಿಗಳಲ್ಲಿ ಪರ ಭಾಷಿಗರನ್ನು ತುಂಬಿಸಿಕೊಳ್ಳೋಕ್ಕಿಂತ ಕನ್ನಡಿಗರಿಗೇ ಹೆಚ್ಚಿನ ಆದ್ಯತೆ ಕೊಡಬೇಕು..! ಸರ್ಕಾರವೂ ಕೂಡ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮವನ್ನು ಜಾರಿಗೆ ತರಲೇ ಬೇಕು..!
ಸಾಲ-ಗೀಲ ಮಾಡಿ ಪದವಿ, ಸ್ನಾತಕೋತ್ತರ ಪದವಿ ಪಡೆದಿರ್ತಾರೆ..ಅವರ ವಿದ್ಯೆಗೆ ಬೆಲೆ ಇಲ್ಲವೇ..? ದುಡಿಯುವ ಯೋಗ್ಯತೆ ಇದ್ದರೂ ಅವರು ಭಿಕ್ಷೆ ಬೇಡ್ಬೇಕೆ..?! ನಿರುದ್ಯೋಗ ಸಮಸ್ಯೆಯೇ ಭಿಕ್ಷಾಟನೆಗೆ ಮುಖ್ಯ ಕಾರಣ..! ಬೇಡದ ನಿಯಮಗಳನ್ನು ಜಾರಿಗೆ ತರುವುದು, ಮತ ಓಲೈಕೆಗಾಗಿ `ಭಾಗ್ಯ’ಗಳನ್ನು ನೀಡುವ ಸರ್ಕಾರಗಳು `ಉದ್ಯೋಗ ಭಾಗ್ಯ’ ಕರುಣಿಸಿ ಕನಿಷ್ಟಪಕ್ಷ ಶಿಕ್ಷಿತರಾದರೂ ಭಿಕ್ಷಾಟನೆಯನ್ನು ಬಿಟ್ಟು ಕೆಲಸ ಮಾಡುವಂತಾಗಬೇಕಿದೆ..!
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಈ ವೀಡಿಯೋ ನೋಡುವಾಗ ನಿಮ್ಮ ಬೆರಳನ್ನು `ಸ್ಕ್ರೀನ್’ ಮೇಲೆ ಇಟ್ಕೊಳ್ಳಿ..!
ಅಂದು ಇಡೀ ವಿಶ್ವವೇ ಭಾರತಕ್ಕೆ ತಲೆಬಾಗಿತ್ತು..!
ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!
ತರಕಾರಿ ತಿನ್ನುವ ಮುನ್ನ ಈ ವಿಡಿಯೋ ನೋಡಿ..!
ಅವಳು ಪ್ರೀತಿಸಿದ್ಲು, ಅವನು ಸುಮ್ಮನಿದ್ದ..! ಅವರು ಸತ್ತೇ ಹೋದ್ರು…!
ತರ್ಲೆ ನನ್ಮಕ್ಳು ಬತ್ತಾವ್ರೆ…! ಎದ್ದೂಬಿದ್ದೂ ನಗೋಕೆ ರೆಡಿ ಆಗ್ರಪ್ಪ..!
ದಾನ ಮಾಡುವುದರಲ್ಲಿ ಅಜೀಂ ಪ್ರೇಮ್ ಜಿ ನಂ 1..! ಎರಡನೇ ಸ್ಥಾನದಲ್ಲಿದ್ದಾರೆ ಕರ್ನಾಟಕದ ಉದ್ಯಮಿ..!
ಆ ಫೇಸ್ ಬುಕ್ ಪುಟ ಅಷ್ಟೊಂದು ವೈರಲ್ ಆಗಿದ್ದೇಕೆ ಗೊತ್ತಾ..!