500, 1000ರೂ. ನೋಟುಗಳು ಬ್ಯಾನ್ ಆದ್ವೇ..? ನೋ ಟೆನ್ಷನ್..

0
51

ಇಡೀ ರಾಷ್ಟ್ರದಲ್ಲೇ ಮೊಟ್ಟಮೊದಲ ಬಾರಿಗೆ ಭ್ರಷ್ಟಾಚಾರ ಹಾಗೂ ಖೋಟಾನೋಟು ಚಲಾವಣೆಯನ್ನು ತಡೆಯಲು ದಿಟ್ಟ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ ಮಂಗಳವಾರ ಮಧ್ಯರಾತ್ರಿಯಿಂದಲೇ ದೇಶದಲ್ಲಿ ಚಲಾವಣೆಯಲ್ಲಿದ್ದ 500 ಮತ್ತು 1000ರೂ. ಮುಖ ಬೆಲೆಯ ನೋಟುಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿದ್ದರು. ಮೋದಿ ಅವರ ಈ ದಿಟ್ಟ ನಿರ್ಧಾರದಿಂದ ಇಡೀ ರಾಷ್ಟ್ರವೇ ದಿಗ್ಭ್ರಮೆಗೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ನೋಟು ನಿರ್ಬಂಧದ ಕುರಿತಾಗಿ ಯಾವುದೇ ಪೂರ್ವ ಮಾಹಿತಿಯನ್ನು ತಿಳಿಸಿದೆ ಗೌಪ್ಯವಾಗಿ ಈ ರಿಸ್ಕ್ ತೆಗೆದ ಪ್ರಧಾನಿ ಮೋದಿ ಅವರ ನಡೆಗೆ ಇಡೀ ರಾಷ್ಟ್ರದಾದ್ಯಂತ ಶ್ಲಾಘನೆ ವ್ಯಕ್ತವಾಗ್ತಾ ಇದೆ. ಇನ್ನು ನೋಟು ನಿಷೇಧವಾಗಿ ಇನ್ನು 24 ಗಂಟೆಯೂ ಕಳೆದಿಲ್ಲ ಆದರೆ ಸಾರ್ವಜನಿಕರ ಸಮಸ್ಯೆ ಮಾತ್ರ ಹೇಳತೀರದಂತಾಗಿದೆ. ಆದೇಶ ಹೊರಡಿಸಿದ್ದ ಕೆಲವೇ ಗಂಟೆಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದ ಈ ಸುದ್ದಿಯಿಂದ ಎಚ್ಚೆತ್ತ ವ್ಯಾಪಾರಿಗಳು ಗ್ರಾಹಕರು ತಂದ 500, 1000 ನೋಟುಗಳನ್ನು ಕೊಂಡುಕೊಳ್ಳಲು ಹಿಂದೇಟು ಹಾಕ್ತಾ ಇದ್ದಾರೆ..! ಇದರಿಂದ ಸಾರ್ವಜನಿಕರು ಚಿಲ್ಲರೆ ಹಣಕ್ಕಾಗಿ ಪರದಾಡುವ ಸ್ಥಿತಿ ಬಂದಿದೆ. ಆದ್ರೆ ನೆನಪಿರಲಿ ಕೇಂದ್ರ ಸರ್ಕಾರ ನೋಟು ಬದಲಾವಣೆ ಮಾಡಿಕೊಳ್ಳಲು ಇನ್ನು ೫೦ ದಿನ ಕಾಲಾವಕಾಶ ನೀಡಿದೆ. ಅಂದರೆ ನವೆಂಬರ್ 10 ರಿಂದ ಡಿಸೆಂಬರ್ 30ರ ವರೆಗೆ ಕಾಲಾವಕಾಶ ನೀಡಿದೆ.

ನೋ ಟೆನ್ಷನ್…
ಇನ್ನು ಕೇಂದ್ರ ಸರ್ಕಾರ 500 ಹಾಗೂ 1000ರೂ. ನೋಟುಗಳನ್ನು ಬ್ಯಾನ್ ಮಾಡಿದೆ ಈಗ ನಾವೆನಪ್ಪಾ ಮಾಡೋದು..? ಅಂತ ತಲೆ ಕೆಡುಸ್ಕೊಳ್ದಲೇ ಆರಾಮಾಗಿರಿ..

ಯಾಕಂದ್ರೆ ನೋಟು ಬದಲಾವಣೆ ಮಾಡ್ಕೊಳ್ಳೋಕೆ ಸರ್ಕಾರ ಡಿ. 30ರ ವರೆಗೆ ಕಾಲಾವಕಾಶ ನೀಡಿದೆ..

ನಿಮ್ಮ ಖಾತೆಗೆ ಹಣ ಠೇವಣಿಗೆ ಡಿ. 30, ವಿನಿಮಯಕ್ಕೆ ನ. 24 ಕೊನೇ ದಿನ

ನೋಟು ಬದಲಾವಣೆಗೆ ನೀವು ಮಾಡ್ಬೇಕಾದದ್ದು ಇಷ್ಟೆ..
ನೆನಪಿರ್ಲಿ.. ನಾಳೆಯಿಂದ ಬ್ಯಾಂಕ್ ತೆರೆದಿರತ್ತೆ.. ಆದ್ದರಿಂದ ನೀವು 500 ಅಥವಾ 1000ರೂ ನೋಟುಗಳನ್ನು ಬ್ಯಾಂಕ್‍ಗಳಿಗೆ ಮರು ಪಾವತಿ ಮಾಡ್ಬೋದು.. ಬ್ಯಾಂಕ್‍ಗೆ ಬೇಟಿ ಕೊಡೋಕು ಮುನ್ನ ನಿಮ್ಮ ಓಟರ್ ಐಡಿ, ಪಾನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಇನ್ಯಾವುದೇ ಅಧಿಕೃತ ಗುರುತಿನ ಚಿಟಿಯನ್ನು ಖಡ್ಡಾಯವಾಗಿ ಕೊಂಡೊಯ್ಯಿರಿ.
ಇನ್ನು ನೋಟು ನಿಷೇಧ ಆದರೂ ಕೂಡ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಬಂಕ್, ಔಷಧಿ ಮಳಿಗೆ, ಏರ್ ಟಿಕೇಟ್, ರೈಲ್ವೇ, ಸರ್ಕಾರಿ ಬಸ್‍ಗಳಲ್ಲಿ ಇನ್ನು 72 ಗಂಟೆಗಳ ಕಾಲ ಪಡೆಯಲಾಗುತ್ತೆ.
ಒಂದು ವೇಳೆ ಮೆಡಿಕಲ್‍ಶಾಪ್, ಪೆಟ್ರೋಲ್ ಬಂಕ್ ಹಾಗೂ ಇತರೆ ಸರ್ಕಾರಿ ಸ್ವಾಮ್ಯದ ಭಾಗಗಳಲ್ಲಿ 500 ಮತ್ತು 1000ರೂ ಮುಖ ಬೆಲೆಯ ನೋಟುಗಳನ್ನು ಕೊಳ್ಳಲು ನಿರಾಕರಿಸಿದ್ದಲ್ಲಿ ಕೂಡಲೇ ದೂರು ನೀಡಬಹುದು ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ ಆದ್ದರಿಂದ ಯಾವುದೇ ಭಯ ಪಡುವ ಅಗತ್ಯ ಇಲ್ಲ.
ಒಂದು ವೇಳೆ ಡಿಸೆಂಬರ್ 31ರ ಒಳಗಾಗಿ ನೀವು ನೋಟು ಬದಲಾವಣೆ ಮಾಡ್ಕೊಂಡಿಲ್ವ..? ಅದಕ್ಕೂ ಚಿಂತೆ ಮಾಡ್ಬೇಡಿ ಯಾಕಂದ್ರೆ ಸರ್ಕಾರ ಮುಂದಿನ ಮಾರ್ಚ್ 31.ರ ವರೆಗೂ ಕಾಲಾವಕಾಶ ನೀಡುತ್ತೆ. ಈ ವೇಳೆ ನೀವು ನಿಮ್ಮ ಗುರುತಿನ ಚೀಟಿಯ ಜೊತೆಗೆ ವಿಳಂಬ ಮಾಡಿದಕ್ಕಾಗಿ ಕಾರಣ ತಿಳಿಸಿದರೆ ಸಾಕು.
ಹಾಗೆಯೇ ಆಸ್ಪತ್ರೆಗಳಲ್ಲಿ ಬಿಲ್ ಪಾವತಿ ಮಾಡೋಕು ಸಹ ನೀವು 500 ಮತ್ತು 1000ರೂ. ನೋಟುಗಳನ್ನು ನೀಡಬಹುದಾಗಿದೆ. ಆಸ್ಪತ್ರೆಯಲ್ಲಿ ಬಿಲ್ ಪಾವತಿಸಲು ಈ ತಿಂಗಳ 11ರ ವರೆಗೂ 500, 1000ರೂ. ನೋಟುಗಳನ್ನು ನೀಡಬಹುದು.
ಬೇರೆಯವರ ಹಣವನ್ನು ಬದಲಾಯಿಸಬೇಡಿ ಹುಷಾರ್..! ಯಾಕಂದ್ರೆ ನೀವು ಬೇರೆಯವರ 500 ಅಥವಾ 1000ರೂ ನೋಟುಗಳನ್ನು ಬ್ಯಾಂಕ್‍ಗಳಲ್ಲಿ ಬದಲಾಯಿಸಿದ್ದೇ ಆದಲ್ಲಿ ನಿಮ್ಮ ಗುರುತು ಬ್ಯಾಂಕ್‍ಗಳಲ್ಲಿ ದಾಖಲಾಗುತ್ತೆ.. ಕಪ್ಪು ಹಣ ಹೊರ ತರುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿರೋ ಕಾರಣ ಬೇರೆಯವರ ಹಣ ಬದ್ಲಾಯಿಸೋಕು ಮುನ್ನ ಎಚ್ಚರ.
ಇನ್ನು 500, 1000 ಮುಖಬೆಲೆಯ ನೋಟುಗಳು ನಿಷೇಧವಾಗಿದ್ರೂ ಕೂಡ ನಿಮ್ಮ ವ್ಯವಹಾರಕ್ಕೆ ಯಾವುದೇ ಅಡ್ಡಿ ಇರೊಲ್ಲ ನೋಡಿ.. ಯಾಕಂದ್ರೆ ನಿಮ್ಮ ಡಿಡಿ, ಚೆಕ್, ಕ್ರೆಡಿಟ್ ಕಾರ್ಡ್, ನೆಟ್, ಮೊಬೈಲ್ ಬ್ಯಾಂಕಿಂಕ್ ಎಲ್ಲವೂ ಅಸ್ಥಿತ್ವದಲ್ಲಿರುತ್ತೆ.
ನಿಮ್ಮ ಖಾತೆಗೆ ಹಣ ಠೇವಣಿ ಮಾಡಿಕೊಳ್ಳಲು ಡಿ.30 ಕೊನೆಯ ದಿನವಾದ್ದರಿಂದ ನಿಮ್ಮ 500 ಹಾಗೂ 1000ರೂ ಮುಖಬೆಲೆಯ ನೋಟು ನೀಡಲು ನ.10ರಿಂದ ಡಿ.30 ಕೊನೆಯ ದಿನವಾಗಿರುತ್ತೆ. ಇದಕ್ಕೆ ಯಾವುದೇ ಮಿತಿ ಇರೋದಿಲ್ಲ.
ಇನ್ನು ವ್ಯವಹಾರದ ಮಿತಿಯನ್ನ ಸದ್ಯದ ಮಟ್ಟಿಗೆ ನವೆಂಬರ್ ೧೧ರಿಂದ ಎಟಿಎಂಗಳಲ್ಲಿ ದಿನಕ್ಕೆ 2 ಸಾವಿರ ರೂಗಳನ್ನು ಮಾತ್ರ ತೆಗೆಯಬಹುದಾಗಿದೆ. ಅಲ್ಲದೇ ಬ್ಯಾಂಕ್‍ಗಳಲ್ಲಿ ದಿನವಹಿ 10 ಸಾವಿರದಂತೆ ವಾರಕ್ಕೆ 20 ಸಾವಿರ ರೂ. ನಗದು ಮಿತಿ ನಿಗದಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಹೆಚ್ಚಿಸಲು ನಿರ್ಧರಿಸಿದ್ದಾರೆ.
ದೇಶದಲ್ಲಿ ಕಪ್ಪು ಹಣ ಹರಿವಿಗೆ ಪ್ರಮುಖ ಕಾರಣವಾಗಿದ್ದ 1000ರೂ ಮುಖಬೆಲೆಯ ನೋಟುಗಳನ್ನು ಶಾಶ್ವತ ನಿಷೇಧಕ್ಕೆ ಸರ್ಕಾರ ಚಿಂತನೆ ನಡೆಸಿದ್ದು ಅದರ ಸ್ಥಾನಕ್ಕೆ 2000 ಮುಖಬೆಲೆಯ ನೋಟುಗಳನ್ನು ಇದೇ ತಿಂಗಳಿಂದ ಚಲಾವಣೆಗೆ ಬರಲಿದೆ.

exchange

Like us on Facebook  The New India Times

POPULAR  STORIES :

ಬಂಕ್‍ಗಳಲ್ಲಿ 500, 1000ರೂ. ನೋಟು ಪಡೆಯದಿದ್ದರೆ ಕಠಿಣ ಕ್ರಮ: ಸಚಿವ ಧರ್ಮೇಂದ್ರ ಪ್ರಧಾನ್.

ಅಮೇರಿಕಾ ಅಧ್ಯಕ್ಷೀಯ ಚುನಾವಣೆ: ಡೊನಾಲ್ಡ್ ಟ್ರಂಪ್‍ಗೆ ಐತಿಹಾಸಿಕ ಜಯ.

ಮನಸ್ಸಿಗೆ ಬಂದ ಫೇಸ್‍ಬುಕ್ ಗೆಳತಿ ಮನೆ ಬೆಳಗುವಳಾ.? | ರಿಯಲ್ ಸ್ಟೋರಿ

ತಮ್ಮ ಗುರುವಿಗಾಗಿ ಸ್ಟಂಟ್ ಮಾಡಲು ಒಪ್ಪಿಕೊಂಡಿದ್ರು: ರವಿವರ್ಮ

ಮಾಸ್ತಿಗುಡಿ ದುರಂತ: ಐವರ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ..!

12 ವರ್ಷದ ಅಪ್ರಾಪ್ತ ಬಾಲಕನಿಂದ 18 ವರ್ಷದ ಯುವತಿ ತಾಯಿಯಾದ್ಲು..!

ವಿಲನ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ ಏನ್ ಗೊತ್ತಾ..?

LEAVE A REPLY

Please enter your comment!
Please enter your name here