ಸಸ್ಯಹಾರಿ ಮೊಸಳೆಯನ್ನು ನೋಡಿದ್ದೀರಾ..? ಕಾಸರಗೋಡಿನ ಕುಂಬಳೆಯ ಅನಂತಪುರ ದೇವಾಲಯದ ಕೊಳದಲ್ಲಿ ಸಸ್ಯಹಾರಿ ಮೊಸಳೆ ಇದೆ.
ಕೊಳದ ಮಧ್ಯದಲ್ಲಿರುವ ಕೇರಳದ ಈ ಏಕೈಕ ದೇವಾಲಯದ ರಕ್ಷಣೆಯನ್ನು ಈ ಮೊಸಳೆ ಮಾಡುತ್ತಿದೆ ಎಂದು ಹೇಳಲಾಗಿದೆ. ಇಲ್ಲಿರುವ ಮೊಸಳೆ ಬೇರೆ ಮೊಸಳೆಗಳಂತೆ ಮಾಂಸಹಾರಿ ಅಲ್ಲ. ಇದು ಶುದ್ಧ ಸಸ್ಯಹಾರಿ, ಅದರಲ್ಲೂ ಇದು ತಿನ್ನುವುದು ನೇವೇಧ್ಯವನ್ನು.
ಬಬಿಯಾ ಎಂದು ಈ ಮೊಸಳೆಗೆ ಹೆಸರಿಟ್ಟಿದ್ದಾರೆ. ಹಿಂದೆ ಬ್ರಿಟಿಷರು ಟೆಂಟ್ ಹಾಕಿದ್ದಾಗ ಗುಂಡು ಹಾರಿಸಿ ಮೊಸಳೆಯನ್ನು ಕೊಂದಿದ್ದರಂತೆ. ಅದನ್ನು ಕೊಂದ ಅಧಿಕಾರಿ ಸ್ವಲ್ಪ ದಿನದಲ್ಲೇ ಸಾವನ್ನಪ್ಪಿದನಂತೆ. ಪವಾಡ ಸದೃಶ ರೀತಿಯಲ್ಲಿ ಮೊಸಳೆ ಬದುಕಿ ಬಂತೆಂದು ಸಹ ಹೇಳಲಾಗಿದೆ.
ಕೊಳದಲ್ಲಿ ನೀರು ಕಡಿಮೆ ಆದಾಗ ಇದು ಬಂಡೆಗಳ ಮೇಲೆ ಕಾಣಿಸಿಕೊಳ್ಳುತ್ತಿದೆ. ದಿನ ಅರ್ಚಕರು ನೀಡುವ ಪ್ರಸಾದವನ್ನು ತಿನ್ನುತ್ತದೆ.