ಕೇರಳದ ಅಲಪ್ಪುಝ ಜಿಲ್ಲೆಯಲ್ಲಿರುವ ಪೆರುಂಬಲಂ ಎಂಬ ಸಣ್ಣ ದ್ವೀಪದಂತಿರುವ ಪುಟ್ಟ ಹಳ್ಳಿ.ಇಲ್ಲಿ ವಾಸವಾಗಿರುವ ೧೪ ವರ್ಷದ ಅರ್ಜುನ್ ಸಂತೋಷ್ ಎಂಬವನು ದಿನನಿತ್ಯ ತನ್ನ ಹಳ್ಳಿಯಿಂದ 3 ಕಿ.ಮೀ ಈಜಿ ಶಾಲೆಗೆ ಹೋಗುತ್ತಾನೆ.ಈ ಹಳ್ಳಿಯಿಂದ ಪಟ್ಟಣಕ್ಕೆ ಸೇರಿಸುವ ಯಾವುದೇ ಸೇತುವೆಗಳಿಲ್ಲ.ಕಳೆದ 25 ವರ್ಷಗಳಲ್ಲಿ 700 ಮೀ ನ ಸೇತುವೆಗಾಗಿ ಅದೆಷ್ಟು ಮನವಿ ಸಲ್ಲಿಸಿದರೂ ಇಲ್ಲೀ ತನಕ ಏನೂ ಕ್ರಮ ಕೈಗೊಂಡಿಲ್ಲ.
ಅರ್ಜುನ್ ತನ್ನ ಶಾಲೆಯ ಬ್ಯಾಗ್ನಲ್ಲಿ ಈಜುಡುಗೆಯನ್ನಿರಿಸಿಕೊಳ್ಳುತ್ತಾನೆ ಹಾಗೂ ನಿತ್ಯ ಈಜಿ ಕೊಂಡೇ ಶಾಲೆಗೆ ಹೋಗುತ್ತಾನೆ ಯಾಕಂದರೆ ಅರ್ಜುನ್ ಹೇಳೋ ಪ್ರಕಾರ ಇರುವ ಒಂದೆರಡು ದೋಣಿಗಳನ್ನು ತುಂಬಾ ಹೊತ್ತು ಕಾದು ಹೋಗಬೇಕು ಮತ್ತು ದೋಣಿಯಲ್ಲಿ ಪ್ರಯಾಣಿಕರು ಸಿಕ್ಕಾಪಟ್ಟೆ ಹಾಗೂ ಅದು ತೀರಾ ಚಿಕ್ಕದಾಗಿದ್ದು ಪ್ರಯಾಣ ಮಾಡಿ ತಲಪಲು ಸರಿ ಸುಮಾರು 1 ರಿಂದ 2 ಗಂಟೆ ಅವಧಿ ಬೇಕಾಗುತ್ತದೆ;ಅಷ್ಟರಲ್ಲಾಗಲೇ ಶಾಲೆ ಅರ್ಧ ಶುರುವಾಗಿರುತ್ತದೆ.ಇದು ನನ್ನ ಚಿಂತೆಗೆ ಮೂಲ ಕಾರಣ ಎನ್ನುತ್ತಾನೆ ಅರ್ಜುನ್.
ಇಲ್ಲಿಯ ಜನರಿಗೆ ನಗರಕ್ಕೆ ಸಂಪರ್ಕ ಕಲ್ಪಿಸಲು ಸೇತುವೆಯ ಅಗತ್ಯ ತೀರ ಅವಶ್ಯಕವಾಗಿದೆ ಇದೊಂದು ಅನಾರೋಗ್ಯದ ತುರ್ತು ಪರಿಸ್ಥಿತಿಯಲ್ಲಿ ಒಂದು ದೊಡ್ದ ತೊಡಕಾಗಿ ಪರಿಣಮಿಸುತ್ತದೆ ಎಂದು ಅಲ್ಲಿಯ ಹಳ್ಳಿಗರು ತಿಳಿಸುತ್ತಾರೆ.ಕಳೆದ ವರ್ಷ ಹೆಚ್ಚು ಕಡಿಮೆ 50 ಜನರು ಈ ತೊಂದರೆಯ ಕಾರಣದಿಂದ ಸಾವನ್ನಪ್ಪಿದಾರೆ ಎಂದೂ ಅಲ್ಲಿನ ಹಳ್ಳಿಜನರು ನೊಂದ ಮನಸ್ಸಿನಿಂದ ತಿಳಿಸಿದರು.
ಸ್ನೇಹಿತರೆ! ಈ ಹಳ್ಳಿಯವರಂತೆ,ಪುಟ್ಟ ಪೋರ ಅರ್ಜುನ್ ನಂತೆ ಅದೆಷ್ಟು ಜನ ನಮ್ಮ ದೇಶದಲ್ಲಿ ಇಂತಹ ಪರಿಸ್ಥಿತಿಯನ್ನೆದುರಿಸುತ್ತಿರುವರೋ?? ಜನನಾಯಕರೆನಿಸಿಕೊಂಡವರು ದೇವರಂತೆ ಕಣ್ಣು ಮುಚ್ಚಿ ಕುಳಿತರೆ ದಿವ್ಯ ದರ್ಶನ ವಾಗುವುದೆ?ಸತ್ಯದ ಅರಿವಾದರೂ ಇವರು ಕಣ್ಣು ಬಿಡೋದು ಇಲ್ಲ ಜನ ಸಾಮಾನ್ಯರಿಗೆ ನ್ಯಾಯ ಸಿಗೋದು ಇಲ್ಲ ಬಿಡಿ.
- ಸ್ವರ್ಣಲತ ಭಟ್
POPULAR STORIES :
ಸೈನಾ ಸಾಧನೆಗೆ ಕಾರಣ ಕೊಹ್ಲಿಯಂತೆ.. ಅದ್ಹೇಗೆ…?
ಮಗು ಕಳೆದುಕೊಂಡರೂ ಅವರು ಅಪ್ಪ ಅಮ್ಮ ಆದ್ರು..!
ಬಡವರಿಗೆ ಉಚಿತ ಚಿಕಿತ್ಸೆ ನೀಡದ 5 ಖಾಸಗಿ ಆಸ್ಪತ್ರೆಗಳಿಗೆ 700 ಕೋಟಿ ದಂಡ!
ಹ್ಯಾಟ್ರಿಕ್ ಹೀರೊನ `ಖದರ್’ ಸಿನಿಮಾಗೆ ಸಿಕ್ಕಳು ನಾಯಕಿ..!
ಜಗ್ಗುದಾದ ಮೂರು ದಿನದಲ್ಲಿ ಕೊಳ್ಳೆ ಹೊಡೆದ ಹಣವೆಷ್ಟು ಗೊತ್ತಾ..?
ದುಡ್ಡಿಲ್ಲ ಕಾಸಿಲ್ಲ ನೀವೆ ಒಂದು ಏರ್ ಕೂಲರ್‍ನ ಸಿದ್ದ ಮಾಡಬಹುದು..!!
ಕಿಸ್ಸಿಂಗ್ ಹಿಂದಿರೋ ಆರೋಗ್ಯ ರಹಸ್ಯವೇನು..????
ಕನ್ನಡದ ಖ್ಯಾತ ನಟ ಭಿಕ್ಷುಕನ ಗೆಟಪ್‍ನಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತಾ..?