KGF ಚಾಪ್ಟರ್ 2 ಶೂಟಿಂಗೆ ಮುಹೂರ್ತ ಫಿಕ್ಸ್..!!
ಕೆಜಿಎಫ್ ಸಿನಿಮಾ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಮಾಡಿದೆ.. ಕನ್ನಡದ ಮೊದಲ ಸಿನಿಮಾ 150 ಕೋಟಿ ದಾಟಿ ಮುಂದೆ ಹೋಗಿದೆ.. ಸಿನಿಮಾ ನೋಡಿ ಬಂದವರೆಲ್ಲ ಕೆಜಿಎಫ್ ಚಾಪ್ಟರ್ 2 ಯಾವಾಗ ಬರಲಿದೆ ಅಂತ ಪ್ರಶ್ನೆ ಮಾಡ್ತಿದ್ದಾರೆ.. ಈ ನಡುವೆ ಇಡೀ ಟೀಮ್ ಸಿನಿಮಾ ಸಕ್ಸಸ್ ಅನ್ನ ಎಂಜಾಯ್ ಮಾಡ್ತಿದೆ..
ಈಗಾಗ್ಲೇ ಚಾಪ್ಟರ್ 2ರ 15 ರಷ್ಟು ಶೂಟಿಂಗ್ ಮುಗಿದಿದೆ.. ಇನ್ನುಳಿದ ಚಿತ್ರೀಕರಣವನ್ನ ಮಾರ್ಚ್ ಎಂಡ್ ಅಥವಾ ಏಪ್ರಿಲ್ ಮೊದಲ ವಾರ ಶುರುವಾಗುವ ಸಾಧ್ಯೆತಗಳಿದ್ದು, ನಿರ್ಮಾಪಕರು ಮತ್ತೆ ಹೊಸ ಚಾಪ್ಟರ್ ಗೆ ಬೇಕಾಗಿರುವ ತಯಾರಿಯನ್ನ ಮಾಡಿಕೊಳ್ಳುವಂತೆ ಹೇಳಿದ್ದಾರೆ.. ಇನ್ನುಳಿದಂತೆ ಕೆಜಿಎಫ್ ಚಾಪ್ಟರ್ ಒಂದರಲ್ಲಿದ್ದ ಇಡೀ ತಾರಾಬಳಗ ಹಾಗು ತಂತ್ರಜ್ಞ ವರ್ಗ ಇದರಲ್ಲು ಕೆಲಸ ಮಾಡಲಿದೆ..