KGF ವಿಚಾರ..! ಪ್ರಥಮ್ ಗೆ ಹಿಗ್ಗಾಮುಗ್ಗಾ ತರಾಟೆ..!
ಬೆಂಗಳೂರು : ಬಿಗ್ ಬಾಸ್ ಸೀಸನ್ 4ರ ವಿನ್ನರ್ ಹಾಗೂ ನಟ ಪ್ರಥಮ್ ರನ್ನ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅದಕ್ಕೆ ಕಾರಣವಾಗಿರೋದು ಪ್ರಥಮ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿರುವ ಪೋಸ್ಟ್..! ನಾಳೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ “ಕೆಜಿಎಫ್” ಹಾಗೂ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ರ “ಝೀರೊ” ಎರಡೂ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗ್ತಿವೆ. ಕೆಜಿಎಫ್ ಸಿನಿಮಾ ಹಾಗೂ ಯಶ್ ರನ್ನು ಹೊಗಳುವ ಭರದಲ್ಲಿ ಪ್ರಥಮ್ ಶಾರುಖ್ ಖಾನ್ ರನ್ನ ಹೀಯಾಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನ ಗಮನಿಸಿದ ಫೇಸ್ ಬುಕ್ ಮಂದಿ ಪ್ರಥಮ್ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ.
ಪ್ರಥಮ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿರುವ ಪೋಸ್ಟ್ ಹೀಗಿದೆ…
“ಶಾರುಖ್ ಖಾನ್ ಯಾರು ಅಂತಾನೇ ಗೊತ್ತಿಲ್ಲ ನನಗೆ.ಆ ಕಪಿ ನನ್ಮಗ Sharukh Khan ಹೆಸರಿಗೆ ತಕ್ಕಂತೆ title ಇಟ್ಕೊಂಡು ಸಿನಿಮಾ ಮಾಡಿದಾನೆ…#Zero ಅಂತ…ಅವ್ನೇ ದೊಡ್ಡ ಗುಬಾಳ್ಡಿ..,ನಮ್ಮ ಕನ್ನಡ ಸಿನಿಮಾ ನಮಗೆ ಹೆಮ್ಮೆ!first day first show….ನನ್ನ ಎಲ್ಲಾ friends ಗೂ ticket ನಾನೇ ಬುಕ್ ಮಾಡಿದೀನಿ…
ಭಾರತದ ಏಕತೆಗೆ ಧಕ್ಕೆ ತರುವ ಮಾತು ಯಾರೇ ಆಡಿದ್ರೂ ಅವ್ನು zero ನೇ….!! ನಾವೆಲ್ಲಾ ನಾಳೆ ಕನ್ನಡ ಸಿನಿಮಾ ನೋಡೋಣ…ಶಾರುಖ್ ಖಾನೋ ಸೀಮೆಣ್ಣೆ ಕ್ಯಾನೋ…ಅವ್ನ ಸಿನಿಮಾ ಬೇಡ ಗುರು….”