ಕೆಜಿಎಫ್ 2.. ಇಡೀ ದೇಶವೇ ಈ ಚಿತ್ರಕ್ಕೆ ತುದಿಗಾಲಿನಲ್ಲಿ ಕಾಯುತ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗೆ ಕೆಜಿಎಫ್ 2 ತೆರೆಕಂಡು ದಾಖಲೆ ಮೇಲೆ ದಾಖಲೆ ಬರೆದಾಗಿರುತ್ತಿತ್ತು. ಆದರೆ ಕೊರೊನ ವೈರಸ್ ನಿಂದಾಗಿ ಈ ಚಿತ್ರವೂ ಸಹ ಕೊಂಚ ಲೇಟಾಗಿ ಬರಲಿದೆ. ಇನ್ನೂ ಕರೋನವೈರಸ್ ಬಂದರೂ ಸಹ ಕೆಜಿಎಫ್ ರೆಕಾರ್ಡ್ ಬೇಟೆ ನಿಂತಿಲ್ಲ. ಟೀಸರ್ ಬಿಡುಗಡೆಯಾಗುವ ಮುನ್ನವೇ ದೊಡ್ಡದೊಂದು ರೆಕಾರ್ಡನ್ನು ಕೆಜಿಎಫ್ 2 ಮಾಡಿದೆ.
ಹೌದು ನಾಳೆ (ಜ.8) ಕೆಜಿಎಫ್ ಚಾಪ್ಟರ್ 2ರ ಟೀಸರ್ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಭಾರತದಲ್ಲಿಯೇ ಯಾವ ಚಿತ್ರವೂ ಮಾಡಿರದ ರೆಕಾರ್ಡ್ ಇದೀಗ ಕೆಜಿಎಫ್ ಪಾಲಾಗಿದೆ. ಹೌದು ಯಾವುದೇ ರೀತಿಯ ಟೀಸರ್ ಬಿಡುಗಡೆ ಮಾಡುವ ಮುನ್ನವೇ ಬುಕ್ ಮೈ ಶೋ ಅಪ್ಲಿಕೇಶನ್ ನಲ್ಲಿ 2 ಲಕ್ಷ ಇಂಟರೆಸ್ಟ್ ಗಳನ್ನು ಪಡೆದುಕೊಂಡ ಭಾರತದ ಮೊದಲನೆಯ ಮತ್ತು ಏಕೈಕ ಚಿತ್ರ ಕೆಜಿಎಫ್ ಚಾಪ್ಟರ್2..!
ಕೆಜಿಎಫ್ ಮಾಡಿರುವ ಈ ದಾಖಲೆಯನ್ನು ಇದುವರೆಗೂ ಸಹ ಯಾವುದೇ ಭಾಷೆಯ ಚಿತ್ರ ಕೂಡ ಮಾಡಿಲ್ಲ. ಟೀಸರ್ ಟ್ರೈಲರ್ ಬಿಡುಗಡೆಯ ನಂತರ ಚಿತ್ರಗಳಿಗೆ ಬೇಡಿಕೆ ಹೆಚ್ಚಾದರೆ ಕೆಜಿಎಫ್2 ಗೆ ಮಾತ್ರ ಯಾವುದೇ ಟೀಸರ್ ಟ್ರೈಲರ್ ಇಲ್ಲದಿದ್ದರೂ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ಟೀಸರ್ ಬಿಡುಗಡೆ ಗೂ ಮುನ್ನ ಇಷ್ಟು ದೊಡ್ಡ ಮಟ್ಟದ ದಾಖಲೆ ನಿರ್ಮಿಸುತ್ತಿರುವ ಈ ಚಿತ್ರ ಟೀಸರ್ ಟ್ರೈಲರ್ ಬಿಡುಗಡೆಯಾಗಿ, ಚಿತ್ರ ಬರುವ ಹೊತ್ತಿಗೆ ಎಷ್ಟು ಇಂಟರೆಸ್ಟ್ ಗಳನ್ನು ಕಲೆಹಾಕಬಹುದು ಎಂಬುದನ್ನು ಊಹಿಸಿಕೊಳ್ಳುವುದು ಸಹ ಕಷ್ಟ.. ಒಟ್ಟಿನಲ್ಲಿ ಕನ್ನಡಿಗರು ಮಾಡಿರುವ ಈ ಚಿತ್ರ ದೇಶದಲ್ಲಿ ಎಷ್ಟೊಂದು ದೊಡ್ಡಮಟ್ಟದ ರೆಕಾರ್ಡ್ ಸೃಷ್ಟಿಸುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.