ಪ್ರಿಯಾಂಕ ಖರ್ಗೆ ಹೇಳಿಕೆಗೆ ಶಾಸಕ ಸಿಟಿ ರವಿ ಟಾಂಗ್

Date:

ಕಲ್ಯಾಣ ಕರ್ನಾಟಕ ಅಭಿವೃದ್ದಿ ಹಣಕಾಸಿನಲ್ಲಿ ಬಿಜೆಪಿಯು 40% ಕಮಿಷನ್ ಜೊಲ್ಲು ಸುರಿಸುತ್ತಿದ್ದಾರೆ ಎನ್ನುವ ಪ್ರಿಯಾಂಕ ಖರ್ಗೆ ಹೇಳಿಕೆಗೆ ಶಾಸಕ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಪ್ರಿಯಾಂಕ ಖರ್ಗೆಯವರಿಗೆ ತನ್ನ ಕಾಲದಲ್ಲಿ ಆಗಿದ್ರೆ ಇನ್ನೂ ಜಾಸ್ತಿ ಸಿಗಬಹುದಿತ್ತೇನೋ ಅಂತಾ ಜೊಲ್ಲು ಸುರಿಸಿದರು ಅನಿಸುತ್ತೆ. 40 50 ವರ್ಷದಿಂದ ಯಾವ ಪ್ರಮಾಣದಲ್ಲಿ ಜೊಲ್ಲು ಸುರಿಸಿರಬಹುದು ಎಂಬುದು ಈ ಹೇಳಿಕೆಯಿಂದ ಗೊತ್ತಾಗುತ್ತದೆ ಎಂದು ಟಾಂಗ್ ಕೊಟ್ಟಿದ್ದಾರೆ. ಇನ್ನೂ ಚಿರತೆ ತರಿಸುವುದು ಮೋದಿ ಯೋಜನೆ ಅಲ್ಲ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿ, ಚಿರತೆ ತೆಗೆದುಕೊಂಡು ಬರುವುದು ಮೋತಿಲಾಲ್ ನೆಹರು ಅವರ ಕನಸು. ಆದ್ರೆ ಅದು ಮತ್ತಷ್ಟು ಅಡೆತಡೆಗಳನ್ನ ಎದುರಿಸಿತು ಎಂದರು. ಇನ್ನೂ ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ವಿಚಾರವಾಗಿ ಮಾತನಾಡಿ, ಇದು ಭಾರತೀಯತೆಯನ್ನ ಜೋಡಿಸೋ ಉದ್ದೇಶ ಅಲ್ಲ. ಹಿಂದು ಮತ್ತು ಹಿಂದುತ್ವದ ಬಗ್ಗೆ ದ್ವೇಷದ ಭಾಷಣ ಮಾಡೋದು. ಚುನಾವಣಾ ಸಮಯದಲ್ಲಿ ನಾನು ಹಿಂದು ಎಂದು ಹೇಳುವುದು. ಇವೆಲ್ಲಾ ಚುನಾವಣೆ ಗಿಮಿಕ್ ಎಂದು ಸಿಟಿ ರವಿ ವ್ಯಂಗ್ಯವಾಡಿದರು.

Share post:

Subscribe

spot_imgspot_img

Popular

More like this
Related

ಚಳಿಗಾಲದಲ್ಲಿ ಐಸ್ ಕ್ರೀಂ ತಿಂದರೆ ಶೀತ ಬರುತ್ತದೆಯೇ? ವೈದ್ಯರು ಹೇಳುವುದೇನು?

ಚಳಿಗಾಲದಲ್ಲಿ ಐಸ್ ಕ್ರೀಂ ತಿಂದರೆ ಶೀತ ಬರುತ್ತದೆಯೇ? ವೈದ್ಯರು ಹೇಳುವುದೇನು? ಹೊರಗೆ ಕೊರೆಯುವ...

ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ರಸ್ತೆ ಬದಿ ಪಾರ್ಕಿಂಗ್‌ಗೆ ಶುಲ್ಕ: ಜಿಬಿಎ ಹೊಸ ನಿಯಮಕ್ಕೆ ಸಜ್ಜು

ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ರಸ್ತೆ ಬದಿ ಪಾರ್ಕಿಂಗ್‌ಗೆ ಶುಲ್ಕ: ಜಿಬಿಎ ಹೊಸ ನಿಯಮಕ್ಕೆ...

ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಅಶ್ಲೀಲ ಕಾಮೆಂಟ್: ಮತ್ತಿಬ್ಬರು ಆರೋಪಿಗಳ ಬಂಧನ

ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಅಶ್ಲೀಲ ಕಾಮೆಂಟ್: ಮತ್ತಿಬ್ಬರು ಆರೋಪಿಗಳ ಬಂಧನ ಬೆಂಗಳೂರು: ನಟಿ...

ತುರ್ತು Z ಶ್ರೇಣಿ ಭದ್ರತೆ ನೀಡುವಂತೆ ಸಿಎಂ ಸೇರಿ ಕೇಂದ್ರ–ರಾಜ್ಯ ನಾಯಕರಿಗೆ ಜನಾರ್ದನ ರೆಡ್ಡಿ ಪತ್ರ

ತುರ್ತು Z ಶ್ರೇಣಿ ಭದ್ರತೆ ನೀಡುವಂತೆ ಸಿಎಂ ಸೇರಿ ಕೇಂದ್ರ–ರಾಜ್ಯ ನಾಯಕರಿಗೆ...