ನಟಿ ವಿಜಯಲಕ್ಷ್ಮಿ ಅನಾರೋಗ್ಯದ ವಿಷಯ ತಿಳಿದ ಕಿಚ್ಚ ಸುದೀಪ್ ರಿಂದ ಧನ ಸಹಾಯ..
ನಟಿ ವಿಜಯ್ ಲಕ್ಷ್ಮೀ ಅವರ ಆರೋಗ್ಯ ಕೆಟ್ಟಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಈ ಹಿಂದೆ ಸುದ್ದಿ ಪ್ರಸಾರವಾಗಿತ್ತು.. ಆಸ್ಪತ್ರೆಯ ವೆಚ್ಚ ಭರಿಸಲು ಸಾಧ್ಯವಾಗದ ಪರಿಸ್ಥಿತಿಯನ್ನ ತಲುಪಿದ್ದು ನೆರವಿನ ನಿರೀಕ್ಷೆಯಲ್ಲಿದೆ ವಿಜಯಲಕ್ಷ್ಮಿ ಅವರ ಕುಟುಂಬ..
ಈ ವಿಚಾರ ತಿಳಿಯುತ್ತಿದ್ದ ಹಾಗೆ ಚಲನಚಿತ್ರ ವಾಣಿಜ್ಯ ಮಂಡಳಿ ಸಹಾಯ ಹಸ್ತ ಚಾಚಿತ್ತು.. ಈಗ ಕಿಚ್ಚ ಸುದೀಪ್ ಕೂಡ ವಿಜಯ ಲಕ್ಷ್ಮೀ ಅವರಿಗೆ ಧನ ಸಹಾಯ ಮಾಡುವ ಮೂಲಕ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ.. ಚಿತ್ರರಂಗದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತ ಬಂದಿರುವ ಕಿಚ್ಚ ಸದ್ಯ ವಿಜಯ ಲಕ್ಷ್ಮಿ ಅವರ ಆಸ್ಪತ್ರೆ ಖರ್ಚಿಗಾಗಿ ಒಂದು ಲಕ್ಷ ನೀಡಿದ್ದಾರೆ…
ಈ ವಿಚಾರವನ್ನ ವಾಣಿಜ್ಯ ಮಂಡಳಿಯ ಕಾರ್ಯದರ್ಶಿಗಳಾದ ಭಾ.ಮ ಹರೀಶ್ ತಿಳಿಸಿದ್ದಾರೆ.. ಜೊತೆಗೆ ಸುದೀಪ್ ಅವರ ಸಹಾಯಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪರವಾಗಿ ಧನ್ಯವಾದವನ್ನ ತಿಳಿಸಿದ್ದಾರೆ..