ಕಿರಿಕ್ ಜಯಮ್ಮ..! ಮತ್ತೆ ಕ್ಯಾತೆ ತೆಗೆದ ಜಯಾಲಲಿತಾ

Date:

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರೋ ಅಮ್ಮ ಕಾವೇರಿ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದಿದ್ದಾರೆ. ಮೊದಲ ಭೇಟಿಯಲ್ಲೇ ಜಯಲಲಿತಾ ಬೇಡಿಕೆಗಳ ದೊಡ್ಡ ಮನವಿ ಪತ್ರವನ್ನು ನೀಡಿದ್ದಾರೆ. ಕಾವೇರಿ ನೀರಿಗಾಗಿ ಸದಾ ಕ್ಯಾತೆ ತೆಗೆಯುತ್ತಿರುವ ತಮಿಳುನಾಡು ಈಗ ಮತ್ತೆ ತನ್ನ ಹಳೇ ವರಸೆ ಮುಂದುವರಿಸಿದೆ. ಪ್ರಧಾನಿ ಭೇಟಿ ವೇಳೆ ಅಮ್ಮಾ ಕರ್ನಾಟಕದ ವಿರುದ್ಧ ಕ್ಯಾತೆ ತೆಗೆದಿದ್ದಾರೆ. ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ಕಟ್ಟಲು ಯೋಜಿಸಿರೋ ಅಣೆಕಟ್ಟಿಗೆ ಅನುಮತಿ ನೀಡದಂತೆ ಮನವಿ ಮಾಡಿದ್ದಾರೆ. ಜೊತೆಗೆ ಕಾವೇರಿ ನೀರು ಹಂಚಿಕೆ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ.
ತಮಿಳುನಾಡಿಗೆ ಇದು ಹೊಸದೇನಲ್ಲ. ಇದಕ್ಕೂ ಮೊದಲು ಮೇಕೆದಾಟು ವಿಚಾರವಾಗಿ ಹಲವು ಬಾರಿ ಕ್ಯಾತೆ ತೆಗೆದಿತ್ತು. ಕೆಲ ತಿಂಗಳ ಹಿಂದೆ ಕರ್ನಾಟಕ ಸರ್ಕಾರ ಕುಡಿಯುವ ನೀರಿಗಾಗಿ ರಾಮನಗರದ ಮೇಕೆದಾಟು ಎಂಬಲ್ಲಿ ಕಿರು ಅಣೆಕಟ್ಟು ನಿರ್ಮಾಣಕ್ಕೆ ಮುಂದಾದಾಗ ತಮಿಳುನಾಡು ರೈತರ ಪಿತ್ತ ನೆತ್ತಿಗೇರಿತ್ತು. ಸದಾ ಕಾವೇರಿ ವಿವಾದವನ್ನೇ ಬಂಡವಾಳ ಮಾಡಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳುವ ತಮಿಳುನಾಡಿನ ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆ ವಿರೋಧಿಸಿ ಪ್ರತಿಭಟನೆ ಕೂಡ ಮಾಡಿತ್ತು. ಇದೀಗ ಮತ್ತೆ ಈ ವಿಚಾರವಾಗಿ ಕೇಂದ್ರಕ್ಕೆ ತೆರಳಿ ಕ್ಯಾತೆ ತೆಗೆದಿದೆ.
ಇನ್ನು ಇವಿಷ್ಟೇ ಅಲ್ಲದೇ ಜಯಲಲಿತಾ 29 ಪ್ರಮುಖ ಬೇಡಿಕೆಗಳ 92 ಪುಟಗಳ ಮನವಿ ಪತ್ರಗಳನ್ನು ಪ್ರಧಾನಿ ಮುಂದೆ ಇಟ್ಟಿದ್ದಾರೆ ಎನ್ನಲಾಗಿದೆ. ಅದ್ರಲ್ಲಿ ಜಯಾಲಲಿತಾರ ಪ್ರಮುಖ ಬೇಡಿಕೆಗಳು ಅಂದ್ರೆ ಕಾವೇರಿ ನದಿ ನೀರಿನ ಬಿಕ್ಕಟ್ಟು ಪರಿಹರಿಸಲು ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು, ಕರ್ನಾಟಕ ಕಾವೇರಿ ನದಿ ಮೇಲೆ ಮೇಕೆದಾಟಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟಿಗೆ ಅನುಮತಿ ನೀಡಬಾರದು, ತಮಿಳು ಭಾಷೆಯನ್ನು ರಾಷ್ಟ್ರದ ಅಧಿಕೃತ ಭಾಷೆಯಾಗಿ ಪರಿಗಣಿಸಬೇಕು, ಶ್ರೀಲಂಕಾ ಸ್ವಾಮ್ಯದಲ್ಲಿರುವ ದ್ವೀಪ ಕಟ್ಚಥೀವು ಮುಕ್ತಗೊಳಿಸುವುದು, ಬಂಧಿತ ತಮಿಳುನಾಡಿನ ಬೆಸ್ತರ ಬಿಡುಗಡೆ ಪ್ರಕ್ರಿಯೆ ತ್ವರಿತಗೊಳಿಸುವುದು.
ಇಷ್ಟೇ ಅಲ್ಲದೇ ಮುಲ್ಲಾಪೆರಿಯಾರ್ ಅಣೆಕಟ್ಟಿನ ನೀರಿನ ಶೇಖರಣಾ ಮಟ್ಟ 152 ಅಡಿಗೇರಿಸುವುದು, ಕುಡಂಕುಳಂನಲ್ಲಿ 1,000 ಮೆಗಾ ವ್ಯಾಟ್ ಸಾಮರ್ಥ್ಯದ ಅಣುಶಕ್ತಿ ಸ್ಥಾವರ ಸ್ಥಾಪನೆಗೆ ಬೇಡಿಕೆ, ಸರಕು ಮತ್ತು ಸೇವಾ ತೆರಿಗೆ ಮಸೂದೆಯಿಂದ ಪೆಟ್ರೋಲಿಯಂ ಉತ್ಪನ್ನಗಳಿಗೆ ವಿನಾಯಿತಿ ನೀಡುವುದು, ಚೆನ್ನೈನಲ್ಲಿರುವ ನೋಕಿಯಾ ಘಟಕವನ್ನು ತೈವಾನಿನ ಫಾಕ್ಸ್ ಕಾನ್ ಕಂಪನಿಗೆ ವಹಿಸಿಕೊಡಲು ಅನುಮತಿ, ಏಕರೂಪ ಸಾಮಾನ್ಯ ವೈದ್ಯಕೀಯ ಪರೀಕ್ಷೆಯಿಂದ ತಮಿಳುನಾಡಿಗೆ ಮುಕ್ತಿ ನೀಡುವುದು, ನೀಟ್ ಗೊಂದಲಕ್ಕೆ ಪರಿಹಾರ ನೀಡಲು ಮನವಿ, ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಮೇಲಿನ ನಿಷೇಧ ತೆರವಿಗೆ ಮನವಿಯನ್ನ ಸಲ್ಲಿಸಿದ್ದಾರೆ.
ಇನ್ನು ಚೆನೈ ಹಾಗು ಇನ್ನಿತರ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವಾಹ ಪರಿಹಾರ ನಿಧಿ, ಪಡಿತರ ವಿತರಣೆ ವ್ಯವಸ್ಥೆಯಡಿಯಲ್ಲಿ ಸೀಮೆಎಣ್ಣೆ ಪೂರೈಕೆಗೆ ಮನವಿ, ತಮಿಳುನಾಡಿಗೆ ವಿಶೇಷ ಪ್ಯಾಕೇಜ್, ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಒತ್ತಾಯ, ತಮಿಳುನಾಡು ಮೀನುಗಾರರ ಸಮಸ್ಯೆ ಬಗ್ಗೆ ಚರ್ಚೆಯನ್ನೂ ಮಾಡಿದ್ದಾರೆ. ಇನ್ನು ಜಯಾ ಮನವಿಗೆ ಸಕಾರಾತ್ಮಕವಾಗಿಯೇ ಸ್ಪಂದಿಸಿರೋ ಪ್ರಧಾನಿ, ಎನ್‌ಡಿಎ ಒಕ್ಕೂಟ ಸೇರಲು ಆಹ್ವಾನವನ್ನೂ ನೀಡಿದ್ದಾರಂತೆ.
ಒಟ್ಟಿನಲ್ಲಿ ಇಷ್ಟರವರೆಗೆ ಸುಮ್ಮನಿದ್ದ ತಮಿಳುನಾಡು ಸರ್ಕಾರ ಇದೀಗ ಅಮ್ಮಾ ಅಧಿಕಾರಕ್ಕೇರುತ್ತಿದ್ದಂತೆ ಮತ್ತೆ ಕ್ಯಾತೆ ಶುರುವಿಟ್ಟುಕೊಂಡಿದೆ. ಕಾವೇರಿ ನ್ಯಾಯಾಧೀಕರಣದ ತೀರ್ಪಿನ ಪ್ರಕಾರ ಪ್ರತಿವರ್ಷ 192 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಹರಿಬಿಡತ್ತೆ. ಈ ನೀರಿನ ಜೊತೆಗೆ ಹೆಚ್ಚುವರಿಯಾಗಿ ಒಂದು ಅಂದಾಜಿನ ಪ್ರಕಾರ 80, 90 ಟಿಎಂಸಿ ನೀರು ತಮಿಳುನಾಡಿಗೆ ಸೇರುತ್ತೆ. ಅಷ್ಟು ನೀರನ್ನು ಬಿಟ್ಟರೂ ಇದೀಗ ಮತ್ತೆ ಮತ್ತೆ ತಮಿಳುನಾಡು ಇದೇ ವಿಚಾರವಾಗಿ ಕಾಲು ಕೆರೆದುಕೊಂಡು ಬರುತ್ತಿದೆ.

  • ಶ್ರೀ

POPULAR  STORIES :

ಸೈನಾ ಸಾಧನೆಗೆ ಕಾರಣ ಕೊಹ್ಲಿಯಂತೆ.. ಅದ್ಹೇಗೆ…?

ಮಗು ಕಳೆದುಕೊಂಡರೂ ಅವರು ಅಪ್ಪ ಅಮ್ಮ ಆದ್ರು..!

ಬಡವರಿಗೆ ಉಚಿತ ಚಿಕಿತ್ಸೆ ನೀಡದ 5 ಖಾಸಗಿ ಆಸ್ಪತ್ರೆಗಳಿಗೆ 700 ಕೋಟಿ ದಂಡ!

ಹ್ಯಾಟ್ರಿಕ್ ಹೀರೊನ `ಖದರ್’ ಸಿನಿಮಾಗೆ ಸಿಕ್ಕಳು ನಾಯಕಿ..!

ಜಗ್ಗುದಾದ ಮೂರು ದಿನದಲ್ಲಿ ಕೊಳ್ಳೆ ಹೊಡೆದ ಹಣವೆಷ್ಟು ಗೊತ್ತಾ..?

ದುಡ್ಡಿಲ್ಲ ಕಾಸಿಲ್ಲ ನೀವೆ ಒಂದು ಏರ್ ಕೂಲರ್‍ನ ಸಿದ್ದ ಮಾಡಬಹುದು..!!

ಕಿಸ್ಸಿಂಗ್ ಹಿಂದಿರೋ ಆರೋಗ್ಯ ರಹಸ್ಯವೇನು..????

ಕನ್ನಡದ ಖ್ಯಾತ ನಟ ಭಿಕ್ಷುಕನ ಗೆಟಪ್‍ನಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತಾ..?

ಎಚ್ಚರ : `ಸಿಮ್ ಕ್ಲೊನಿಂಗ್’ ನಿಮ್ಮನ್ನು ದಿವಾಳಿ ಮಾಡಬಹುದು! ಮುಂಬೈ ಮಹಿಳೆ ಕಳೆದುಕೊಂಡ ಹಣ ಎಷ್ಟು ಗೊತ್ತಾ?

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...