ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಹೆಸರು, ಜನಪ್ರಿಯತೆ ಹೊಂದಿರೋ ನಟ ವಿಜಯ ರಾಘವೇಂದ್ರ. ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಇದೀಗ ನಟನೆಯ ಜೊತೆ ನಿರ್ದೇಶನಕ್ಕೂ ಕೈ ಹಾಕಿದ್ದಾರೆ. ವಿಜಯ ರಾಘವೇಂದ್ರ ನಿರ್ದೇಶನದ ಚೊಚ್ಚಲ ಚಿತ್ರ ‘ಕಿಸ್ಮತ್’ ರಿಲೀಸ್ ಗೆ ರೆಡಿಯಾಗಿದ್ದು ಇದೇ ನವೆಂಬರ್ 21 ರಂದು ರಿಲೀಸ್ ಆಗುತ್ತಿದೆ.
ಐದು ವರ್ಷದ ಹಿಂದೆಯೇ ಚಿತ್ರದ ಶೂಟಿಂಗ್ ಶುರುವಾಗಿತ್ತು. ಆದರೆ, ಇದೀಗ ಬಿಡುಗಡೆಗೆ ಮುಹೂರ್ತ ಸಿಕ್ಕಿದೆ ..ಇದು ವಿಜಯ ರಾಘವೇಂದ್ರ ಅವರ ಕನಸಿನ ಸಿನಿಮಾ. ಈ ಸಿನಿಮಾವನ್ನು ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ವಿಜಯರಾಘವೇಂದ್ರ ನಟಿಸಿದ್ದಾರೆ. ಸಂಗೀತ ಭಟ್ ಚಿತ್ರದ ನಾಯಕಿ. ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.