ಒಂಟೆಗೆ ಮುತ್ತಿಕ್ಕಿದಳು ಆತ ಡೈವೋರ್ಸ್ ಕೊಟ್ಟ..! ಇದು ಒಂ(ಟೆ)ದು ಮುತ್ತಿನ ಕಥೆ..!

Date:

ಡೈವೋರ್ಸ್ ಎನ್ನುವ ಪದ ಈಗ ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಪಾಶ್ಚಾತ್ಯ ದೇಶಗಳಲ್ಲಿ ಡೈವೋರ್ಸ್ ನ ಹಾವಳಿ ತುಸು ಹೆಚ್ಚು. ಆದರೆ ಸೌದಿ ಅರೇಬಿಯಾದಂತಹ ದೇಶದಲ್ಲಿ ಡೈವೋರ್ಸ್ ನ ಸುದ್ದಿ ಹೆಚ್ಚಾಗಿ ಕೇಳಿಬರುವುದಿಲ್ಲ. ಆದರೆ ಇತ್ತೀಚೆಗೆ ಒಂದು ಡೈವೋರ್ಸ್ ಮಾತ್ರ ಭಾರೀ ಸುದ್ದಿ ಮಾಡುತ್ತಿದೆ. ಅದು ಕೂಡಾ ಡೈವೋರ್ಸ್ ಗೆ ಒಂಟೆ ಕಾರಣ ಎಂದು ಗೊತ್ತಾದ ಮೇಲಂತೂ ಈ ಸುದ್ದಿ ಸಖತ್ ವೈರಲ್ ಆಗಿದೆ. ಇಷ್ಟಕ್ಕೂ ಡೈವೋರ್ಸ್ ಗೆ ಒಂಟೆ ಹೇಗೆ ಕಾರಣವಾಯಿತು ಎಂಬ ಕುತೂಹಲವಿದ್ದರೆ ಈ ಸ್ಟೋರಿ ನೋಡಿ..
ಒಂಟೆಯನ್ನು ಮುದ್ದು ಮಾಡಿದ ತಪ್ಪಿಗೆ ಮಹಿಳೆಯೋರ್ವಳು ಗಂಡನಿಂದ ಡೈವೋರ್ಸ್ ಆಗಿದ್ದಾಳೆ. ಹೌದು.. ತೋಟದ ಬೇಲಿಯೊಳಗೆ ಜನಿಸಿದ ಮುದ್ದಾದ ಒಂಟೆ ಮರಿಗೆ ನವವಿವಾಹಿತ ಪತ್ನಿ ಚುಂಬಿಸಿ ಮುದ್ದು ಮಾಡಿದ್ದಾಳೆ. ಇದನ್ನು ಕಂಡ ಪತಿಯ ತಾಯಿ ತನ್ನ ಮಗನಿಗೆ ಡೈವೋರ್ಸ್ ನೀಡುವಂತೆ ಹೇಳಿದ್ದಾಳೆ. ತಾಯಿ ಮಾತಿನಂತೆ ಮಗ ಪತ್ನಿಗೆ ಡೈವೋರ್ಸ್ ಮಾಡಿದ್ದಾನೆ.
ಸೌದಿ ಅರೇಬಿಯಾದ ಸಂಪ್ರದಾಯದ ಪ್ರಕಾರ ನವವಿವಾಹಿತ ಮಹಿಳೆ ಗಂಡನನ್ನು ಬಿಟ್ಟು ಯಾರಿಗೂ ಚುಂಬಿಸಬಾರದಂತೆ. ಹೀಗಾಗಿ ಪತಿಯ ತಾಯಿ ಸಿಟ್ಟಿಗೆದ್ದಿದ್ದಾಳೆ. ಸೊಸೆ ಸಾಮಾಜಿಕ ಹಾಗೂ ಧಾರ್ಮಿಕ ನಿಯಮಗಳನ್ನು ಉಲ್ಲಂಘಿಸಿದ್ದಾಳೆ ಎಂದು ದೂರಿದ್ದಾಳೆ. ಮಗ – ಸೊಸೆಯನ್ನು ಡೈವೋರ್ಸ್ ಮಾಡಿಸಿದ್ದಾಳೆ. ಆದರೆ ಪತಿಗೆ ತನ್ನ ತಪ್ಪಿನ ಅರಿವಾಗಿದ್ದು, ಡೈವೋರ್ಸ್ ಆದ ಪತ್ನಿಯನ್ನು ಮರುವಿವಾಹವಾಗಲು ನಿರ್ಧರಿಸಿದ್ದಾನೆ. ಆದರೆ, ಡೈವೋರ್ಸ್ ಆದ ಹೆಂಡ್ತಿ ಮತ್ತೆ ಗಂಡನನ್ನು ಮದುವೆಯಾಗಿ ಸಂಸಾರ ಮಾಡಲು ಸಿದ್ಧಳಿದ್ದಾಳೆ. ಆದರೆ ಪತಿಯ ತಾಯಿ ಅಂದ್ರೆ ಅತ್ತೆ ಇರುವ ಮನೆಯಲ್ಲಿ ವಾಸಿಸುವುದಿಲ್ಲ ಎನ್ನುತ್ತಿದ್ದಾಳೆ. ಇದನ್ನು ಗಮನಿಸುತ್ತಿದ್ದರೆ ಮುಂದೇನಾಗುತ್ತದೆ ಎಂಬ ಕುತೂಹಲ ಹೆಚ್ಚಿದೆ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಕೂಲಿಯ ಮಗ ಇವತ್ತು 100 ಕೋಟಿ ಒಡೆಯ..! ಆರನೇ ಕ್ಲಾಸ್ ಫೇಲ್ ಆಗಿದ್ದ ಹುಡುಗ ಇವತ್ತು ಕೋಟ್ಯಾಧಿಪತಿ..!

ಹುಚ್ಚು ಪರಪಂಚದಲ್ಲಿ ಹುಚ್ಚ ವೆಂಕಟ್ ಗಾನಸುಧೆ.. !

ಮಾನವನನ್ನು ಹೆಚ್ಚಾಗಿ ಕೊಲ್ಲುತ್ತಿರುವ ಜೀವಿ ಯಾವುದು ಗೊತ್ತಾ..? ವಿಷಪೂರಿತ ಹಾವುಗಳನ್ನು ಮೀರಿಸಿದ ಮಾನವ ಶತ್ರು ಯಾವುದು ಗೊತ್ತಾ..?

ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!

Share post:

Subscribe

spot_imgspot_img

Popular

More like this
Related

LPG ಬಿಕ್ಕಟ್ಟು ತೀವ್ರ: ಗ್ಯಾಸ್ ಕೊರತೆಯಿಂದ ಆಟೋ ಚಾಲಕರ ಪರದಾಟ

LPG ಬಿಕ್ಕಟ್ಟು ತೀವ್ರ: ಗ್ಯಾಸ್ ಕೊರತೆಯಿಂದ ಆಟೋ ಚಾಲಕರ ಪರದಾಟ ಹುಬ್ಬಳ್ಳಿ: ಮಧ್ಯಪ್ರಾಚ್ಯದಲ್ಲಿ...

ಭೀಕರ ಅಪಘಾತ: KSRTC ಬಸ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು!

ಭೀಕರ ಅಪಘಾತ: KSRTC ಬಸ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು! ದೊಡ್ಡಬಳ್ಳಾಪುರ:...

ಬಾಯಿಯ ದುರ್ವಾಸನೆ ಕಾಡುತ್ತಿದೆಯೇ? ಈ ಸುಲಭ ಸಲಹೆಗಳು ನಿಮಗಾಗಿ!

ಬಾಯಿಯ ದುರ್ವಾಸನೆ ಕಾಡುತ್ತಿದೆಯೇ? ಈ ಸುಲಭ ಸಲಹೆಗಳು ನಿಮಗಾಗಿ! ಪ್ರತಿಯೊಬ್ಬರೂ ಬಾಯಿ ಶುಚಿತ್ವದ...

ಸೈಬರ್ ಅಪರಾಧ ನಿಯಂತ್ರಣಕ್ಕೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ

ಸೈಬರ್ ಅಪರಾಧ ನಿಯಂತ್ರಣಕ್ಕೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ಬೆಂಗಳೂರು: ಸೈಬರ್ ಅಪರಾಧಗಳನ್ನು...