KKR vs RCB: ಕೊಲ್ಕತ್ತಾ ವಿರುದ್ಧ ಆರ್​ಸಿಬಿ ತಂಡಕ್ಕೆ 7 ವಿಕೆಟ್​ಗಳ ಜಯ..!

Date:

KKR vs RCB: ಕೊಲ್ಕತ್ತಾ ವಿರುದ್ಧ ಆರ್​ಸಿಬಿ ತಂಡಕ್ಕೆ 7 ವಿಕೆಟ್​ಗಳ ಜಯ..!

 

ಐಪಿಎಲ್ ಸೀಸನ್-18ರ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಬಾರಂಭ ಮಾಡಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಆರ್​ಸಿಬಿ ತಂಡವು 7 ವಿಕೆಟ್​ಗಳ ಜಯ ಸಾಧಿಸಿದೆ.

175 ರನ್​ಗಳ ಬೆನ್ನಟ್ಟಿದ ಆರ್​ಸಿಬಿಗೆ ಮೊದಲ ಓವರ್​ನಲ್ಲೇ ಸ್ಫೋಟಕ ಆರಂಭ ಸಿಕ್ಕಿತು. ಈ ಓವರ್​ನಲ್ಲಿ ಫಿಲ್ ಸಾಲ್ಟ್ 1 ಬೌಂಡರಿ ಹೊಡೆದರೆ, ವಿರಾಟ್ ಕೊಹ್ಲಿ ಕೂಡ ಬೌಂಡರಿಯೊಂದಿಗೆ ಖಾತೆ ತೆರೆದರು. ಈ ಓವರ್​ನಿಂದ ಒಟ್ಟು 12 ರನ್​ಗಳು ಬಂದವು. 2ನೇ ಓವರ್​ನಲ್ಲಿ ಮ್ಯಾಜಿಕಲ್ ಸ್ಪೆಲ್ ಮಾಡಿದ ಸ್ಪೆನ್ಸರ್ ಜಾನ್ಸನ್ ಕೇವಲ 5 ರನ್​ ನೀಡಿದರು. ಮೂರನೇ ಓವರ್​ನಲ್ಲಿ ಮತ್ತೆ ದಾಳಿಗಿಳಿದ ವೈಭವ್ ಆರೋರಾ ಮೇಲೆ ಸಾಲ್ಟ್ ಬೌಂಡರಿಗಳ ಮಳೆಗರೆದರು. ಈ ಓವರ್​ನಲ್ಲಿ ಸಾಲ್ಟ್ 1 ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದರೆ, ವಿರಾಟ್ ಕೊಹ್ಲಿ ಕೂಡ 2 ಬೌಂಡರಿ ಕಲೆಹಾಕಿದರು.

ವರುಣ್ ಓವರ್​ನಲ್ಲಿ 21 ರನ್
ಹೀಗಾಗಿ 3 ಓವರ್​ಗಳ ಮುಕ್ತಾಯಕ್ಕೆ ಆರ್​ಸಿಬಿ 37 ರನ್ ಕಲೆಹಾಕಿತು. ಇದೇ ವೇಳೆ ನಾಯಕ ರಹಾನೆ ತಂಡದ ಭರವಸೆಯ ಬೌಲರ್​ ವರುಣ್ ಚಕ್ರವರ್ತಿಗೆ ಬೌಲಿಂಗ್ ನೀಡಿದರು. ವರುಣ್ ಕೂಡ ಮೊದಲ 2 ಎಸೆತಗಳಲ್ಲಿ ಕೇವಲ 3 ರನ್ ಬಿಟ್ಟುಕೊಟ್ಟರು. ಆದರೆ ಉಳಿದ 4 ಎಸೆತಗಳಲ್ಲಿ ಬೌಂಡರಿಗಳು ಸಿಡಿದವು. ಮಾಜಿ ಕೆಕೆಆರ್ ಆಟಗಾರ ಫಿಲ್ ಸಾಲ್ಟ್ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ ಈ ಓವರ್​ನಲ್ಲಿ 21 ರನ್ ಕಲೆಹಾಕಿದರು.
ಐದನೇ ಓವರ್​ನಲ್ಲಿ ಉಗ್ರರೂಪ ತಾಳಿದ ವಿರಾಟ್ ಕೊಹ್ಲಿ, ಸ್ಪೆನ್ಸರ್ ಜಾನ್ಸನ್ ಎಸೆದ ಈ ಓವರ್​ನ ಮೊದಲ ಎರಡು ಎಸೆತಗಳನ್ನು ಸಿಕ್ಸರ್​ಗಟ್ಟಿದರು. ಹಾಗೆಯೇ ಈ ಓವರ್​ನ ಕೊನೆಯ ಎಸೆತವನ್ನು ಸಾಲ್ಟ್ ಬೌಂಡರಿ ಬಾರಿಸಿದರು. ಐದನೇ ಓವರ್ ಅಂತ್ಯಕ್ಕೆ ಆರ್​ಸಿಬಿ ಸ್ಕೋರ್ 75 ರನ್ ಆಗಿತ್ತು. ಆದರೆ 6ನೇ ಓವರ್​ನಲ್ಲಿ ಮಿತವ್ಯಯದ ಬೌಲಿಂಗ್ ಮಾಡಿದ ಹರ್ಷಿತ್ ರಾಣಾ ಕೇವಲ 5 ರನ್ ಬಿಟ್ಟುಕೊಟ್ಟು ಆರ್​ಸಿಬಿ ವೇಗಕ್ಕೆ ಕಡಿವಾಣ ಹಾಕಿದರು. ಆದಾಗ್ಯೂ ಆರ್​ಸಿಬಿ ಮೊದಲ 6 ಓವರ್​ಗಳಲ್ಲಿ 80 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.

Share post:

Subscribe

spot_imgspot_img

Popular

More like this
Related

ಚಿನ್ನದ ಬೆಲೆಯಲ್ಲಿ ದಿಢೀರ್‌ ಏರಿಕೆ! ಬೆಂಗಳೂರಿನಲ್ಲಿ ಎಷ್ಟಿದೆ ಗೋಲ್ಡ್‌ ಬೆಲೆ?

ಚಿನ್ನದ ಬೆಲೆಯಲ್ಲಿ ದಿಢೀರ್‌ ಏರಿಕೆ! ಬೆಂಗಳೂರಿನಲ್ಲಿ ಎಷ್ಟಿದೆ ಗೋಲ್ಡ್‌ ಬೆಲೆ? ಬೆಲೆ ಏರಲಿ,...

ಪ್ರತಿದಿನ ನಿಂಬೆ ಹಣ್ಣು ಸೇವನೆಯ 10 ಅದ್ಭುತ ಆರೋಗ್ಯ ಲಾಭಗಳು

ಪ್ರತಿದಿನ ನಿಂಬೆ ಹಣ್ಣು ಸೇವನೆಯ 10 ಅದ್ಭುತ ಆರೋಗ್ಯ ಲಾಭಗಳು ನಿಂಬೆಹಣ್ಣು ನಮ್ಮ...

ವಿಜ್ಞಾನ ಓದಿಯೂ ಮೌಡ್ಯ ನಂಬುತ್ತೀರಿ ಅಂದರೆ ನೀವು ಓದಿದ್ದೇ ದಂಡ ತಾನೇ: ಸಿಎಂ ಸಿದ್ದರಾಮಯ್ಯ ಪ್ರಶ್ನೆ

ವಿಜ್ಞಾನ ಓದಿಯೂ ಮೌಡ್ಯ ನಂಬುತ್ತೀರಿ ಅಂದರೆ ನೀವು ಓದಿದ್ದೇ ದಂಡ ತಾನೇ:...

ಐ ಡ್ರಾಪ್ ಹಾಕಿಕೊಳ್ಳುವಾಗ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ!

ಐ ಡ್ರಾಪ್ ಹಾಕಿಕೊಳ್ಳುವಾಗ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ! ಐ ಡ್ರಾಪ್‌,...