No menu items!
8.4 C
Munich
Wednesday, April 15, 2026

ಬಿಸಿಲು ಅಂತ ಹೆಚ್ಚು ಎಳನೀರು ಕುಡಿಯೋ ಮುನ್ನ ಈ ಸ್ಟೋರಿ ನೋಡಿ!

Must read

ಬಿಸಿಲು ಅಂತ ಹೆಚ್ಚು ಎಳನೀರು ಕುಡಿಯೋ ಮುನ್ನ ಈ ಸ್ಟೋರಿ ನೋಡಿ!

ಎಳನೀರು ಕುಡಿದ್ರೆ ಆರೋಗ್ಯ ಚೆನ್ನಾಗಿರತ್ತೆ ಅಂತ ಎಲ್ರೂ ಹೇಳ್ತಾರೆ. ಹೌದು ಆದರೆ ಯಾವುದೇ ಆಹಾರ ಪದಾರ್ಥಗಳನ್ನು ಸೇವಿಸಲು ಅದಕ್ಕೆಯಾದ ಕೆಲವು ನಿಯಮಗಳಿರುತ್ತವೆ. ಹಾಗೇ ಈ ಎಳನೀರು ಹೇಗೆ ಕುಡಿಯಬೇಕು? ಯಾವಾಗ ಕುಡಿಯಬೇಕು ಅನ್ನೋದು ಕೂಡ ಮುಖ್ಯ.

ತೆಂಗಿನ ನೀರನ್ನು ಆಯುರ್ವೇದದಲ್ಲಿ ಅಮೃತ ಎಂದು ಕರೆಯಲಾಗುತ್ತದೆ. ಆದರೆ ಈ ಅಮೃತವನ್ನು ಹೇಗೆ ಸೇವಿಸಬೇಕು ಎಂಬದು ನಿಮಗೆ ಗೊತ್ತಿರಬೇಕು. ಕೆಲವರು ಖಾಲಿ ಹೊಟ್ಟೆಯಲ್ಲಿ ಕುಡಿಯಲು ಹೇಳುತ್ತಾರೆ, ಕೆಲವರು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಡಿ ಎಂದು ಹೇಳುವವರೂ ಇದ್ದಾರೆ.

ಸೂರ್ಯನ ಆರ್ಬಟ ಹೆಚ್ಚಾಗಿರುವ ಈ ಸಮದಲ್ಲಿ ನೀರಿನಾಂಶವಿರುವ ಹಣ್ಣುಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಅಂದರೆ ಕಲ್ಲಂಗಡಿ, ತಾಟೆಲಿಂಗೂ, ಆರೇಂಜ್, ಕರ್ಬುಜಾ, ದ್ರಾಕ್ಷಿ ಸೇರಿದಂತೆ ಇನ್ನೂ ಕೆಲವು ಹಣ್ಣುಗಳಿವೆ. ಆದರೆ ಎಷ್ಟೇ ಹಣ್ಣುಗಳು ಬಂದರೂ ಎಳನೀರಿಗೆ ಇರುವ ಬೇಡಿಕೆ ಕಡಿಮೆಯಾಗದು. ಮಳೆಗಾಲದಲ್ಲಿ 20 ಅಥವಾ 30 ರೂ. ಇರುವ ಎಳನೀರು ಬೇಸಿಗೆಯಲ್ಲಿ 60 ಅಥವಾ 70 ರೂಪಾಯಿ ತಲುಪಿರುತ್ತದೆ. ದುಡ್ಡು ಎಷ್ಟೇ ಆಗಿರಲಿ ಆರೋಗ್ಯ ಮುಖ್ಯ ಎನ್ನುವವರೇ ಹೆಚ್ಚು. ಹಅಗಾದರೆ ವಾರದಲ್ಲಿ ಎಷ್ಟು ಎಳನೀರು ಕುಡಿದರೆ ಒಳ್ಳೆಯದು ? ಇಲ್ಲಿದೆ ಸಂಪೂರ್ಣ ಮಾಹಿತಿ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವವರೂ ಇದ್ದಾರೆ ಏಕೆಂದರೆ ನಮ್ಮ ದೇಹಕ್ಕೆ ಅಗತ್ಯವಿರುವ ಎಲೆಕ್ಟೋಲೈಟ್‌ಗಳು ಲಭ್ಯವಿರುತ್ತದೆ. ಎಳನೀರು ಥೈರಾಯ್ಡ್ ಸಮಸ್ಯೆ ಇರುವವರಿಗೆ ಸಹಾಯವಾಗುತ್ತದೆ. ಮೂತ್ರದ ಸೋಂಕಿನ ಸಮಸ್ಯೆ ಹೆಚ್ಚಾದಾಗ ಮೂರ್ನಾಲ್ಕು ದಿನ ನಾನ್ ಸ್ಟಾಪ್ ಎಳನೀರು ಕುಡಿದರೆ ಸಮಸ್ಯೆ ಸರಿ ಆಗುತ್ತದೆ. ಇನ್ನು ಬ್ಯೂಟಿ ವಿಚಾರದಲ್ಲಿ ಎಳನೀರು ತ್ವಚೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಚರ್ಮ್ ಸುಕ್ಕು ಗಟ್ಟುವುದು ಅಥವಾ ಮೊಡವೆಗಳು ಕಾಣಿಸಿಕೊಳ್ಳುವುದಿಲ್ಲ.

“ಬೇಸಿಗೆ ಶುರುವಾಗುತ್ತಿದ್ದಂತೆ ದಿನನಿತ್ಯ ನೀರು ಕುಡಿಯುವ ರೀತಿಯಲ್ಲಿ ಜನರು ಎಳನೀರು ಕುಡಿಯಲು ಶುರು ಮಾಡಿದ್ದಾರೆ.

ಮಕ್ಕಳಿಗೆ ದಿನದಲ್ಲಿ ಎರಡು ಮೂರು ಸಮಯ ಕೊಡುತ್ತಿದ್ದಾರೆ ಹಾಗೂ ದೊಡ್ಡವರು ಕೂಡ ಹಾಗೆ ಕುಡಿಯುತ್ತಿದ್ದಾರೆ. ಎಳನೀರಿನಲ್ಲಿ ಹೆಚ್ಚಾಗಿ ಪೊಟಾಶಿಯಂ,ಸೋಡಿಯಂ ಮತ್ತು ಗ್ಲುಕೋಸ್ ಅಂಶವಿರುತ್ತದೆ. ಸಕ್ಕರೆ ಕಾಯಿಲೆ, ಹೃಯದ ಸಮಸ್ಯೆ, ರಕ್ತದೊತ್ತಡ ಮತ್ತು ಕಿಡ್ನಿ ಸಮಸ್ಯೆ ಹೆಚ್ಚಾಗಿ ಪೊಟಾಶಿಯಂ ಅಂಶ ಇರುವ ಯಾವುದನ್ನೂ ಸೇವಿಸಬಾರದು. ಇಲ್ಲಿ ಹಾರ್ಟ್ ರಿಧಮ್ ಏರುಪೇರು ಮತ್ತು ಕಿಡ್ನಿ ಸಮಸ್ಯೆಗಳು ಎದುರಾಗುತ್ತದೆ. ಹೀಗಾಗಿ ಒಂದೆರಡು ಸಲ ಮಾತ್ರ ಎಳನೀರು ಕುಡಿಯುವಂತೆ ನೋಡಿಕೊಳ್ಳಿ. ಇದ್ದಕ್ಕಿದ್ದಂತೆ ವಾಂತಿ ಅಥವಾ ಲೂಸ್ ಮೋಷನ್ ಅಗುತ್ತಿದ್ದರೆ ಅವರು ಯಾವುದೇ ಕಾರಣಕ್ಕೂ ಎಳನೀರು ಕುಡಿಯಬಾರದು. ಬೇಸಿಗೆ ಕಾಲದಲ್ಲಿ ನೀವು ಎಳೆನೀರಿಗಿಂತ ನೀರು ಕುಡಿಯುವುದು ಬೆಸ್ಟ್” ಎಂದು ವೈದ್ಯರು ಹೇಳುತ್ತಾರೆ.

- Advertisement -spot_img

More articles

- Advertisement -spot_img

Latest article